ಟೈಮ್ ಪೀಸ್…
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಆ ರೀತಿನೇ ಈ ಒಂದು ಶೋ ಡಿಸೈನ್ ಮಾಡಿದ್ದಾರೆ. ಆದರೆ, ಈ ಸಲ ವಿಶೇಷ ಅಂದ್ರೆ ಒಂದೊಂದು ಸಂಚಿಕೆನೂ ಮೂರು ಗಂಟೆ ಇರುತ್ತವೆ. ಕಲರ್ಸ್ ಕನ್ನಡ ಇದನ್ನ ತನ್ನ ಅಧಿಕೃತ ಪ್ರೋಮೋದಲ್ಲಿ ಹೇಳಿಕೊಂಡಿದೆ.
ತಾಂಡವ್ ರಾಮ್ ಎಕ್ಸಿಟ್ ಆಗಿದ್ದಾರೆ ಎಮರ್ಜೆನ್ಸಿ ಎಕ್ಸಿಟ್ ಮೂಲಕ ಹೊರ ಬಂದಿದ್ದಾರೆ. ಆದರೆ, ಇವರು ಮನೆಯಿಂದ ಹೋಗಿರೋದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳೂ ಆಗುತ್ತಿವೆ.
ಕಿಚ್ಚ ಸುದೀಪ್ ಟೈಮ್ ಪೀಸ್ ಕತೆ ಹೇಳಿದ್ದಾರೆ. ಹತ್ತಾರು ಅಂಗಡಿಯನ್ನ ಸುತ್ತಿ ಒಂದು ಟೈಮ್ ಪೀಸ್ ತರುತ್ತೇವೆ. ಆದರೆ, ನಾವು ಮುಂದೆ ಟೈಮ್ ಪೀಸ್ ನೋಡೋದೇ ಇಲ್ಲ.
ಈ ಟೈಮ್ ಪೀಸ್ ಅಲ್ಲಿರೋ ಟೈಮ್ ಅನ್ನ ಮಾತ್ರ ನೋಡುತ್ತೇವೆ. ಆದರೆ, ಟೈಮ್ ನಿಂತಾಗಲೇ ನಾವು ಟೈಮ್ ಪೀಸ್ ನೋಡ್ತಿವೆ. ಈಗ ದೊಡ್ಮನೆಯಲ್ಲೂ ಹಾಗೆ ಆಗಿದೆ.
ಕಿಚ್ಚನ ಸುದೀರ್ಘ ಪಂಚಾಯ್ತಿ
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಟೈಮ್ ಪೀಸ್ ನಿಂತು ಹೋಗಿದೆ. ಆ ಟೈಮ್ ಪೀಸ್ ಅನ್ನ ಶಾಶ್ವತವಾಗಿ ಗೋಡೆಯಿಂದ ಇಳಿಸೋ ಟೈಮ್ ಬಂತಾ? ಅಥವಾ ಆ ಟೈಮ್ ಮತ್ತೆ ಶುರು ಆಗುತ್ತಾ ಅಂತಲೇ ಕೇಳಿದ್ದಾರೆ.
ಈ ಒಂದು ಟೈಮ್ ಪೀಸ್ ಕಥೆ ಮೂಲಕ ತಾಂಡವ್ ರಾಮ್ ಎಕ್ಸಿಟ್ ಬಗ್ಗೆ ಹೇಳಿದ್ದಾರೆ. ಹೋಗಿರೋ ತಾಂಡವ್ ರಾಮ್ ವಾಪಾಸ್ ಬರುವ ನಿರೀಕ್ಷೆ ಇಟ್ಟುಕೊಳ್ಳುವ ರೀತಿಯಲ್ಲಿಯೇ ಇಲ್ಲಿ ಹೇಳಿದ್ದಾರೆ.
ತಾಂಡವ್ ರಾಮ್ ಬರ್ತಾರಾ? ಶಾಶ್ವತವಾಗಿ ಮನೆಗೆ ಹೋಗ್ತಾರಾ? ಅಂತಲೂ ಪ್ರಶ್ನೆ ಕೇಳಿದ್ದಾರೆ. ಆದರೆ, ಈ ದಿನದ ಶೋದಲ್ಲಿಯೇ ತಾಂಡವ್ ರಾಮ್ ಬರೋದು ಗೊತ್ತಾಗುತ್ತಾ? ಇಲ್ಲ ಭಾನುವಾರದ ಸಂಚಿಕೆಯಲ್ಲಿ ಇದು ತಿಳಿಯುತ್ತದೆಯೇ? ಈ ಪ್ರಶ್ನೆಯನ್ನು ದಿನದ ಪ್ರೋಮೋ ಈಗ ಹುಟ್ಟುಹಾಕಿದೆ.
ಈಗಾಗಲೇ ಮನೆಯಿಂದ ಮೂರು ಜನ ಹೋಗಿದ್ದಾರೆ. ಅನಾರೋಗ್ಯದಿಂದ ಓಂ ಪ್ರಕಾಶ್ ರಾವ್ ಅರ್ಧಕ್ಕೆ ಆಟ ಬಿಟ್ಟು ಹೋಗಿದ್ದಾರೆ.
ಪ್ರಥಮ ಪ್ರಸಾದ್ ಅವರು ಎಲಿನಿಮೇಟ್ ಆಗಿದ್ದಾರೆ. ತಾಂಡವ್ ರಾಮ್ ಈಗಾಗಲೇ ಹೇಳಿದಂತೆ ಎಮರ್ಜೆನ್ಸಿ ಎಕ್ಸಿಟ್ ಆಗಿದ್ದಾರೆ ಅಂತ ಹೇಳಬಹುದು.













