Last Updated:
ನೆಪೋಟಿಸಂ ಅನ್ನೋದು ನಮ್ಮ ಕನ್ನಡರಿಗೆ ಅರ್ಥ ಆಗೋದಿಲ್ಲ. ಇಲ್ಲಿಯ ಜನಕ್ಕೆ ಕಲೆ ಒಂದೇ ಅರ್ಥ ಆಗುತ್ತದೆ. ಈ ಪ್ರಶ್ನೆಯನ್ನ ಶಿವರಾಜ್‌ಕುಮಾರ್ ಅವರಿಗೆ ಯಾಕೆ ಕೇಳಲಿಲ್ಲ ಅಂತ ಸುದೀಪ್ ಕೇಳಿದ್ದಾರೆ. ಇದನ್ನ ಯಾಕೆ ಕೇಳಿದರು ಅನ್ನೋದು ಇಲ್ಲಿದೆ ಓದಿ.
ಮ್ಯಾಂಗೋ ಪಚ್ಚ ಚಿತ್ರದ (Mango Pachcha Movie) ಮೂಲಕ ಕಿಚ್ಚ ಸುದೀಪ್ (Kichcha Sudeepa) ಅಳಿಯ ಸಂಚಿತ್ ಸಂಜೀವ್ ಇಂಡಸ್ಟ್ರಿಗೆ ಬಂದಿದ್ದಾರೆ. ಮೊದಲ ಚಿತ್ರದಲ್ಲಿಯೇ ಒಳ್ಳೆ ಅಭಿಪ್ರಾಯ ಮೂಡಿಸಿದ್ದಾರೆ. ಆದರೆ, ಈ ಚಿತ್ರದ ಪ್ರೆಸ್ ಮೀಟ್ ಅಲ್ಲಿ ಕಿಚ್ಚ ಸುದೀಪ್ (Kichcha Sudeepa) ಗರಂ ಆಗಿದ್ದಾರೆ. ನೆಪೋಟಿಸಂ ಕುರಿತು ಕೇಳಿದ ಪ್ರಶ್ನೆಗೆ ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾರೆ. ಶಿವರಾಜ್ ಕುಮಾರ್ (Shiva Rajkumar) ಅವರಿಗೆ ಯಾಕೆ ಈ ಪ್ರಶ್ನೆ ಕೇಳಲಿಲ್ಲ. ಈಗ ಯಾಕೆ ಈ ಪ್ರಶ್ನೆ ಅಂತಲೂ ಕೇಳಿದ್ದಾರೆ. ಇನ್ನೂ ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.
ಶಿವಣ್ಣನಿಗೆ ಈ ಪ್ರಶ್ನೆ ಯಾಕ್ ಕೇಳಲಿಲ್ಲ ಎಂದ ಸುದೀಪ್
ಇಲ್ಲಿಯ ಜನಕ್ಕೆ ಅರ್ಥ ಆಗೋದು ಕಲೆ ಅನ್ನೋದು ಮಾತ್ರ. ಆ ಕಲೆ ಇದ್ದರೆ ಉಳಿಯುತ್ತಾರೆ. ಇಲ್ಲ ಅಂದ್ರೆ ಇಲ್ವೇ ಇಲ್ಲ. ಆ ರೀತಿ ಇರೋವಾಗ ನೆಪೋಟಿಸಂ ಎಲ್ಲಿಂದ ಬಂತು ಅನ್ನುವ ಅರ್ಥದಲ್ಲಿಯೇ ಸುದೀಪ್ ಇಲ್ಲಿ ರಿಯಾಕ್ಟ್ ಮಾಡಿದ್ದಾರೆ.
ನೆಪೋಟಿಸಂ ಬಗ್ಗೆ ಶಿವರಾಜ್ ಕುಮಾರ್ ಅವರಿಗೆ ಯಾಕೆ ಕೇಳಿಲ್ಲ. ಅವರಿಗ್ಯಾಕೆ ಈ ಪ್ರಶ್ನೆ ಮಾಡಲಿಲ್ಲ. ಶಿವಣ್ಣ ಅವರು ತಮ್ಮ ಪ್ರತಿಭೆ ಮೇಲೆ ಎಲ್ಲರ ಹೃದಯ ಗೆದ್ದರು.
ಸಂಚಿತ್ ಸಂಜೀವ್ ಒಬ್ರೇ ಚಿತ್ರದ ಪ್ರಚಾರ ಮಾಡಿದ್ದಾರೆ. ಅಂದ್ರೆ ಸುದೀಪ್ ಜೊತೆ ಇಲ್ಲದೆ ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗದಲ್ಲೂ ಸಂಚಿತ್ ಸಂಜೀವ್ ಹೋಗಿ ಬಂದಿದ್ದಾರೆ.
ಆದರೆ, ಸುದೀಪ್ ಯಾಕೆ ಜೊತೆಗೆ ಹೋಗಲಿಲ್ಲ. ಈ ಪ್ರಶ್ನೆಗೆ ಸುದೀಪ್ ಉತ್ತರ ಕೊಟ್ಟಿದ್ದಾರೆ. ಇದಕ್ಕೂ ನೆಪೋಟಿಸಂ ಅಂದ್ರೆ ಏನು ಮಾಡೋದು ಅನ್ನುವ ಅರ್ಥದಲ್ಲಿಯೇ ಸುದೀಪ್ ರಿಯಾಕ್ಟ್ ಮಾಡಿದ್ದಾರೆ. ಅವನೇ ಹೋಗಿ ಜನರ ಜೊತೆಗೆ ಬೆರೆಯಲಿ ಅನ್ನುವ ಕಾರಣಕ್ಕೆ ಹೋಗಲಿಲ್ಲ ಅಂತಲೇ ಸುದೀಪ್ ಹೇಳಿದ್ದಾರೆ.
ಸಂಚಿತ್ ಸಂಜೀವ್ ಹೇಳೋದೇನು
ಈ ಒಂದು ನೆಪೋಟಿಸಂ ಬಗೆಗಿನ ಪ್ರಶ್ನೆಗೆ ಸಂಚಿತ್ ಸಂಜೀವ್ ಉತ್ತರ ಕೊಟ್ಟಿದ್ದಾರೆ. ಸದ್ಯದ ಕಾಮೆಂಟ್ ಬಗ್ಗೆ ನಾನು ಏನೂ ಹೇಳೋದಿಲ್ಲ. ಜನರು ಚಿತ್ರಕ್ಕೆ ಅಷ್ಟು ಪ್ರೀತಿ ತೋರಿಸುತ್ತಿದ್ದಾರೆ. ಹಾಗಾಗಿಯೇ ಇದು ಏನು ಕಾಣಿಸುತ್ತಿಲ್ಲ ಅಂತಲೇ ಸಂಚಿತ್ ಸಂಜೀವ್ ಹೇಳಿದ್ದಾರೆ.
ಮ್ಯಾಂಗೋ ಪಚ್ಚ ಚಿತ್ರದಲ್ಲಿ ಹುಚ್ಚ ಚಿತ್ರದ ಯಾವುದೇ ಸೀನ್ ಕೂಡ ನೆನಪಿಗೆ ಬರಲಿಲ್ಲ. ಕಾರಣ, ನಮ್ಮ ಡೈರೆಕ್ಟರ್ ವಿವೇಕ್ ಏನ್ ಹೇಳ್ತಾರೋ ಆ ಕಡೆಗೇನೆ ಹೆಚ್ಚಿನ ಫೋಕಸ್ ಇತ್ತು ಅಂತಲೂ ಸಂಚಿತ್ ಇಲ್ಲಿ ಹೇಳಿಕೊಂಡಿದ್ದಾರೆ.
ಸಂಚಿತ್ ಸಂಜೀವ್ ನನ್ನ ಬೆಳ್ಳಿ ತೆರೆ ಮೇಲೆ ನೋಡೋದು ತುಂಬಾನೆ ಖುಷಿ ಆಗುತ್ತದೆ. ಸಂಚಿತ್ ಸಂಜೀವ್ ತುಂಬಾನೆ ಕಾಂಪಿಟೇಟಿವ್ ಆಗಿದ್ದಾರೆ. ಇನ್ಮುಂದೆ ಡೈರೆಕ್ಟರ್‌ಗಳು ಮನೆಗೆ ಬಂದ್ರೆ, ಯಾವ ಹೀರೋಗಾಗಿಯೇ ಬಂದಿದ್ದಾರೆ ಅಂತ ಕೇಳುವ ಸ್ಥಿತಿ ಇದೆ.
ಸುದೀಪ್ ಬ್ಯುಸಿ ಇದ್ದರೆ ಸಂಚಿತ್ ಇದ್ದಾರೆ ಅನ್ನುವ ನಂಬಿಕೆನೂ ಮೂಡಿದೆ. ಇದು ನಿಜಕ್ಕೂ ಖುಷಿ ಕೊಡುವ ವಿಚಾರವೇ ಆಗಿದೆ ಅಂತಲೂ ಸುದೀಪ್ ಇಲ್ಲಿ ಹೇಳಿದ್ದಾರೆ ಅಂತಲೇ ಹೇಳಬಹುದು.
Bangalore,Karnataka













