Last Updated:
ಬಿಗ್ ಬಾಸ್ ಪ್ರೋಮೋದಲ್ಲಿ ಸುದೀಪ್ ಕಪ್ಪು ಬಣ್ಣದ ಕಾಸ್ಟೂಮ್ ತೊಟ್ಟಿರೋದ್ಯಾಕೆ? ಈ ಕಪ್ಪು ಬಣ್ಣದಲ್ಲಿಯೇ ಅಡಗಿದೆಯಾ ಇಡೀ ಶೋದ ಕಾನ್ಸೆಪ್ಟ್? ಈ ಎಲ್ಲದರ ಸುತ್ತ ಒಂದಷ್ಟು ವಿವರ ಇಲ್ಲಿದೆ ಓದಿ.
ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್-13 ಶುರು ಆಗುತ್ತಿದೆ. ಕಪ್ಪು ಬಣ್ಣದ ಕಾಸ್ಟೂಮ್ (Black Costume Secrets) ಅಲ್ಲಿಯೇ ಸುದೀಪ್ (Sudeepa) ಅಬ್ಬರಿಸಿದ್ದಾರೆ. ಆದರೆ, ಅದು ಎಕ್ಸಪ್ರೆಷನ್ ಅಲ್ಲಿಯೇ ಕಾಣುತ್ತದೆ. ಒಂದು ಮನೆ, ಒಂದು ಅವಕಾಶ, ಸಾವಿರಾರು ಕನಸುಗಳು ಅನ್ನುವ ಮಾತನ್ನು ಹೇಳ್ತಾರೆ. ಆದರೆ, ಈ ಸಲ ಸೆಲೆಬ್ರಿಟಿಗಳು ಹಾಗೂ ಶ್ರೀಸಾಮಾನ್ಯರು ಒಟ್ಟಿಗೆ ದೊಡ್ಮನೆ ಒಳಗೆ ಹೋಗ್ತಾರೆ ಅನ್ನುವ ಸುದ್ದಿನೂ ಇದೆ. ಇದರ ನಡುವೆ ಸುದೀಪ್ (Sudeepa) ಬ್ಲ್ಯಾಕ್ ಡ್ರೆಸ್ ಹಾಕಿರೋದು ಯಾಕೆ ಅನ್ನುವ ಕುತೂಹಲವೂ ಇದೆ. ಈ ಎಲ್ಲದರ ಒಟ್ಟು ಚಿತ್ರಣದ ಒಂದು ಸ್ಟೋರಿ ಇಲ್ಲಿದೆ ಓದಿ.
ಕಪ್ಪು ಬಣ್ಣದ ಕಾಸ್ಟೂಮ್ ಯಾಕೆ
ಒಂದು ಮನೆ, ಒಂದು ಅವಕಾಶ, ಸಾವಿರಾರು ಕನಸುಗಳು ಅಂತಲೇ ಹೇಳ್ತಾರೆ. ಒಂದು ಸಣ್ಣ ಗ್ಯಾಪ್ ತೆಗೆದುಕೊಂಡು ಹುಬ್ಬು ಮೇಲೆ ಏರಿಸುತ್ತಲೇ ಶುರು ಮಾಡೋಣವಾ ಅಂತಲೇ ಹೇಳ್ತಾರೆ.
ಬಿಗ್ ಬಾಸ್ ಸೀಸನ್-13 ಹೇಗೆ ಇರುತ್ತದೆ. ಈ ಸಲ ಸ್ಪರ್ಧಿಗಳು ಯಾರು? ಸಾಮಾನ್ಯ ಜನರೇ ಸ್ಪರ್ಧಿಗಳು ಅಲ್ಲವೇ? ಸೆಲೆಬ್ರಿಟಿಗಳು ಇರೋದಿಲ್ವೇ?
ಈ ಎಲ್ಲ ಪ್ರಶ್ನೆಗಳೂ ಇವೆ. ಹಾಗೆ ಈ ಬಾರಿ ಸೆಲೆಬ್ರಿಟಿಗಳೂ ಇರುತ್ತಾರೆ. ಸಾಮಾನ್ಯ ಜನರ ಆಡಿಷನ್ ಕೂಡ ಆಗಿದೆ. ಎರಡೂ ಆಗಿರೋದ್ರಿಂದಲೇ ದೊಡ್ಮನೆಗೆ ಇಬ್ಬರೂ ಹೋಗ್ತಾರೆ ಅನ್ನೋದು ಲೆಕ್ಕವು ಇದೆ.
ಬಿಗ್ ಬಾಸ್ ಈ ಸಲ ಸೆಪ್ಟೆಂಬರ್ ತಿಂಗಳಲ್ಲಿಯೇ ಶುರು ಆಗುತ್ತಿದೆ. ಆದರೆ, ಈ ಸಲ ಕಾನ್ಸೆಪ್ಟ್ ಹೇಗೆ ಇರುತ್ತದೆ ಅನ್ನುವ ಕುತೂಹಲವೂ ಇದೆ.
ಬಿಗ್ ಬಾಸ್ ಪ್ರೋಮೋ ವೈರಲ್
ಸಾಮಾನ್ಯವಾಗಿ ಕಿಚ್ಚನ ಪ್ರೋಮೋದಲ್ಲಿಯೇ ಒಟ್ಟು ಬಿಗ್ ಬಾಸ್ ಕಾನ್ಸೆಪ್ಟ್ ರಿವೀಲ್ ಆಗಿರುತ್ತದೆ. ಹಾಗೆ ಈ ಸಲದ ಪ್ರೋಮೋದಲ್ಲಿ ಕಪ್ಪು ಕಾಸ್ಟೂಮ್ ಅನ್ನೆ ಸುದೀಪ್ ಧರಿಸಿದ್ದಾರೆ. ಹಾಗಾಗಿಯೇ ಈ ಸಲ ಖಡಕ್ ಆಗಿಯೇ ಇಡೀ ಶೋ ಇರುವಂತೆ ಕಾಣುತ್ತಿದೆ ನೋಡಿ.
ಬಿಗ್ ಬಾಸ್ ಸೀಸನ್-13 ರ ಪ್ರೋಮೋ ಅಗಸ್ಟ್-2 ರಂದು ರಿಲೀಸ್ ಆಗಿದೆ. ಸಂಜೆ -7 ಗಂಟೆಗೆ ಈ ಪ್ರೋಮೋ ಹೊರ ಬಂದಿದೆ. ಇದು ಹೊರ ಬಂದ ಕೂಡಲೇ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಇಷ್ಟೆಲ್ಲ ಇರೋ ಈ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಇನ್ನುಳಿದಂತೆ ಶುರು ಆಗುವ ಹೊತ್ತಿಗೆ ಇನ್ನು ಯಾವೆಲ್ಲ ಪ್ರೋಮೋ ಬರ್ತವೆ ಅನ್ನುವ ಕುತೂಹಲವು ಇದೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka














