Kiccha Sudeep: ಸುದೀಪ್‌ ಅವರ ಸಂಸ್ಥೆಯಲ್ಲಿ ಕೆಲಸ ಮಾಡೋ ಆಸೆ ಇದೆಯಾ? ಹಾಗಿದ್ದರೆ ಈ ನಂಬರ್‌ಗೆ ನಿಮ್ಮ ಕಥೆ ಕಳಿಸಿ ಸಾಕು! | | ACTPnews

ಅವಕಾಶ


Last Updated:

ಪ್ರಿಯಾ ಸುದೀಪ್ ಅವರ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಸ್ಯಾಂಡಲ್‌ವುಡ್‌ಗೆ ಹೊಸ ಕಥೆಗಳು, ಯುವ ಸ್ಕ್ರಿಪ್ಟ್ ರೈಟರ್‌ಗಳಿಂದ ಕಂಟೆಂಟ್ ಡ್ರಿವನ್ ಸಿನಿಮಾಗಳಿಗಾಗಿ ಕಥೆಗಳನ್ನು ಆಹ್ವಾನಿಸಿದೆ

ಅವಕಾಶ
ಅವಕಾಶ

ಬೆಂಗಳೂರು: ಸಿನಿಮಾ ರಂಗದಲ್ಲಿ (Film Industry) ಏನಾದರೂ ಸಾಧಿಸಬೇಕು, ತಮ್ಮಲ್ಲಿರುವ ಅದ್ಭುತ ಕಥೆಗಳನ್ನು ಬೆಳ್ಳಿತೆರೆಯ ಮೇಲೆ ತರಬೇಕು ಎಂದು ಕನಸು ಕಾಣುತ್ತಿರುವ ಯುವ ಪ್ರತಿಭೆಗಳಿಗೆ ಇಲ್ಲೊಂದು ಭರ್ಜರಿ ಗುಡ್ ನ್ಯೂಸ್ ಇದೆ! ಹೌದು, ಪ್ರಿಯಾ ಸುದೀಪ್ ಅವರು ತಮ್ಮ ‘ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ’ (Supriyanvi Picture Studio) ಮೂಲಕ ಹೊಸ ಪ್ರತಿಭೆಗಳು ಮತ್ತು ಕಥೆಗಾರರಿಗೆ ಸ್ಯಾಂಡಲ್‌ವುಡ್‌ನಲ್ಲಿ ಮುಕ್ತ ಅವಕಾಶ ಕಲ್ಪಿಸಲು ಮುಂದಾಗಿದ್ದಾರೆ.

ಹೊಸ ಕಥೆಗಳಿಗೆ ಆದ್ಯತೆ

ಹೊಸ ಕಥೆಗಳು, ವಿಭಿನ್ನ ಸ್ಕ್ರಿಪ್ಟ್‌ಗಳು ಮತ್ತು ಉದಯೋನ್ಮುಖ ಯುವ ಪ್ರತಿಭೆಗಳ ಹುಡುಕಾಟದಲ್ಲಿರುವ ಸುಪ್ರಿಯಾನ್ವಿ ಪ್ರೊಡಕ್ಷನ್ಸ್, ಇದೀಗ ಅಧಿಕೃತವಾಗಿ ಕಥೆಗಾರರಿಂದ ಕಥೆಗಳನ್ನು ಆಹ್ವಾನಿಸಿದೆ. ಉತ್ತಮ ವಿಷಯಾಧಾರಿತ (Content-driven) ಕಥೆಗಳು, ಇಂದಿನ ಟ್ರೆಂಡ್‌ಗೆ ತಕ್ಕಂತೆ ವೈರಲ್ ಆಗುವ ಪೊಟೆನ್ಷಿಯಲ್ ಹೊಂದಿರುವ ಕಥಾನಕಗಳು, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಭಾವನಾತ್ಮಕ ಹಾಗೂ ಅತ್ಯುತ್ತಮ ದೃಶ್ಯಪೂರ್ಣ (Visual) ಕಥೆಗಳಿಗೆ ಇಲ್ಲಿ ಮೊದಲ ಆದ್ಯತೆ ನೀಡಲಾಗುತ್ತಿದೆ.

ನಿಮ್ಮ ಕಥೆಗಳನ್ನು ಇಲ್ಲಿ ಕಳಸಿ

ಬರವಣಿಗೆಯಲ್ಲಿ ಆಸಕ್ತಿ ಇರುವ ಹೊಸ ಲೇಖಕರು, ಸ್ಕ್ರಿಪ್ಟ್ ರೈಟರ್‌ಗಳು ಹಾಗೂ ತಮ್ಮದೇ ಆದ ವಿಶಿಷ್ಟ ಕಲ್ಪನೆಗಳನ್ನು ಹೊಂದಿರುವವರು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬಹುದು. ಪ್ರಿಯಾ ಸುದೀಪ್ ಅವರ ಈ ನಿರ್ಮಾಣ ಸಂಸ್ಥೆಯು ಯುವ ಪ್ರತಿಭೆಗಳಿಗೆ ಒಂದು ಭರವಸೆಯ ವೇದಿಕೆಯಾಗಲಿದ್ದು, ನಿಮ್ಮ ಅದ್ಭುತ ಕಥೆಗೂ ಜೀವ ತುಂಬುವ ಕಾಲ ಕೂಡಿಬಂದಿದೆ. ಈ ಹಿಂದೆ ಮ್ಯಾಂಗೋ ಪಚ್ಚಾ ಚಿತ್ರವನ್ನು ಈ ನಿರ್ಮಾಣ ಸಂಸ್ಥೆ ಮಾಡಿತ್ತು ಹಾಗೆಯೇ ಮಾರ್ಕ್‌ ಚಿತ್ರವನ್ನೂ ವಿತರಣೆ ಮಾಡಿತ್ತು.

ನಿಮ್ಮ ಕಥೆಗಳನ್ನು ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ವಿವರ ಇಲ್ಲಿದೆ

  1. ಸ್ಟುಡಿಯೋ: ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ (Supriyanvi Picture Studio)
  2. ಮೊಬೈಲ್ ಸಂಖ್ಯೆ: 6363307434



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed