Last Updated:
ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಬುಧವಾರ (ಜುಲೈ 1) ಜಿಲ್ಲೆಯ ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡಿದ್ದಾರೆ.
ಕೇರಳ: ಮಳೆಯಾದ್ರೆ ಬೆಳೆ ಚೆನ್ನಾಗಿರುತ್ತೆ. ಬದುಕು ಹಸನಾಗುತ್ತೆ. ಆದ್ರೆ, ಅದ್ಯಾಕೋ ಈ ಬಾರಿ ಮಳೆರಾಯ ಕರುನಾಡಲ್ಲಿ ಮುನಿಸಿಕೊಂಡಿದ್ದಾನೆ. ಅಲ್ಲೊಂದ್ಕಡೆ, ಇಲ್ಲೊಂದ್ಕಡೆ ಮಳೆಯಾಗೋದು ಬಿಟ್ರೆ, ಬಹುತೇಕ ಕಡೆ ಮಳೆಯೇ ಆಗ್ತಿಲ್ಲ. ಇಷ್ಟೊತ್ತಿಗಾಗ್ಲೇ ತುಂಬಿ ತುಳುಕ್ಬೇಕಿದ್ದ ಡ್ಯಾಂಗಳೆಲ್ಲಾ (Dam) ಇನ್ನೂ ಬಣಗುಡ್ತಿವೆ. ಮುಂಗಾರು (Mansoon) ಶುರುವಾಗಿ ಒಂದು ತಿಂಗಳಾದ್ರೂ ಒಂದೇ ಒಂದು ಡ್ಯಾಂ ಸಹ ತುಂಬಿಲ್ಲ. ಕೆರೆ ಕಟ್ಟೆಗಳಿಗೆ ನೀರು ಬಂದಿಲ್ಲ. ಇದು ಇಡೀ ಕರುನಾಡನ್ನೇ ಆತಂಕಕ್ಕೆ ನೂಕಿದೆ. ಆದ್ರೆ, ಇಷ್ಟುದಿನ ಶಾಂತವಾಗಿದ್ದ ವರುಣದೇವ (Rain) ಈಗ ಅಬ್ಬರಿಸೋದಕ್ಕೆ ಶುರು ಮಾಡಿದ್ದಾನೆ.
ಚಿಕ್ಕಮಗಳೂರು ಜಿಲ್ಲೆಯ ತುಮಾಖಾನೆಯಲ್ಲೂ ವರುಣ ಅಬ್ಬರಿಸಿದ್ದು, ಧಾರಾಕಾರ ಮಳೆಗೆ ವಿದ್ಯುತ್ ಕಂಬ ರಸ್ತೆಗೆ ಉರುಳಿದೆ. ಇದೇ ವೇಳೆ ಬಂದ ಕಾರು ಚಾಲಕ ಜಸ್ಟ್ ಮಿಸ್ ಆಗಿದ್ದಾನೆ. ಕಳೆದ 2 ತಿಂಗಳ ಹಿಂದಷ್ಟೇ ಈ ವಿದ್ಯುತ್ ಕಂಬ ಹಾಕಲಾಗಿತ್ತು. ಇದೀಗ ಮತ್ತೆ ನೆಲಕ್ಕುರುಳಿದೆ.
ಇತ್ತ, ಉಡುಪಿ ಜಿಲ್ಲೆಯಲ್ಲಿ ಮುಂಗಾರು ಮಳೆ ಮುಂದುವರಿದಿದ್ದು, ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್ ಘೋಷಣೆ ಮಾಡಿ ಭಾರೀ ಗಾಳಿ-ಮಳೆಯ ಮುನ್ಸೂಚನೆ ನೀಡಿದೆ. ಅಲ್ಲದೇ ತಗ್ಗು ಪ್ರದೇಶಗಳಲ್ಲಿ ನೆರೆ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಮಳೆಯ ಆಗಮನದಿಂದ ರೈತರಲ್ಲಿ ಸಂತಸ ಮೂಡಿದ್ದು, ಭತ್ತದ ಕೃಷಿ ಚಟುವಟಿಕೆ ವೇಗ ಪಡೆದುಕೊಂಡಿದೆ. ಮುಂದಿನ ಒಂದು ವಾರ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Kasaragod,Kerala













