Last Updated:
Krishi Tapanda: ಅವರು ಶ್ರೀಮಂತರು ಅಂತ ಗೊತ್ತೇ ಇರಲಿಲ್ಲ. ಅದೃಷ್ಟವಶಾತ್ ನಾನು ಪ್ರೀತಿಸಿದ ವ್ಯಕ್ತಿ ಶ್ರೀಮಂತರಾಗಿದ್ರು. ಶ್ರೀಮಂತ ಅಂತ ಪ್ರೀತಿ ಮಾಡಲಿಲ್ಲ! ಹಳೆಯ ರಿಲೇಷನ್ಶಿಪ್ ಬಗ್ಗೆ ಕೃಷಿ ತಾಪಂಡ ಏನಂದ್ರು?
ಕೆಲವು ತಿಂಗಳ ಹಿಂದೆ ನಟಿ ಕೃಷಿ ತಾಪಂಡ (Krishi Tapanda) ಅವರು ಖಾಸಗಿ ಫೋಟೋಗಳು ವೈರಲ್ ಆಗಿದ್ದವು. ಉದ್ಯಮಿ ಜೊತೆಗಿನ ಲವ್, ರಿಲೇಷನ್ಶಿಪ್, ಬ್ರೇಕಪ್ (Breakup) ವಿಚಾರವಾಗಿ ಕೃಷಿ ತಾಪಂಡ ಭಾರೀ ಸುದ್ದಿಯಾಗಿದ್ದರು. ಈ ಎಲ್ಲ ಘಟನೆಗಳ ನಂತರ ನಟಿ ಈಗ ಖಾಸಗಿ ಯೂಟ್ಯೂಬ್ ಚಾನೆಲ್ ಜೊತೆ ಈ ಸಂಬಂಧವಾಗಿ ಮಾತನಾಡಿದ್ದಾರೆ.
ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಕೃಷಿ ತಾಪಂಡ ಅವರು ತಾವು ತುಂಬಾ ಎಮೋಷನಲ್ ವ್ಯಕ್ತಿ ಎಂದಿದ್ದಾರೆ. ಹಾಗೆಯೇ ತಮ್ಮ ಹಿಂದಿನ ಸಂಬಂಧ ಬಗ್ಗೆಯೂ ಮಾತನಾಡಿದ್ದಾರೆ.
ಪಾಸ್ಟ್ ರಿಲೇಷನ್ಶಿಪ್ ಬಗ್ಗೆ ಮಾತನಾಡಿದ ಅವರು, ಎಮೋಷನ್ಸ್ ಸೋತಾಗ ನಾನು ಸೋಲುತ್ತೇನೆ. ನಾನು ಯಾರಿಗೂ ಜೋರಾಗಿ ಮಾತಾಡಲ್ಲ. ನನಗೆ ಕೋಪ ಬಂದು ಜೋರಾಗಿ ಬೈದರೆ ನಾನು ನೋವಲ್ಲಿರುತ್ತೇನೆ. ನಾನು ನೂರು ಸಲ ಸಾರಿ ಹೇಳುತ್ತೇನೆ ಎಂದಿದ್ದಾರೆ.
ನಾನು ರಿಲೇಷನ್ಶಿಪ್ನಲ್ಲಿದ್ದಾಗ ಒಮ್ಮೆ ನನಗೆ ಕೋಪ ಬಂದಿತ್ತು. ನಾನು ಜಗಳ ಮಾಡಿ, ಕಿರುಚಾಡಿದ್ದೆ. ಸಮಯ ಕೊಡ್ತಿಲ್ಲ ಅಂತ. ನಂತರ ನಂಗೆ ಎಷ್ಟು ಬೇಜಾರಾಗಿತ್ತೆಂದರೆ ಮೂರು ದಿನ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದೇನೆ, ಉದ್ದುದ್ದದ ಮೆಸೇಜ್ ಹಾಕಿದ್ದೇನೆ. ಸಾರಿ, ಕ್ಷಮಿಸಿ, ನಾನು ಮತ್ತೊಮ್ಮೆ ಹಾಗೆ ಮಾಡಲ್ಲ ಅಂತ ಹೇಳಿದ್ದೆ ಎಂದು ಕೃಷಿ ತಾಪಂಡ ಹೇಳಿದ್ದಾರೆ.
ನೀನು ನಂಗೆ ಏನಾದರೂ ಕೊಡ್ಬಹುದು. ಆದರೆ ಅದು ಆ ಕ್ಷಣಕ್ಕೆ ಖುಷಿ ಕೊಡಬಹುದು. ಆದರೆ ಪ್ರೀತಿ ಯಾವಾಗಲೂ ಖುಷಿ ಕೊಡುತ್ತೆ. ನನ್ನ ಯಾವ ಪ್ರಪಂಚದ ಯಾವ ಮೂಲೆಗೆ ಬಿಟ್ಟರೂ ಬದುಕುತ್ತೇನೆ. ನನಗೆ ಪ್ರೀತಿಯಾದ ವ್ಯಕ್ತಿ ಶ್ರೀಮಂತ, ಅವನು ಶ್ರೀಮಂತ ಅಂತ ನಾನು ಪ್ರೀತಿ ಮಾಡಲಿಲ್ಲ ಎಂದಿದ್ದಾರೆ.
ನನಗೆ ಅವರ ಶ್ರೀಮಂತಿಕೆ ಗೊತ್ತಿರಲಿಲ್ಲ. ನಾನು ಯಾವ ಕಾರು ತಗೊಂಡಿಲ್ಲ. ಆ ಕಾರು ಮಾಡಿಸಿದ್ದರು. ನಾನು ಅದನ್ನು ತಗೊಂಡೆ ಇಲ್ಲ. ಅವರು ಕೊಟ್ಟ ಹಾಗೆಯೇ ತಿರುಗಿಸಿಕೊಟ್ಟಿದ್ದೇನೆ. ನನಗೆ ಆಭರಣ ಕೊಟ್ಟಿದ್ದಾರೆ, ಅದೆಲ್ಲ ವಾಪಸ್ ಕೊಟ್ಟಿದ್ದೇನೆ. ರಿಲೇಷನ್ಶಿಪ್ನಲ್ಲಿರುವಾಗ ಚೆನ್ನಾಗಿ ನೋಡಿಕೊಂಡಿದ್ದಾರೆ. ನನಗೆ ಕೊಟ್ಟಿದ್ದೆಲ್ಲ ವಾಪಸ್ ಕೊಟ್ಟಿದ್ದೇನೆ ಎಂದಿದ್ದಾರೆ.
Bangalore,Karnataka













