Kichcha Sudeepa: ವಿಷ್ಣು ಅಮೃತ ಮಹೋತ್ಸವಕ್ಕೆ ಕಿಚ್ಚ ಸುದೀಪ್ ಗೈರು, ಕ್ಷಮೆ ಕೇಳಿದ ಬಾದ್‌ಷಾ | | ACTPnews

vishnuvardhan amrutha mahotsava kichcha sudeep misses event apologizes


ನನಗೆ ಬರಕೆ ಸಾಧ್ಯ ಆಗ್ತಿಲ್ಲ…

ಕಿಚ್ಚ ಸುದೀಪ್ ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕೆ ಬರೋರಿದ್ದರು. ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಮೀಟ್ ಆಗಿದ್ದರು. ಆಗಲೇ ಸುದೀಪ್ ತಾವು ಬರೋದಾಗಿಯೂ ಹೇಳಿದ್ದರು.
ಕ್ಷಮೆ ಇರಲಿ…

(ಚಿತ್ರ ಕೃಪೆ: ವೀರಕಪುತ್ರ ಶ್ರೀನಿವಾಸ್ ಇನ್​ಸ್ಟಾಗ್ರಾಮ್)

ನೀವು ವೇದಿಕೆ ಮೇಲೆ ಹಾಡ್ಬೇಕು ಅಂತಲೂ ವೀರಕಪುತ್ರ ಶ್ರೀನಿವಾಸ್ ಹೇಳಿದ್ದರು. ಅದಕ್ಕೂ ಸುದೀಪ್ ಓಕೆ ಹೇಳಿದ್ದರು. ಆದರೆ, ಸೆಪ್ಟೆಬರ್-27 ರಂದು ಬೆಳಗ್ಗೆ ಸುದೀಪ್ ಒಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಕ್ಷಮೆ ಕೇಳಿದ್ದಾರೆ.

ಕ್ಷಮೆ ಇರಲಿ…

ಇಂದು ಸಂಜೆ ನಡೆಯುವ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಬರೋಕೆ ಸಾಧ್ಯ ಆಗುತ್ತಿಲ್ಲ. ಇದನ್ನ ಹೇಳಲಿಕ್ಕೆ ಬೇಸರ ಕೂಡ ಆಗುತ್ತಿದೆ. ಅತ್ಯಂತ ಅನಿವಾರ್ಯವಾದ ವೈಯಕ್ತಿಕ ಪರಿಸ್ಥಿತಿ ಎದುರಾಗಿದೆ.

ಈ ಕಾರಣಕ್ಕೇನೆ ನನಗೆ ಅಲ್ಲಿ ಬರೋಕೆ ಆಗುತ್ತಿಲ್ಲ. ನಾನು ವಿನಾಕಾರಣ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಅನ್ನೋದು ಗೊತ್ತಿದೆ.

ನನ್ನ ಆರಾಧ್ಯ ದೈವ

ವಿಷ್ಣು ಸರ್ ಎಂದಿಗೂ ನನ್ನ ಆರಾಧ್ಯವೇ ಆಗಿದ್ದಾರೆ. ಇವರು ನನಗೆ ಸದಾ ಸ್ಪೂರ್ತಿ ಆಗಿದ್ದಾರೆ. ಈ ವಿಚಾರದಲ್ಲಿ ಏನೂ ಬದಲಾಗೋದೇ ಇಲ್ಲ.

ಆದರೆ, ವಿಷ್ಣು ಸರ್ ಅವರ ಈ ವಿಶೇಷ ದಿನ ನಿಮ್ಮ ಜೊತೆಗೆ ಇರಲು ನನಗೆ ಸಾಧ್ಯ ಆಗುತ್ತಿಲ್ಲ ಅನ್ನುವ ಬೇಸರ ಇದೆ. ನಾನು ಈ ಕ್ಷಣವನ್ನ ಮಿಸ್ ಮಾಡಿಕೊಳ್ಳುತ್ತೇನೆ.

vishnuvardhan amrutha mahotsava kichcha sudeep misses event apologizes

ನಾನು ಇದ್ದೇ ಇರುತ್ತೇನೆ…

(ಚಿತ್ರ ಕೃಪೆ: ವೀರಕಪುತ್ರ ಶ್ರೀನಿವಾಸ್ ಇನ್​ಸ್ಟಾಗ್ರಾಮ್)

ನಾನು ಇದ್ದೇ ಇರುತ್ತೇನೆ…

ವಿಷ್ಣು ಸರ್ ಅವರಿಗಾಗಿ ಮಾಡಬೇಕಾದ ಕೆಲಸದಲ್ಲಿ ನಾನು ಸದಾ ನಿಮ್ಮೊಟ್ಟಿಗೆ ಇರುತ್ತೇನೆ. ಆದರೆ, ಈಗ ನಿಮ್ಮ ಜೊತೆಗೆ ಇರಲು ಸಾಧ್ಯವಾಗದೇ ಇರೋದಕ್ಕೆ ಕ್ಷಮೆ ಇರಲಿ. ತುಂಬಾ ಪ್ರೀತಿಯೊಂದಿಗೆ..ನಿಮ್ಮ ಸಹೋದರ, ಕಿಚ್ಚ ಸುದೀಪ್ ಅಂತಲೇ ಸುದೀಪ್ ಹೇಳಿದ್ದಾರೆ.

ಸುದೀಪ್ ತಮ್ಮ ಈ ಒಂದು ಬೇಸರದ ಮಾತುಗಳನ್ನ ಟ್ವಿಟರ್ ಅಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ವಿಷ್ಣುವರ್ಧನ್ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಕ್ಷಮೆ ಕೇಳಿದ್ದಾರೆ.

ಬೃಹತ್ ಧ್ವಜ್ ಮೆರವಣಿಗೆ

ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವ ಕಾರ್ಯಕ್ರಮ ಶುರು ಆಗಿದೆ. ಬೆಳಗ್ಗೇನೆ ಕಾರ್ಯಕ್ರಮ ಆರಂಭ ಆಗಿದೆ. ವಿಷ್ಣುವರ್ಧನ್ ಅವರ ಭಾವ ಚಿತ್ರದ ಬೃಹತ್ ಧ್ವಜವನ್ನ ಹಿಡಿದುಕೊಂಡು ಅಭಿಮಾನಿಗಳು ಸಾಗಿದ್ದಾರೆ.

ಶ್ರೀನಾಥ್-ರಮೇಶ್ ಅರವಿಂದ್

ಬೆಳಗ್ಗೆ 9.30ಕ್ಕೆ ಈ ಒಂದು ಕಾರ್ಯಕ್ರಮದ ಉದ್ಘಾಟನೆ ಆಗಿದೆ. ಹಿರಿಯ ನಟರಾದ ಶ್ರೀನಾಥ್, ರಮೇಶ್ ಅರವಿಂದ್ ಅವರು ಈ ಒಂದು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.

ಬೆಳಗ್ಗೆ 11 ಗಂಟೆಗೆ ಗಾಯಕ ರಾಜೇಶ್ ಕೃಷ್ಣನ್ ನೇತೃತ್ವದ ಸಂಗೀತ ಕಾರ್ಯಕ್ರಮ ಶುರು ಆಗುತ್ತದೆ. ಈ ಮೂಲಕ ವಿಷ್ಣುವರ್ಧನ್ ಅವರಿಗೆ ಗಾನ ಗೌರವ ಸಲ್ಲಿಸಲಾಗುತ್ತಿದೆ. ನಂದಿ ಲಿಂಕ್ಸ್ ಗ್ರೌಂಡ್ ಅಲ್ಲಿ ಇರೋ ಈ ಸಂಭ್ರಮದಲ್ಲಿ ಸಂಜೆ ಮತ್ತಷ್ಟು ಕಾರ್ಯಕ್ರಮಗಳು ಆಯೋಜನೆ ಆಗಿವೆ.

ವಿಷ್ಣುವರ್ಧನ್ ಜೊತೆಗೆ ನಟಿಸಿದ ರೋಜಾ, ಸುಹಾಸಿನಿ, ಖುಷ್ಬೂ, ಡೈರೆಕ್ಷನ್ಸ್, ಟೆಕ್ನಿಷನ್ಸ್ ಹೀಗೆ ವಿಷ್ಣುವರ್ಧನ್ ಜೊತೆಗೆ ಕೆಲಸ ಮಾಡಿದವರು ಇಲ್ಲಿ ಭಾಗಿ ಆಗುತ್ತಿದ್ದಾರೆ. ವಿಷ್ಣುವರ್ಧನ್ ಕೊಡುಗೆ ಮತ್ತು ಸಾಧನೆ ಬಗ್ಗೆ ಮಾತನಾಡಲಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed