ಜೊತೆ ಜೊತೆಯಲಿ…
ಇವರು ಬಂದ್ಮೇಲೆ ಕಿಚ್ಚ ಸುದೀಪ್ ಥಿಯೇಟರ್‌ಗೆ ಆಗಮಿಸಿದ್ದರು. ಸಂತೋಷ್ ಥಿಯೇಟರ್‌ನ ಬಾಲ್ಕನಿಯ ಹಿಂದಿನ ಸೀಟ್‌ಗಳಲ್ಲಿಯೇ ಎಲ್ಲರು ಕುಳಿತು ಮ್ಯಾಂಗೋ ಪಚ್ಚ ಚಿತ್ರ ವೀಕ್ಷಿಸುತ್ತಿದ್ದಾರೆ.
ಮ್ಯಾಂಗೋ ಪಚ್ಚ ಚಿತ್ರವನ್ನ ಸುದೀಪ್ ಮತ್ತು ಪ್ರಿಯಾ ಸುದೀಪ್ ಅಕ್ಕ-ಪಕ್ಕ ಕುಳಿತು ನೋಡಿದ್ದಾರೆ. ಒಂದು ಕಡೆಗೆ ಮಗಳು ಇನ್ನೊಂದು ಕಡೆಗೆ ಅಳಿಯ ಕೂಡ ಇದ್ದಾರೆ.
ತಮ್ಮ ಹುಚ್ಚ ಚಿತ್ರಕ್ಕೆ ಹೋಲಿಕೆ ಮಾಡಿ ಖುಷಿಪಟ್ಟಿದ್ದಾರೆ. ಕಣ್ಣೀರು ಹಾಕಿದ್ದಾರೆ. ಇದನ್ನ ಸ್ವತಃ ಪ್ರಿಯಾ ಸುದೀಪ್ ಇತ್ತೀಚಿನ ಡಿಜಿಟಲ್ ಮೀಟ್ ಅಲ್ಲಿ ಹೇಳಿದ್ದಾರೆ.
ಮ್ಯಾಂಗೋ ಪಚ್ಚ ಚಿತ್ರದ ಶೋ ಪ್ಲಾನ್ ಆಗಿದೆ. ಕಿಚ್ಚನ ಮನೆಯಲ್ಲಿಯೇ ಶೋ ನಡೆದಿದೆ. ಕನ್ನಡದ ಅನೇಕ ನಟಿಯರು ನಟರು ಈ ಚಿತ್ರ ವೀಕ್ಷಿಸಿದ್ದಾರೆ.
ರಮೇಶ್ ಅರವಿಂದ್, ಮಾಲಾಶ್ರೀ, ಆರಾಧನಾ, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಅವಿನಾಶ್ ಹಾಗೂ ಮಾಳವಿಕಾ, ಅಭಿಷೇಕ್ ಅಂಬರೀಶ್, ರಘು ಮುಖರ್ಜಿ, ಅನು ಪ್ರಭಾಕರ್ ಹೀಗೆ ಇನ್ನು ಅನೇಕರು ಈ ಚಿತ್ರ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ.
ಅಕ್ಕ-ಪಕ್ಕ ಕುಳಿತು ಮ್ಯಾಂಗೋ ಪಚ್ಚ ನೋಡ್ತಿರೋ ಸುದೀಪ್-ಪ್ರಿಯಾ
ಇವರೆಲ್ಲ ಜೊತೆಗೆ ಚಿತ್ರ ವೀಕ್ಷಿಸಿದ ಕಿಚ್ಚ ಸುದೀಪ್ ಪತ್ನಿ ಜೊತೆಗೆ ಕುಳಿತು ಸಂತೋಷ್ ಥಿಯೇಟರ್ ಅಲ್ಲಿ ಮ್ಯಾಂಗೋ ಪಚ್ಚ ನೋಡುತ್ತಿದ್ದಾರೆ.
ನವ ನಿರ್ದೇಶಕ ವಿವೇಕ್ ಈ ಸಿನಿಮಾ ಡೈರೆಕ್ಷನ್ ಮಾಡಿದ್ದಾರೆ. ಇದು ಇವರ ಮೊದಲ ಚಿತ್ರವೇ ಆಗಿದೆ. ಬಾಲಿವುಡ್ ಅಲ್ಲೂ ಇವರು ರೈಟಿಂಗ್ ವಿಭಾಗದಲ್ಲಿಯೇ ಹೆಚ್ಚು ಕೆಲಸ ಮಾಡಿದ್ದಾರೆ.
ಅಕ್ಕ-ಪಕ್ಕ ಕುಳಿತು ಮ್ಯಾಂಗೋ ಪಚ್ಚ ನೋಡ್ತಿರೋ ಸುದೀಪ್-ಪ್ರಿಯಾ!
ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ ಈ ಚಿತ್ರದಲ್ಲೂ ಹಾಡಿದ್ದಾರೆ. ಮಾರ್ಕ್ ಚಿತ್ರದಲ್ಲಿ ಅಜನೀಶ್ ಲೋಕನಾಥ್ ಸಂಗೀತದಲ್ಲಿ ಮಸ್ತ್ ಮಲೈಕಾ ಹಾಡಿದರು. ಇದು ಹಿಟ್ ಆಗಿತ್ತು. ವೈರಲ್ ಕೂಡ ಆಗಿತ್ತು. ಚಂದನವನ ಕ್ರಿಟಿಕ್ಸ್ ಅವಾರ್ಡ್ ಕೂಡ ತಂದು ಕೊಡ್ತು
ಮ್ಯಾಂಗೋ ಪಚ್ಚ ಚಿತ್ರದಲ್ಲಿ ಚರಣ್ ರಾಜ್ ಸಂಗೀತಕ್ಕೆ ಹಾಡಿದ್ದಾರೆ. ಅರಗಿಣಿ ಅನ್ನುವ ಮಧುರ ಹಾಡಿಗೆ ಧ್ವನಿ ಆಗಿದ್ದಾರೆ. ಚಿತ್ರದಲ್ಲಿ ಖಡಕ್ ಮಾಲ್ ಮತ್ತು ಹಸ್ರವ್ವ ಅನ್ನುವ ಇನ್ನೆರಡು ಹಾಡುಗಳೂ ಇವೆ. ಇವು ಗಮನ ಸೆಳೆದಿವೆ.
ಈ ಚಿತ್ರಕ್ಕೆ ಕಾಜಲ್ ಕುಂದರ್ ನಾಯಕಿ ಆಗಿದ್ದಾರೆ. ಸಂಚಿತ್ ಸಂಜೀವ್ ಜೋಡಿ ಆಗಿದ್ದಾರೆ. ವಿಜಯ್ ರಾಘವೇಂದ್ರ ಅಳಿಯ ಜೈ ಇಲ್ಲಿ ಸಂಚಿತ್ ಸಹೋದರ ರೋಲ್ ಮಾಡಿದ್ದಾರೆ.
ಭಾವನಾ ರಾಮಣ್ಣ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ. ನಟಿ ಹರಿಣಿ, ಮಯೂರ್ ಪಟೇಲ್, ಮ್ಯಾಕ್ಸ್ ಮಂಜು ಸೇರಿದಂತೆ ಇನ್ನು ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಈ ಚಿತ್ರದ ರಿವ್ಯೂ ಮತ್ತು ಫಸ್ಟ್ ಡೇ ರಿಪೋರ್ಟ್ ಬಗ್ಗೆ ಕುತೂಹಲ ಹೆಚ್ಚಾಗಿದೆ ಅಂತ ಹೇಳಹುದು.















