Kerala: ಗುಡ್ಡ ಕುಸಿದ ಊರಲ್ಲಿ ಶೋಕ ಸಾಗರ! ಸಿಗದ ಎಳು ಮಂದಿಯ ಸುಳಿವು, ಕಣ್ಣೀರು ತರಿಸುತ್ತೆ ಕಲ್ಲಾಡಿಯ ದುರಂತ ಕಥೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಕಲ್ಲಾಡಿ ಭೂಕುಸಿತ


Last Updated:

ಪ್ರಕೃತಿಯ ಸೌಂದರ್ಯವನ್ನ ಹೊದ್ದು ಮಲಗಿದ್ದ ಜಾಗವೀಗ, ಅಕ್ಷರಶಃ ಸ್ಮಶಾನದಂತಾಗಿದೆ. ಕೊಚ್ಚಿ ಹೋದವರ ಸುಳಿವು ಸಿಕ್ತಿಲ್ಲ. ಕಣ್ಮರೆಯಾದವ್ರ ಬಗ್ಗೆ ಸಣ್ಣ ಕುರುಹುಗಳೂ ಕಾಣ್ತಿಲ್ಲ. ನರಕಸದೃಷವಾದ ಊರಲ್ಲೀಗ ಬರೀ ಕಣ್ಣೀರ ಕೂಗು ಕೇಳ್ತಿದೆ.

ಕಲ್ಲಾಡಿ ಭೂಕುಸಿತ
ಕಲ್ಲಾಡಿ ಭೂಕುಸಿತ

ದೇವರ ನಾಡಲ್ಲೀಗ ದೇವರೇ ಕಣ್ಮರೆಯಾದಂತೆ ಕಾಣ್ತಿದೆ. ಯಾಕಂದ್ರೆ, ಅಭಿವೃದ್ಧಿ (Development) ಹೆಸರಲ್ಲಿ ಮಾಡಿದ ಹುಚ್ಚಾಟಕ್ಕೆ ಅಮಾಯಕರು ತರಗೆಲೆಗಳಂತೆ ಉದುರಿ ಹೋಗಿದ್ದಾರೆ. ಮುಂಜಾನೆ ಅಪ್ಪಳಿಸಿದ ಜವರಾಯ ಸಿಕ್ಕಿದ್ದನ್ನೆಲ್ಲಾ ಮಸಣ ಮಾಡಿದ್ದಾನೆ. ಮೈಕೊಡವಿ ನಿಂತ ಪ್ರಕೃತಿ (Nature) ಮಾತೆ, ಒಂದೇ ಒಂದು ಕ್ಷಣದಲ್ಲಿ ಎಲ್ಲವನ್ನೂ ಅಲ್ಲೋಲ ಕಲ್ಲೋಲ ಮಾಡಿದೆ. ಹೀಗಾಗಿ ಇಲ್ಲಿ ಉಳಿದಿರೋದು ಬರೀ ಅವಶೇಷ. ಹೇಳ ಹೆಸರಿಲ್ಲದಂತಾಗಿರೋ ಜಗ. ಪ್ರಕೃತಿಯ ಸೌಂದರ್ಯವನ್ನ ಹೊದ್ದು ಮಲಗಿದ್ದ ಜಾಗವೀಗ, ಅಕ್ಷರಶಃ ಸ್ಮಶಾನದಂತಾಗಿದೆ. ಕೊಚ್ಚಿ ಹೋದವರ ಸುಳಿವು ಸಿಕ್ತಿಲ್ಲ. ಕಣ್ಮರೆಯಾದವರ ಬಗ್ಗೆ ಸಣ್ಣ ಕುರುಹುಗಳೂ ಕಾಣ್ತಿಲ್ಲ. ನರಕಸದೃಷವಾದ ಊರಲ್ಲೀಗ ಬರೀ ಕಣ್ಣೀರ ಕೂಗು ಕೇಳ್ತಿದೆ.

ಗುಡ್ಡ ಕುಸಿದ ಊರಲ್ಲಿ ಹೆಣಗಳ ಹುಡುಕಾಟ!

ಜಸ್ಟ್‌ ಎರಡೇ ಎರಡು ವರ್ಷದ ಹಿಂದೆ ಇದೇ ವಯನಾಡು ತಲ್ಲಣಿಸಿ ಹೋಗಿತ್ತು. ಕತ್ತಲ ರಾತ್ರಿಯಲ್ಲಿ ಅಪ್ಪಳಿಸಿದ್ದ ಜವರಾಯ, ಊರಿಗೆ ಊರನ್ನೇ ಸಮಾಧಿ ಮಾಡಿದ್ದ. ಈ ಘಟನೆಯೇ ಇನ್ನೂ ಮಾಸಿಲ್ಲ. ಅಷ್ಟರಲ್ಲೇ ಮತ್ತೊಂದು ಆಪತ್ತು ಬಂದಪ್ಪಳಿಸಿದೆ. ಮೀನಾಕ್ಷಿ ಸೇತುವೆ ಇದ್ದ ಜಾಗದಲ್ಲೀಗ ಬರೀ ಮೌನ ಆವರಿಸಿದೆ. ಎತ್ತ ನೋಡಿದ್ರೂ ಆಳೆತ್ತರದ ಕೆಸರು ರಾಶಿಯೇ ಕಣ್ಣಿಗೆ ಬೀಳ್ತಿದೆ.
ಏಳು ಮಂದಿಯ ಸಣ್ಣ ಸುಳಿವೂ ಇಲ್ಲ

ಕಲ್ಲಾಡಿಯಲ್ಲೀಗ ಬರೀ ಆರ್ತನಾದ ಕೇಳ್ತಿದೆ. ಬೆಳ್ಳಂಬೆಳಗ್ಗೆಯೇ ಶೋಧಕಾರ್ಯಕ್ಕಿಳಿದ ಎನ್‌ಡಿಆರ್‌ಎಫ್‌ ಸಿಬ್ಬಂದಿ, ಮಣ್ಣಲ್ಲಿ ಮಣ್ಣಾದವರಿಗೆ ಮೂಲೆ ಮೂಲೆ ಜಾಲಾಡ್ತಿದ್ದಾರೆ. ಈಗಾಗ್ಲೇ ಐವರು ಹೆಣವಾಗಿ ಸಿಕ್ಕಿದ್ದು, ಏಳು ಮಂದಿಯ ಸಣ್ಣ ಸುಳಿವೂ ಇಲ್ಲ. ಹೀಗಾಗಿ ಯುದ್ಧೋಪಾದಿಯಲ್ಲಿ ಶೋಧಕಾರ್ಯ ನಡೀತಿದೆ. ಆದ್ರೆ, ಬಿಟ್ಟೂ ಬಿಡದೆ ಸುರೀತಿರೋ ಮಳೆಯೇ ದೊಡ್ಡ ಸವಾಲಾಗಿದ್ದು, ಎನ್‌ಡಿಆರ್‌ಎಫ್‌ ಸಿಬ್ಬಂದಿ ಹರಸಾಹಸ ಪಡ್ತಿದ್ದಾರೆ.

ನಿನ್ನೆ ಬೆಳಗ್ಗೆ ಗುಡ್ಡ ಕುಸಿತದ ಸುಳಿವು ಸಿಕ್ತಿದ್ದಂತೆ ಎದ್ನೋ ಬಿದ್ನೋ ಅಂತಾ ಎಲ್ರೂ ಓಡಿ ಬಂದಿದ್ರು. ಜೀವ ಉಳಿಸಿಕೊಳ್ಳೋ ಭರದಲ್ಲಿ ಉಸಿರು ಬಿಗಿ ಹಿಡಿದು ಓಡಿದ್ರು. ಆದ್ರೆ ವಿಧಿಯ ಸಂಚಿನ ಮುಂದೆ ಸತ್ತವರ ಲೆಕ್ಕವೇ ಸಿಕ್ತಿಲ್ಲ. ಇದೊಂದು ಟ್ಯಾಂಕರ್‌ ಇಲ್ಲದೇ ಹೋಗಿದ್ರೆ ಇನ್ನೈವರು ಜೀವಂತ ಸಮಾಧಿ ಆಗ್ತಿದ್ದರು. ಯಮರೂಪದಲ್ಲಿ ಅಪ್ಪಳಿಸಿ ಬಂದಿದ್ದ ಮಣ್ಣಿನ ರಾಶಿಗೆ ಟ್ಯಾಂಕರ್ ಅಡ್ಡಿಯಾಗಿತ್ತು.

ಜಸ್ಟ್‌ ಎರಡೇ ಎರಡು ದಿನದ ಹಿಂದೆ ಈ ಜಾಗ ಸ್ವರ್ಗದಂತಿತ್ತು. ಪ್ರಕೃತಿಯ ಮಡಿಲಲ್ಲಿ ಹರೀತಿದ್ದ ಮೀನಾಕ್ಷಿ ನದಿ ಎಲ್ಲರ ಕಣ್ಮನ ಸೆಳೆಯುತ್ತಿತ್ತು. ಆದ್ರೀಗ ಇದೇ ನದಿಯಲ್ಲಿ ಅದೆಷ್ಟು ಜನ ತೇಲಿ ಹೋದ್ರೋ ಗೊತ್ತಾಗ್ತಿಲ್ಲ. ನದಿಯ ದಡದಲ್ಲಿ ಕಣ್ಣಾಯಿಸಿದಷ್ಟು ದೂರಕ್ಕೂ ಬರೀ ಅವಶೇಷಗಳೇ ಕಾಣ್ತಿವೆ. ಈ ಕ್ಷಣದಕ್ಕೂ ನದಿ ತೀರದಲ್ಲಿ ಬಸ್, ಕಾರ್, ಬೈಕ್‌ಗಳು ತೇಲಾಡ್ತಿವೆ. ಯಮ ಗುಡ್ಡದ ಮಣ್ಣಿನ ರಾಶಿಯಲ್ಲಿ ವಾಹನಗಳೆಲ್ಲಾ ಹುದುಗಿ ಹೋಗಿವೆ.

ಮತ್ತು ಗುಡ್ಡ ಕುಸಿಯುವ ಆತಂಕ

ಬಿಟ್ಟೂ ಬಿಡದೆ ಸುರೀತಿರೋ ಮಳೆ. ಹೆಜ್ಜೆ ಇಡೋದಕ್ಕೂ ಆಗದಂತೆ ಸೃಷ್ಟಿಯಾಗಿರೋ ಮಣ್ಣಿನ ರಾಶಿ. ಇದರ ಮಧ್ಯೆ ಮತ್ತೆ ಮತ್ತೆ ಗುಡ್ಡು ಕುಸಿಯುವ ಆತಂಕ ಕಾಡ್ತಿದೆ. ಕಲ್ಲಾಡಿಯಲ್ಲಿ ಧಾರಾಕಾರ ಮಳೆಯಾಗ್ತಿರೋದ್ರಿಂದ ಮತ್ತೆ ಗುಡ್ಡ ಕುಸಿಯುವ ಆತಂಕ ಕಾಡ್ತಿದೆ. ಸಿಬ್ಬಂದಿ ಕೂಡಾ ಜೀವ ಕೈಲಿ ಹಿಡ್ಕೊಂಡು ಕಾರ್ಯಾಚರಣೆ ನಡೆಸ್ತಿದ್ದು, ಮಳೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇದೇ ಆಪತ್ತಿಗೆ ಕಾರಣ

ಕೆಲ್ಲಾಡಿಯಲ್ಲಿ 170ಕ್ಕೂ ಹೆಚ್ಚು ಸಿಬ್ಬಂದಿ ಶೋಧಕಾರ್ಯ ನಡೆಸ್ತಿದ್ದಾರೆ. ಆದ್ರೆ, ಈವರೆಗೂ ನಾಪತ್ತೆಯಾದವರ ಸುಳಿವು ಸಿಕ್ಕಿಲ್ಲ. ಇದ್ರ ಮಧ್ಯೆ ಗುತ್ತಿಗೆದಾರ ಗಂಡಾಂತರವೊಂದು ಬಿಚ್ಚಿಕೊಂಡಿದೆ. ಇದೇ ಗುಡ್ಡದಲ್ಲಿ ಸುರಂಗ ಮಾರ್ಗ ಮಾಡ್ತಿದ್ರು. ಕಾಮಗಾರಿ ವೇಳೆ ತೆಗೆದಿದ್ದ ಮಣ್ಣನ್ನ ಅಲ್ಲೇ ಇಟ್ಟಿದ್ರು. ಇದು ಜಿಲ್ಲಾಡಳಿತದ ಗಮನಕ್ಕೆ ಬರ್ತಿದ್ದಂತೆ ಕಾಮಗಾರಿ ನಡೆಸ್ತಿದ್ದ KRCL ಹಾಗೂ ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಗೆ ಪತ್ರವನ್ನೂ ಬರೆದಿದ್ರು. ಆದಷ್ಟು ಬೇಗ ಮಣ್ಣನ್ನ ಕ್ಲಿಯರ್‌ ಮಾಡುವಂತೆ ಸೂಚನೆ ನೀಡಿದ್ರು. ಆದ್ರೆ, ಜಿಲ್ಲಾಧಿಕಾರಿ ಮಾತನ್ನ ಕಿವಿ ಮೇಲೆ ಹಾಕೊಂಡಿರ್ಲಿಲ್ಲ. ಇದೇ ಈಗ ಆಪತ್ತಿಗೆ ಕಾರಣವಾಗಿರೋದು. ಗುಡ್ಡ ಕುಸಿತದ ಜೊತೆಗೆ ಭಾರೀ ಪ್ರಮಾಣದ ಮಣ್ಣೂ ಅಪ್ಪಳಿಸಿದೆ.

(ವರದಿ: ಆನಂದ್ ಕೆ.ಎಸ್ ನ್ಯೂಸ್ 18 ಕೇರಳ)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed