Kichcha Sudeepa: ಮ್ಯಾಂಗೋ ಪಚ್ಚ ನೋಡಿ ಸುದೀಪ್ ಕಣ್ಣೀರು ಹಾಕಿದ್ಯಾಕೆ? ಪತ್ನಿ ಪ್ರಿಯಾ ಹೇಳೋದೇನು? | | ACTPnews

ಮ್ಯಾಂಗೋ ಪಚ್ಚ ನೋಡಿ ಸುದೀಪ್ ಕಣ್ಣೀರು ಹಾಕಿದ್ಯಾಕೆ? ಪ್ರಿಯಾ ಹೇಳೋದೇನು?


Last Updated:

ಅಳಿಯ ಸಂಚಿತ್ ಸಂಜೀವ್ ಚಿತ್ರ ನೋಡಿ ಸುದೀಪ್ ಎಮೋಷನಲ್ ಆಗಿದ್ದಾರೆ. ಕಣ್ಣೀರು ಕೂಡ ಹಾಕಿದ್ದಾರೆ. ಆದರೆ, ಯಾಕೆ ಅನ್ನೋದನ್ನ ಪತ್ನಿ ಪ್ರಿಯಾ ಸುದೀಪ್ ಹೇಳಿಕೊಂಡಿದ್ದಾರೆ. ಅದರ ವಿವರ ಮುಂದೆ ಇದೆ ಓದಿ.

ಮ್ಯಾಂಗೋ ಪಚ್ಚ ನೋಡಿ ಸುದೀಪ್ ಕಣ್ಣೀರು ಹಾಕಿದ್ಯಾಕೆ? ಪ್ರಿಯಾ ಹೇಳೋದೇನು?
ಮ್ಯಾಂಗೋ ಪಚ್ಚ ನೋಡಿ ಸುದೀಪ್ ಕಣ್ಣೀರು ಹಾಕಿದ್ಯಾಕೆ? ಪ್ರಿಯಾ ಹೇಳೋದೇನು?

ಮ್ಯಾಂಗೋ ಪಚ್ಚ ಚಿತ್ರವನ್ನ (Mango Pachcha) ಸುದೀಪ್ (Sudeepa) ನೋಡಿದ್ರಾ? ಇಲ್ಲವೆ ಜೂನ್-5 ರಂದೇ ಈ ಚಿತ್ರ ನೋಡ್ತೀದ್ದಾರಾ? ಈ ಪ್ರಶ್ನೆಗಳೂ ಇವೆ. ಆದರೆ, ಪ್ರಿಯಾ ಸುದೀಪ್ (Priya Sudeepa) ಈ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದಾರೆ. ಸುದೀಪ್ (Sudeepa) ಚಿತ್ರದ ಫಸ್ಟ್ ಕಾಪಿ ನೋಡಿದ್ದಾರೆ ಅನ್ನುವ ವಿಷಯವನ್ನು ಹೇಳಿಕೊಂಡಿದ್ದಾರೆ. ಇಡೀ ಚಿತ್ರವನ್ನ ನೋಡಿದ್ಮೇಲೆ ಏನು ಹೇಳಿದರು ಅನ್ನೋದನ್ನು ವಿವರಿಸಿದ್ದಾರೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.

ಫಸ್ಟ್ ಕಾಪಿ ವೀಕ್ಷಣೆ

ಕಿಚ್ಚ ಸುದೀಪ್ ಈ ಚಿತ್ರವನ್ನ ನೋಡಿದ್ದಾರೆ. ಚಿತ್ರದ ಫಸ್ಟ್ ಕಾಪಿಯನ್ನ ಸುದೀಪ್ ನೋಡಿದ್ದಾರೆ. ನೋಡಿದ್ಮೇಲೆ ಇವರಿಗೆ ಒಂದಷ್ಟು ಹಳೆ ನೆನಪುಗಳು ಆಗಿವೆ.

kichcha sudeepa got emotional after watch the mango pachcha Movie

ಪ್ರಿಯಾ ರಿವೀಲ್

ಹುಚ್ಚ ಚಿತ್ರದ ತಮ್ಮ ಆ ದಿನಗಳು ನೆನಪಾಗಿವೆ. ಹುಚ್ಚ ಚಿತ್ರದ ಸಮಯದಲ್ಲಿ ಹೇಗೆಲ್ಲ ಕೆಲಸ ಆಗಿತ್ತು ಅನ್ನೋದು ಕಣ್ಮುಂದೆ ಬಂದಿದೆ. ಇದೆಲ್ಲ ನೆನಪಾಗಿ ಸುದೀಪ್ ಎಮೋಷನಲ್ ಆಗಿದ್ದಾರೆ. ಕಣ್ಣೀರು ಕೂಡ ಹಾಕಿದ್ದಾರೆ.

ಪ್ರಿಯಾ ರಿವೀಲ್

ಈ ವಿಷಯವನ್ನ ಪ್ರಿಯಾ ಸುದೀಪ್ ಹೇಳಿದ್ದಾರೆ. ಡಿಜಿಟಲ್ ಮೀಟ್ ಅಲ್ಲಿ ಎದುರಾದ ಪ್ರಶ್ನೆಗೆ ಇದೆಲ್ಲ ಹೇಳಿದ್ದಾರೆ. ಸುದೀಪ್ ಈ ಚಿತ್ರದ ಫಸ್ಟ್ ಕಾಪಿನೇ ನೋಡಿದ್ದಾರೆ.

ಚಿತ್ರ ನೋಡ್ತಾನೇ ಎಮೋಷನಲ್ ಆಗಿದ್ದಾರೆ. ಕಣ್ಣೀರು ಕೂಡ ಹಾಕಿದ್ದಾರೆ. ತಮ್ಮ ಆ ದಿನಗಳು ನೆನಪಾದವು ಅನ್ನೋದನ್ನು ಹೇಳಿಕೊಂಡಿದ್ದಾರೆ ಅಂತ ಪ್ರಿಯಾ ಇಲ್ಲಿ ಹೇಳಿದ್ದಾರೆ.

ನನ್ನ ಮೀರಿಸಿದಿಯಾ

ಸುದೀಪ್ ಈ ಒಂದು ಮಾತು ಹೇಳಿದ್ದಾರೆ. ಸಂಚಿತ್ ಚಿತ್ರ ನೋಡಿದ್ಮೇಲೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ನನ್ನನ್ನೂ ಮೀರಿಸಿದಿಯಾ ಚಿನ್ನ ಅಂತಲೇ ಸಂಚಿತ್‌ಗೆ ಹೇಳಿದ್ದಾರೆ.

ಸುದೀಪ್ ಅವರ ಈ ಅಭಿಪ್ರಾಯವನ್ನು ಪ್ರಿಯಾ ಸುದೀಪ್ ಇಲ್ಲಿ ಹೇಳಿದ್ದಾರೆ. ಸಂಚಿತ್ ಸಂಜೀವ್ ಚೆನ್ನಾಗಿ ಮಾಡಿದ್ದಾರೆ. ದೊಡ್ಡ ಮಟ್ಟದಲ್ಲಿ ಬೆಳೆಯೋ ಸಾಮರ್ಥ್ಯ ಇದೆ ಅಂತಲೂ ಪ್ರಿಯಾ ಹೇಳಿಕೊಂಡಿದ್ದಾರೆ.

kichcha sudeepa got emotional after watch the mango pachcha Movie

ಜನರ ಜತೆ ಚಿತ್ರ ವೀಕ್ಷಣೆ
ಜನರ ಜತೆ ಚಿತ್ರ ವೀಕ್ಷಣೆ

ಕಿಚ್ಚ ಸುದೀಪ್ ಈ ಚಿತ್ರವನ್ನ ಜನರ ಜೊತೆಗೂ ಒಮ್ಮೆ ನೋಡಲಿದ್ದಾರೆ. ಬೆಂಗಳೂರಿನ ಕೆ.ಜಿ.ರಸ್ತೆಯ ಸಂತೋಷ್ ಥಿಯೇಟರ್‌ಗೆ ಸುದೀಪ್ ಬೆಳಗ್ಗೆ 8.15ಕ್ಕೆನೇ ಬರ್ತಿದ್ದಾರೆ.

ಹಾಗೆ ಬಂದು ಜನರ ಜೊತೆಗೆ ಕುಳಿತು ಈ ಚಿತ್ರ ವೀಕ್ಷಿಸಲಿದ್ದಾರೆ. ಈ ಒಂದು ವಿಚಾರವನ್ನ ಸಿನಿಮಾ ತಂಡವೇ ಅಧಿಕೃತವಾಗಿಯೇ ಹೇಳಿಕೊಂಡಿದೆ. ಇದರೊಟ್ಟಿಗೆ ಈ ಚಿತ್ರಕ್ಕೆ ಮತ್ತಷ್ಟು ಬೂಸ್ಟ್ ಕೂಡ ಸಿಗುತ್ತಿದೆ ಅಂತಲೂ ಹೇಳಬಹುದು.

ಜೂನ್-5 ರಂದು ರಿಲೀಸ್

ಮ್ಯಾಂಗೋ ಪಚ್ಚ ಚಿತ್ರ ಜೂನ್-5 ರಂದು ರಿಲೀಸ್ ಆಗುತ್ತಿದೆ. ರಾಜ್ಯದೆಲ್ಲೆಡೆ ಇದು ತೆರೆ ಕಾಣುತ್ತಿದೆ. ಡೈರೆಕ್ಟರ್ ವಿವೇಕ್ ಈ ಚಿತ್ರ ಡೈರೆಕ್ಷನ್ ಮಾಡಿದ್ದಾರೆ. ಇದು ಇವರ ಮೊದಲ ಚಿತ್ರವೇ ಆಗಿದೆ.

ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್ ಕುಂದರ್ ಇದ್ದಾರೆ. ಈ ಹುಡುಗಿ ಸೂಜಿ ಪಾತ್ರಕ್ಕೆ ಸೂಕ್ತವಾಗಿದ್ದಾರೆ ಅನ್ನೋದನ್ನ ಸುದೀಪ್ ಅವರೆ ಹೇಳಿದ್ದಾರೆ. ಸಿನಿಮಾದಲ್ಲಿ ನಾಗಪ್ಪ ಅನ್ನು ಪಾತ್ರವೂ ಬರುತ್ತದೆ. ಇದನ್ನ ಮಯೂರ್ ಪಟೇಲ್ ಮಾಡಿದ್ರೆ ಸರಿ ಹೋಗುತ್ತದೆ ಅಂತ ಕೂಡ ಹೇಳಿದ್ದರು. ಮಯೂರ್ ಪಟೇಲ್ ಅವರೇ ಈ ಚಿತ್ರದಲ್ಲಿ ಈ ರೋಲ್ ಮಾಡಿದ್ದಾರೆ.

kichcha sudeepa got emotional after watch the mango pachcha Movie

ಮ್ಯಾಂಗೋ ಪಚ್ಚ…
ಚರಣ್ ರಾಜ್ ಸಂಗೀತ

ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಸುದೀಪ್ ಮಗಳು ಸಾನ್ವಿ ಸುದೀಪ್ ಈ ಚಿತ್ರದಲ್ಲಿ ಅರಗಿಣಿ ಅನ್ನುವ ಹಾಡು ಹಾಡಿದ್ದಾರೆ. ಚಿತ್ರದ ರನ್ ಟೈಮ್ ಕಡಿಮೆ ಇದೆ. 1.25 ನಿಮಿಷ ಮಾತ್ರ ಇರೋದು. ಮೂರು ಹಾಡುಗಳು ಮಾತ್ರ ಇವೆ ಅನ್ನುವ ಸುದ್ದಿನೂ ಇದೆ.

ಈ ಚಿತ್ರದ ಮೂಲಕ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಹೀರೋ ಆಗಿದ್ದಾರೆ. ವಿಜಯ್ ರಾಘವೇಂದ್ರ ಅವರ ಅಳಿಯ ಜೈ ಈ ಚಿತ್ರದಲ್ಲಿ ನಟಿಸಿದ್ದಾರೆ. ಸಂಚಿತ್ ಪಾತ್ರದ ಸಹೋದರನ ರೋಲ್ ಅನ್ನೆ ಮಾಡಿದ್ದಾರೆ. ಚೆನ್ನಾಗಿ ಮಾಡಿದ್ದಾರೆ ಅನ್ನುವ ಅಭಿಪ್ರಾಯಗಳೂ ಸಿನಿಮಾ ತಂಡದಿಂದಲೂ ಬಂದಿವೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed