ಕಿಚ್ಚ ಸುದೀಪ್ “ಮ್ಯಾಂಗೋ ಪಚ್ಚ” ಚಿತ್ರ ಯಾವಾಗ ನೋಡ್ತಾರೆ?
(ಚಿತ್ರ ಕೃಪೆ: ಕಿಚ್ಚ ಸುದೀಪ್ ಇನ್‌ಸ್ಟಾಗ್ರಾಮ್)
ಚಿತ್ರ ರಿಲೀಸ್ ಆದ ಮೊದಲ ದಿನವೇ ಥಿಯೇಟರ್‌ಗೆ ಬರ್ತಿದ್ದಾರೆ. ಸಾಮಾನ್ಯವಾಗಿ ಹೀರೋಗಳು ತಮ್ಮ ಚಿತ್ರಗಳನ್ನ ನೋಡಲು ಬೆಳಗಿನ 10 ಗಂಟೆ ಶೋಗೆ ಬರೋದಿದೆ. ಆದರೆ, ಸುದೀಪ್ ತಮ್ಮ ಅಳಿಯನ ಈ ಚಿತ್ರ ವೀಕ್ಷಿಸಲು ಬೆಳಗಿನ ಶೋಗೇನೆ ಬರ್ತಿದ್ದಾರೆ ನೋಡಿ.
ಸುದೀಪ್ ಬೆಳಗ್ಗೆ 8.15 ಶೋಗೇನೆ ಬರ್ತಿದ್ದಾರೆ. ಇಷ್ಟು ಬೇಗ ಬಂದ ಚಿತ್ರ ವೀಕ್ಷಿಸುತ್ತಿದ್ದಾರೆ. ಇದನ್ನ ಸಿನಿಮಾ ತಂಡವೇ ಹೇಳಿಕೊಂಡಿದೆ.
ಮ್ಯಾಂಗೋ ಪಚ್ಚ ಚಿತ್ರ ಜೂನ್-5 ರಂದು ರಿಲೀಸ್ ಆಗುತ್ತಿದೆ. ರಾಜ್ಯದೆಲ್ಲೆಡೆ ಈ ಚಿತ್ರ ರಿಲೀಸ್ ಆಗುತ್ತಿದೆ. ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಅವರಿಗೆ ಇದು ಮೊದಲ ಚಿತ್ರವೇ ಆಗಿದೆ.
ಈ ಚಿತ್ರದಲ್ಲಿ ಅದ್ಭುತವಾಗಿಯೇ ಕಾಣಿಸುತ್ತಿದ್ದಾರೆ. ರಿಷಬ್ ಶೆಟ್ರು ಕೂಡ ಸಂಚಿತ್ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಅಭಿನಯವನ್ನ ಕೊಂಡಾಡಿದ್ದಾರೆ. ಇತರರಿಗೂ ಆ ಫೀಲ್ ಬಂದೇ ಬರುತ್ತದೆ.
ಮೈಸೂರು ಹುಡ್ಗ ಮ್ಯಾಂಗೋ ಪಚ್ಚನ ಕತೆಯನ್ನಇದರಲ್ಲಿ ಹೇಳುತ್ತಿದ್ದಾರೆ. ನ್ಯೂ ಡೈರೆಕ್ಟರ್ ವಿವೇಕ್ ಇಲ್ಲಿ 2002 ನಡೆದ ಸತ್ಯ ಘಟನೆಗಳನ್ನ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ.
ಸುದೀಪ್ ಎಲ್ಲಿ ನೋಡ್ತಾರೆ
(ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್‌ಸ್ಟಾಗ್ರಾಮ್)
ಈ ಚಿತ್ರದಲ್ಲಿ ಗಾಂಜಾ ದಂಧೆಯ ಚಿತ್ರಣ ಇದೆ. ಮೈಸೂರಿನಲ್ಲಿ ಆಗೆಲ್ಲ ಗಾಂಜಾ ಹೇಗೆಲ್ಲ ಮಾರಾಟ ಆಗ್ತಾ ಇತ್ತು. ಅದನ್ನ ಯುವಕರು ಹೇಗೆಲ್ಲ ರಿಸೀವ್ ಮಾಡುತ್ತಿದ್ದರು ಅನ್ನೋದು ಇದರಲ್ಲಿದೆ. ಆದರೆ, ಇದು ಪ್ರಶಾಂತ್ ಅನ್ನುವ ಯುವಕ ಮುಂದೆ ಮ್ಯಾಂಗೋ ಪಚ್ಚ ಆದ ಅನ್ನೋದರ ಕತೆ ಈ ಚಿತ್ರದಲ್ಲಿದೆ.
ಕಾಜಲ್ ಕುಂದರ್ ಈ ಚಿತ್ರದಲ್ಲಿ ನಾಯಕಿ ಆಗಿದ್ದಾರೆ. ಮ್ಯಾಂಗೋ ಪಚ್ಚ ಪಾತ್ರಧಾರಿ ಸಂಚಿತ್ ಸಂಜೀವ್‌ಗೆ ಜೋಡಿ ಆಗಿದ್ದಾರೆ. ಸೂಜಿ ಅನ್ನೋ ಪಾತ್ರವನ್ನೆ ಇಲ್ಲಿ ಮಾಡಿದ್ದಾರೆ.
ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಕೊಟ್ಟಿದ್ದಾರೆ. ಈಗಾಗಲೇ ಹಾಡುಗಳು ರಿಲೀಸ್ ಆಗಿವೆ. ಸುದೀಪ್ ಪುತ್ರಿ ಸಾನ್ವಿ ಸುದೀಪ್ ಈ ಚಿತ್ರದಲ್ಲಿ ಒಂದು ಹಾಡು ಹಾಡಿದ್ದಾರೆ.
ಅರಣಿಗಿ ಅನ್ನುವ ಈ ಗೀತೆ ಗಮನ ಸೆಳೆಯುವಂತೆ ಇದೆ. ಚಿತ್ರದ ಇತರ ಹಾಡು ಅಂತ ಬಂದರೆ, ಖಡಕ್ ಮಾಲ್, ಹಸ್ರವ್ವ ಅನೇಕರಿಗೆ ಇಷ್ಟ ಆಗಿವೆ ಅಂತ ಹೇಳಬಹುದು.












