Last Updated:
IMD ಮೇ 30, 31ಕ್ಕೆ ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಮಳೆ, ಮುಂಗಾರು ಜೂನ್ 7ರ ಸುಮಾರಿಗೆ ದುರ್ಬಲವಾಗಿ ಆಗಮನ ನಿರೀಕ್ಷೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಜನತೆ ಕಣ್ಣು ಮುಚ್ಚಿ ಕಣ್ಣು ಬಿಡುವುದರೊಳಗೆ ರಣಭೀಕರ ಪರಿಸ್ಥಿತಿಯನ್ನು (Situation) ಎದುರಿಸಲಿದ್ದಾರಾ? ಹವಾಮಾನ ಇಲಾಖೆ ನೀಡಿರುವ ಲೇಟೆಸ್ಟ್ ಅಪ್ಡೇಟ್ ನೋಡಿದರೆ ಹೌದು ಎನ್ನಲೇಬೇಕು! ಭಾರತೀಯ ಹವಾಮಾನ ಇಲಾಖೆ (IMD) ವತಿಯಿಂದ ಮೇ 30, 2026 ರಂದು ಸಂಜೆ ಬಿಡುಗಡೆಯಾಗಿರುವ ಅಧಿಕೃತ ಪ್ರಕಟಣೆಯಲ್ಲಿ (Announcement) ಅತ್ಯಂತ ಆತಂಕಕಾರಿ ವಿಷಯವೊಂದು ಬಹಿರಂಗವಾಗಿದೆ. ಮುಂದಿನ ಕೇವಲ 2 ಗಂಟೆಗಳ ಅವಧಿಯಲ್ಲಿ ರಾಜ್ಯದ ಈ ಪ್ರಮುಖ ಜಿಲ್ಲೆಗಳಲ್ಲಿ ಸಿಡಿಲು-ಗುಡುಗು ಸಹಿತ ಬಿರುಗಾಳಿ ಮಳೆ ತಲ್ಲಣ ಸೃಷ್ಟಿಸಲಿದೆ.
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೋಲಾರ, ತುಮಕೂರು ಈ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಬರೋಬ್ಬರಿ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ರಣಭೀಕರ ಗಾಳಿ ಬೀಸಲಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.
ಅಷ್ಟಕ್ಕೇ ಮುಗಿಯಲಿಲ್ಲ, ಹವಾಮಾನ ಇಲಾಖೆಯ ಮತ್ತೊಂದು ವರದಿ ಪ್ರಕಾರ ಮೇ 30 ಮತ್ತು ಮೇ 31 ರಂದು ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಬರೋಬ್ಬರಿ 64.5mm ನಿಂದ 115.5mm ವರೆಗೆ ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯು ಈ ಭಾಗಗಳಿಗೆ ಅಧಿಕೃತವಾಗಿ ‘ಯೆಲ್ಲೋ ಅಲರ್ಟ್’ ಘೋಷಣೆ ಮಾಡಿದೆ!
ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಜೂನ್ 1ರಿಂದ ಮಳೆ ಕಡಿಮೆಯಾಗಿ ಜೂನ್ 7ರಿಂದ ಮುಂಗಾರು ಆಗಮನದ ನಿರೀಕ್ಷೆ ಇದೆ. ರಾಜ್ಯದ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮುಂದಿನ 10 ದಿನಗಳವರೆಗೂ ಮಳೆಯ ಸಾಧ್ಯತೆಗಳು ಕಡಿಮೆಯಾಗಿದೆ.
ಜೂನ್ 7 ರವರೆಗೆ ಮುಂಗಾರು ಬರಲಿದೆ
ರಾಜ್ಯದ ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಮಳೆ ಮೇ 31ರ ತನಕ ಮುಂದುವರಿಯುವ ಲಕ್ಷಣಗಳಿವೆ. ಮುಂಗಾರು ಜೂನ್ 7ರಂದು ಆಗಮನದ ನಿರೀಕ್ಷೆ ಇದ್ದರೂ, ದುರ್ಬಲವಾಗಿರುವ ಸಾಧ್ಯತೆಗಳಿವೆ.
Bangalore [Bangalore],Bangalore,Karnataka













