Last Updated:
ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅರುಣ್ಕುಮಾರ್ ನಿರ್ಮಿಸಿರೋ ಕೊತ್ತಲವಾಡಿ ಚಿತ್ರ ಸೈಮಾ ಪ್ರಶಸ್ತಿಯ ಮೂರು ವಿಭಾಗದಲ್ಲಿ ಆಯ್ಕೆ ಆಗಿದೆ. ಈ ವಿಷಯ ಪುಷ್ಪ ಅರುಣ್ಕುಮಾರ್ ಅವರ ನಿರ್ಮಾಣ ಸಂಸ್ಥೆಯ ಪೇಜ್ ಅಲ್ಲಿಯೇ ಅಧಿಕೃತವಾಗಿಯೇ ರಿವೀಲ್ ಆಗಿದೆ. ಇದರ ವಿವರ ಇಲ್ಲಿದೆ ಓದಿ.
ರಾಕಿಂಗ್ ಸ್ಟಾರ್ ಯಶ್ (Yash) ಅವರ ಅಮ್ಮ ಪುಷ್ಪಾ ಅರುಣ್ಕುಮಾರ್ (Pushpa Arunkumar) ನಿರ್ಮಾಪಕಿ ಆಗಿರೋದು ಗೊತ್ತೇ ಇದೆ. ಆದರೆ, ಇದೀಗ ಇವರ ಕೊತ್ತಲವಾಡಿ ಚಿತ್ರ ಸೈಮಾದಲ್ಲಿ ಸದ್ದು ಮಾಡುತ್ತಿದೆ. ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ಕ್ಯಾಟೆಗರಿಯಲ್ಲಿ ಇದು ನಾಮಿನೇಟ್ (Nominate) ಆಗಿದೆ. ಈ ವಿಷಯವನ್ನ ಚಿತ್ರದ ನಿರ್ಮಾಪಕಿ ಪುಷ್ಪ ಅರುಣ್ಕುಮಾರ್ (Pushpa Arunkumar) ಅಧಿಕೃತವಾಗಿಯೇ ಹಂಚಿಕೊಂಡಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯ ಅಧಿಕೃತ ಪೇಜ್ ಅಲ್ಲಿಯೇ ಈ ಕುರಿತು ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಸೈಮಾ ಪ್ರಶಸ್ತಿಗೆ ಕೊತ್ತಲವಾಡಿ ಸಿನಿಮಾ ನಾಮಿನೇಟ್ ಆಗಿದೆ. ಮೂರು ಕ್ಯಾಟೆಗರಿಯಲ್ಲಿ ಇದು ಆಯ್ಕೆ ಆಗಿದೆ. ದಿ ಬೆಸ್ಟ್ ವಿಲನ್ ವಿಭಾಗದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಾಮಿನೇಟ್ ಆಗಿದ್ದಾರೆ.
ಮೂರು ಮೂರು ನಾಮಿನೇಷನ್
(ಚಿತ್ರ ಕೃಪೆ: ಪುಷ್ಪಾ ಅರುಣ್ಕುಮಾರ್ ಇನ್ಸ್ಟಾಗ್ರಾಮ್)
ಕೊತ್ತಲವಾಡಿ ಚಿತ್ರ ಮೂರು ವಿಭಾಗದಲ್ಲಿ ನಾಮಿನೇಟ್ ಆಗಿದೆ. ಈ ಹಿನ್ನೆಯಲ್ಲಿಯೇ ಈ ವಿಷಯವನ್ನ ಪುಷ್ಪ ಅರುಣ್ಕುಮಾರ್ ಅವರ ಪ್ರೊಡಕ್ಷನ್ ಹೌಸ್ ಪೇಜ್ ಅಲ್ಲಿಯೇ ಹಂಚಿಕೊಂಡಿದ್ದಾರೆ.
ಯಶ್ ಅವರ ತಾಯಿ ಪುಷ್ಪ ಅರುಣ್ಕುಮಾರ್ ಅವರು ಈ ಚಿತ್ರದ ಮೂಲಕವೇ ನಿರ್ಮಾಪಕರಾಗಿದ್ದಾರೆ. ಈ ಚಿತ್ರದ ಪ್ರಚಾರವನ್ನು ಅಷ್ಟೆ ಜೋರಾಗಿಯೇ ಮಾಡಿದ್ದಾರೆ.
ಇದು ರಾಕಿ ಭಾಯ್ ಅಮ್ಮನ ಮೊದಲ ಸಿನಿಮಾ
(ಚಿತ್ರ ಕೃಪೆ: ಪುಷ್ಪಾ ಅರುಣ್ಕುಮಾರ್ ಇನ್ಸ್ಟಾಗ್ರಾಮ್)
ಈ ಚಿತ್ರದ ಮೂಲಕ ನಟಿ ಕಾವ್ಯ ಶೈವ ನಾಯಕಿ ಆಗಿದ್ದಾರೆ. ಪೃಥ್ವಿ ಅಂಬಾರ್ ಈ ಚಿತ್ರದ ನಾಯಕರಾಗಿದ್ದಾರೆ. ಇವರ ಜೋಡಿಯ ಈ ಚಿತ್ರ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು.
ಈ ಚಿತ್ರವನ್ನ ಹೊಸಬ ಶ್ರೀರಾಜ್ ಡೈರೆಕ್ಷನ್ ಮಾಡಿದ್ದಾರೆ. ಇವರೇ ಈ ಚಿತ್ರದ ಕತೆಯನ್ನು ಮಾಡಿದ್ದಾರೆ. ಈ ಚಿತ್ರಕ್ಕೆ ಅಭಿನಂದನ್ ಕಶ್ಯಪ್ ಹಾಗೂ ವಿಕಾಸ್ ವಶಿಷ್ಠ ಮ್ಯೂಸಿಕ್ ಮಾಡಿದ್ದಾರೆ.
ಸೈಮಾ ಅವಾರ್ಡ್ಸ್ ಮುಂದಿನ ತಿಂಗಳು ನಡೆಯುತ್ತಿದೆ. ಸೆಪ್ಟೆಂಬರ್-11 ಮತ್ತು 12 ರಂದು ಈ ಒಂದು ಅವಾರ್ಡ್ ಫಂಕ್ಷನ್ ಪ್ಲಾನ್ ಆಗಿದೆ.
ಈ ಒಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಯೇ ಎಲ್ಲವೂ ರಿವೀಲ್ ಆಗುತ್ತಿದೆ. ಯಾವ ಚಿತ್ರಕ್ಕೆ ಯಾವ ಅವಾರ್ಡ್ ಬಂದಿದೆ ಅಂತಲೇ ತಿಳಿಯುತ್ತದೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka
Kothalavadi Movie: ಬೆಸ್ಟ್ ಡೆಬ್ಯೂ ಪ್ರೊಡ್ಯೂಸರ್ ಅವಾರ್ಡ್ ಗೆಲ್ತಾರಾ ಯಶ್ ಅಮ್ಮ? ಸೈಮಾ ರೇಸ್ನಲ್ಲಿ ಪುಷ್ಪಮ್ಮ! 3 ಕ್ಯಾಟಗರಿಯಲ್ಲಿ ನಾಮಿನೇಟ್ ಆದ ‘ಕೊತ್ತಲವಾಡಿ’














