Kichcha Sudeepa: ಸಾನ್ವಿ ನನಗೆ ಮಗಳಷ್ಟೇ ಅಲ್ಲ ಮಗ ಇದ್ದಂಗೆ; ಸಂಚಿತ್ ಕೂಡ ಮಗನೇ ಎಂದ ಕಿಚ್ಚ! | | ACTPnews

Sanvi Sudeep is both a son and a daughter to me said kichcha sudeepa


ಸಾನು ನನಗೆ ಮಗ ಮತ್ತು ಮಗಳು..

ಸಾನ್ವಿ ನನಗೆ ಮಗಳಷ್ಟೆ ಅಲ್ಲ, ಅವಳು ನನಗೆ ಮಗ ಇದ್ದಂಗೆನೇ. ಮಗ ಮತ್ತು ಮಗಳು ಎರಡೂ ಆಗಿದ್ದಾಳೆ. ಹಾಗಂತ ಸಂಚಿತ್ ನನ್ನ ಮಗ ಅಲ್ಲ ಅನ್ಕೋಬೇಡಿ. ಆತನೂ ನನ್ನ ಮಗನೆ ಆಗಿದ್ದಾನೆ.
ಸಾನು ನನಗೆ ಮಗ ಮತ್ತು ಮಗಳು..

(ಚಿತ್ರ ಕೃಪೆ: ಸಾನ್ವಿ ಸುದೀಪ್ ಇನ್‌ಸ್ಟಾಗ್ರಾಮ್)

ಈ ಒಂದು ಮಾತು ಕೇಳಿದ್ಮೇಲೆ ಶಿವಣ್ಣ ಕೂಡ ಧ್ವನಿಗೂಡಿಸಿದರು. ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ ಅಂತಲೇ ಹೇಳಿದರು. ಮಕ್ಕಳು ಅಂದ್ರೆ ಇಲ್ಲಿ ಹೆಣ್ಣು ಮತ್ತು ಗಂಡು ಅಂತ ಇರೋದಿಲ್ಲ. ಮಕ್ಕಳು ಯಾವಾಗಲು ಮಕ್ಕಳೆ ಅಂತಲೇ ಸುದೀಪ್ ಹೇಳಿಕೊಂಡಿದ್ದಾರೆ. ಶಿವಣ್ಣನ ಮಾತು ಕೂಡ ಇದೆ ಆಗಿದೆ.

ಮಕ್ಕಳ ವಿಚಾರ ಯಾಕ್ ಬಂತು

ಮ್ಯಾಂಗೋ ಪಚ್ಚ ಸ್ಪೆಷಲ್ ಶೋ ಇತ್ತು. ಶಿವರಾಜ್ ಕುಮಾರ್ ಬಂದಿದ್ದರು. ಚಿತ್ರ ನೋಡಿದ್ಮೇಲೆ ಮೆಚ್ಚುಗೆ ವ್ಯಕ್ತಪಡಿಸಿದರು. ಆಗಲೆ ಪತ್ರಕರ್ತರು ಸುದೀಪ್ ಅವರಿಗೆ ಮಗ ಇಲ್ಲ.

ಆದರೆ, ಸಂಚಿತ್ ಅವರನ್ನೆ ಮಗ ಅಂತಲೇ ಸುಮಾರು ವೇದಿಕೆ ಮೇಲೆ ಹೇಳಿದ್ದಾರೆ. ಹೀಗೆ ಪ್ರಶ್ನೆ ಇನ್ನು ಪೂರ್ತಿ ಆಗಿರಲಿಲ್ಲ. ಆಗಲೇ ಸುದೀಪ್ ಮಾತನಾಡಿದರು. ಸಾನು ನನ್ನ ಮಗ ಇದ್ದಂಗೆ, ಸಂಚಿತ್ ಕೂಡ ನನ್ನ ಮಗ ಅಂತ ಹೇಳಿದರು.

ನನಗೂ ಇಬ್ಬರು ಹೆಣ್ಣುಮಕ್ಕಳು

ನನಗೆ ಗಂಡು ಮಕ್ಕಳು ಇಲ್ಲ ಅಂತ ನಾನು ಯೋಚನೆ ಮಾಡೋದಿಲ್ಲ. ನನಗೆ ಇಬ್ಬರು ಹೆಣ್ಣುಮಕ್ಕಳು ಅಂತ ಶಿವಣ್ಣ ಹೇಳಿಕೊಂಡಿದ್ದಾರೆ.

ಈ ಮೂಲಕ ಈ ಸ್ಟಾರ್ ನಟರು ಒಂದು ವಿಚಾರ ಎಲ್ಲರಿಗೂ ಹೇಳಿದ್ದಾರೆ. ಮಕ್ಕಳು ಅಂದ್ರೆ ಇಲ್ಲಿ ಗಂಡು ಮತ್ತು ಹೆಣ್ಣು ಅಂತ ಇರೋದಿಲ್ಲ. ಮಕ್ಕಳು ಅಂದರೆ ಮಕ್ಕಳೆ ಆಗಿರುತ್ತಾರೆ.

Sanvi Sudeep is both a son and a daughter to me said kichcha sudeepa

ನನಗೂ ಇಬ್ಬರು ಹೆಣ್ಣುಮಕ್ಕಳು

(ಚಿತ್ರ ಕೃಪೆ: ನಿವೇದಿತಾ ಶಿವರಾಜ್ ಕುಮಾರ್ ಇನ್‌ಸ್ಟಾಗ್ರಾಮ್)

ಹೆಣ್ಣು ಮಕ್ಕಳು ಕಡಿಮೆ ಗಂಡು ಮಕ್ಕಳು ಹೆಚ್ಚು ಅನ್ನು ನಂಬಿಕೆಯನ್ನ ಇವರೂ ಇಟ್ಟುಕೊಂಡಿಲ್ಲ. ಎಲ್ಲರೂ ಒಂದೇ ಅನ್ನೋದನ್ನ ಹೀಗೆ ಹೇಳಿಕೊಂಡಿದ್ದಾರೆ.

ಮ್ಯಾಂಗೋ ಪಚ್ಚ

ಮ್ಯಾಂಗೋ ಪಚ್ಚ ಚಿತ್ರ ಮೊನ್ನೆ ಜೂನ್-5 ರಂದು ರಿಲೀಸ್ ಆಗಿದೆ. ರಿಲೀಸ್ ಆದ ಮೊದಲ ದಿನವೇ ಒಳ್ಳೆ ಅಭಿಪ್ರಾಯವನ್ನ ಪಡೆದುಕೊಂಡಿದೆ.

ಕನ್ನಡ ಡಬ್ಬಿಂಗ್

ಮುಂಬೈ ಹುಡುಗಿ ಕಾಜಲ್ ಕುಂದರ್ ಇಲ್ಲಿ ಇನ್ನೂ ಒಂದು ಕೆಲಸ ಮಾಡಿದ್ದಾರೆ. ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ. ಕನ್ನಡ ಕಲಿತುಕೊಂಡು ಡಬ್ ಮಾಡಿದ್ದಾರೆ.

ಕನ್ನಡದ ಹುಡುಗಿಯರ ರೀತಿನೇ ಕಾಜಲ್ ಕುಂದರ್ ಆಫ್ ಸ್ಕ್ರೀನ್ ಅಲ್ಲಿ ಕನ್ನಡ ಮಾತನಾಡುತ್ತಾರೆ. ಇವರ ಈ ಒಂದು ಪ್ರಯತ್ನಕ್ಕೆ ಚಿತ್ರ ತಂಡ ಸಪೋರ್ಟ್ ಮಾಡಿದೆ.

ನಾನು ಡಬ್ ಮಾಡ್ತೀನಿ. ಇದು ಇಷ್ಟ ಆಗದೇ ಇದ್ದರೆ ತೆಗೆದು ಬಿಡಿ. ಆದರೆ, ನನ್ನ ಪಾತ್ರಕ್ಕೆ ನಾನೇ ಡಬ್ ಮಾಡ್ತೀನಿ ಅಂತ ಕಾಜಲ್ ಕುಂದರ್ ಹೇಳಿದಾಗ ಡೈರೆಕ್ಟರ್ ವಿವೇಕ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಚಿತ್ರದಲ್ಲಿ ಕಾಜಲ್ ಡಬ್ಬಿಂಗ್ ಅನ್ನೆ ಉಳಿಸಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *