Last Updated:
Karunanidhi’s Granddaughter: ತಮಿಳುನಾಡು ಮಾಜಿ ಸಿಎಂ ಎಂ. ಕರುಣಾನಿಧಿ ಅವರ ಮೊಮ್ಮಗಳು ದರ್ಪ ಮೆರೆದಿದ್ದಾಳೆ. ಕರುಣಾನಿಧಿ ಮೊಮ್ಮಗಳು, ಎಂಕೆ ಅಳಗಿರಿ ಅವರ ಮಗಳು ಕಾಯಲ್ವಿಳಿ ಎಂಬಾಕೆ ಎಸ್ಬಿಐ ಶಾಖೆಯ ಬ್ಯಾಂಕ್ ಮ್ಯಾನೇಜರ್ ಒಬ್ಬರ ಕೆನ್ನೆಗೆ ಬಾರಿಸಿದ್ದಾಳೆ. ಬ್ಯಾಂಕ್ ಮ್ಯಾನೇಜರ್ಗೆ ಕಾಯಲ್ವಿಳಿ ಕಪಾಳಮೋಕ್ಷ ಮಾಡುತ್ತಿರುವ ಸಿಸಿಟಿವಿ ವಿಡಿಯೋ
ಚೆನ್ನೈ: ತಮಿಳುನಾಡು ಮಾಜಿ ಸಿಎಂ (Former Tamil Nadu CM) ಎಂ. ಕರುಣಾನಿಧಿ (M. Karunanidhi) ಅವರ ಮೊಮ್ಮಗಳು ದರ್ಪ ಮೆರೆದಿದ್ದಾಳೆ. ಕರುಣಾನಿಧಿ ಮೊಮ್ಮಗಳು (Karunanidhi’s granddaughter), ಎಂಕೆ ಅಳಗಿರಿ (MK Alagiri) ಅವರ ಮಗಳು ಕಾಯಲ್ವಿಳಿ (kayalvizhi alagiri) ಎಂಬಾಕೆ ಎಸ್ಬಿಐ ಶಾಖೆಯ ಬ್ಯಾಂಕ್ ಮ್ಯಾನೇಜರ್ (SBI Bank Manager) ಒಬ್ಬರ ಕೆನ್ನೆಗೆ ಬಾರಿಸಿದ್ದಾಳೆ. ಬ್ಯಾಂಕ್ ಮ್ಯಾನೇಜರ್ಗೆ ಕಾಯಲ್ವಿಳಿ ಕಪಾಳಮೋಕ್ಷ ಮಾಡುತ್ತಿರುವ ಸಿಸಿಟಿವಿ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗಿದ್ದು, ಪೊಲೀಸರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇನ್ನು ಕರುಣಾನಿಧಿ ಮೊಮ್ಮಗಳ ದರ್ಪದ ವರ್ತನೆಗೆ ಸಾರ್ವಜನಿಕರೂ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಜುಲೈ 20 ರಂದು ಚೆನ್ನೈನ ಅಡ್ಯಾರ್ ಪ್ರದೇಶದ ಎಸ್ಬಿಐ ಎನ್ಆರ್ಐ ಶಾಖೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಆದರೆ ಈ ದೃಶ್ಯಗಳು ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ವ್ಯಾಪಕ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ಮಾಜಿ ಕೇಂದ್ರ ಸಚಿವ ಎಂ.ಕೆ. ಅಳಗಿರಿ ಅವರ ಪುತ್ರಿ ಕಾಯಲ್ವಿಳಿ, ಕಚೇರಿಯೊಳಗೆ ಮ್ಯಾನೇಜರ್ ಜೊತೆ ವಾಗ್ವಾದ ನಡೆಸುತ್ತಿರುವುದನ್ನು ತೋರಿಸಲಾಗಿದೆ.
ಕಾಯಲ್ವಿಳಿ ಹಾಗೂ ಎಸ್ಐಬಿ ಬ್ಯಾಂಕ್ ಮ್ಯಾನೇಜರ್ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಮ್ಯಾನೇಜರ್ ಅವರ ಸನ್ನೆಗಳನ್ನು ಅನುಕರಿಸಿ ಅಣಕಿಸುತ್ತಾ ಕಾಯಲ್ವಿಳಿ, ನಂತರ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿದ್ದ ಮತ್ತೊಬ್ಬ ವ್ಯಕ್ತಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದರು.
ಕಟ್ಟಡದಲ್ಲಿ ಕಾರ್ಯನಿರ್ವಹಿಸದ ಲಿಫ್ಟ್ಗೆ ಸಂಬಂಧಿಸಿದ ಮಾತಿಗೆ ಜಗಳ ಪ್ರಾರಂಭವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಟ್ಟಡವು ಕಾಯಲ್ವಿಳಿಗೆ ಸೇರಿದ್ದು, ಎಸ್ಬಿಐ ಶಾಖೆಗೂ ಸ್ಥಳಾವಕಾಶವಿದೆ ಎಂದು ವರದಿಯಾಗಿದೆ.
On 21.07.2026, Namachivayam, Chief Manager, SBI RBO-II, lodged a complaint stating that Adyar SBI-NRI Branch Manager Harsheen Singh had informed the building owner, Kayalvizhi Alagiri, regarding rectification of a faulty lift as her representative failed to respond. Aggrieved by…
— Stalin SP (@Stalin__SP) July 25, 2026
ಇನ್ನು ಎಸ್ಬಿಐ ಅಧಿಕಾರಿಯ ದೂರಿನ ಮೇರೆಗೆ ಪೊಲೀಸರು ಕಾಯಲ್ವಿಳಿ ವಿರುದ್ಧ ಹಲ್ಲೆ ಮತ್ತು ಬೆದರಿಕೆ ವರ್ತನೆಗಾಗಿ ಎಫ್ಐಆರ್ ದಾಖಲಿಸಿದ್ದಾರೆ. ಬ್ಯಾಂಕಿನ ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದ್ದು, ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಪ್ರಸ್ತುತ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರಿನ ಪ್ರಕಾರ, ಬ್ಯಾಂಕಿನ ಶಾಖಾ ವ್ಯವಸ್ಥಾಪಕಿ ಹರ್ಷಿನ್ ಸಿಂಗ್ ಅವರು ಕಟ್ಟಡದಲ್ಲಿನ ದೋಷಪೂರಿತ ಲಿಫ್ಟ್ ಬಗ್ಗೆ ತಿಳಿಸಲು ಮತ್ತು ಅದನ್ನು ದುರಸ್ತಿ ಮಾಡಲು ಪ್ರತಿನಿಧಿಯ ಮೂಲಕ ಕಾಯಲ್ವಿಳಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ, ಪ್ರತಿನಿಧಿ ಪ್ರತಿಕ್ರಿಯಿಸಲು ವಿಫಲವಾದ ಕಾರಣ, ಸಿಂಗ್ ನೇರವಾಗಿ ಕಾಯಲ್ವಿಳಿಳಿಗೆ ಸಮಸ್ಯೆಯ ಬಗ್ಗೆ ತಿಳಿಸಿರುವುದಾಗಿ ವರದಿಯಾಗಿದೆ.
ಇದರಿಂದ ಕೆರಳಿದ ಕಾಯಲ್ವಿಳಿ ಜುಲೈ 20 ರಂದು ಶಾಖೆಗೆ ಭೇಟಿ ನೀಡಿ ಸಿಂಗ್ ಜೊತೆ ವಾಗ್ವಾದಕ್ಕಿಳಿದರು. ನಂತರ ವ್ಯವಸ್ಥಾಪಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳಮೋಕ್ಷ ಮಾಡಿ ಬೆದರಿಕೆ ಹಾಕಿದರು. ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಶ್ಲೀಲ ಪದಗಳನ್ನು ಉಚ್ಚರಿಸುವುದು, ಅತಿಕ್ರಮಣ, ಸ್ವಯಂಪ್ರೇರಣೆಯಿಂದ ನೋವುಂಟು ಮಾಡುವುದು ಮತ್ತು ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದ ಸೆಕ್ಷನ್ 296(ಬಿ), 329(4), 115(2), 351(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ನೋಡಿದ ಸಾರ್ವಜನಿಕರು, ಕರುಣಾನಿಧಿ ಮೊಮ್ಮಗಳ ದುರ್ವರ್ತನೆಗೆ ಕಿಡಿಕಾರಿದ್ದಾರೆ.














