Last Updated:
ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಕಾವೇರಿ ಮತ್ತು ಕೃಷ್ಣಾ ಬೇಸಿನ್ನ ಪ್ರಮುಖ ಜಲಾಶಯಗಳು ಭರ್ತಿಯಾಗುತ್ತಿವೆ. KRS, ಆಲಮಟ್ಟಿ, ತುಂಗಭದ್ರಾ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ.
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ (Rain) ಚುರುಕುಗೊಂಡಿದ್ದು, ಕಾವೇರಿ ಮತ್ತು ಕೃಷ್ಣಾ ಬೇಸಿನ್ನ ಪ್ರಮುಖ ಜಲಾಶಯಗಳು (Reservoirs) ಭರ್ತಿಯಾಗುತ್ತಿವೆ. ಮಂಡ್ಯದ (Mandya) ಜೀವನಾಡಿ ಕೆ.ಆರ್.ಎಸ್ ಸೇರಿದಂತೆ ಕಾವೇರಿ ಕೊಳ್ಳದ ಜಲಾಶಯಗಳು ಹಾಗೂ ಉತ್ತರ ಕರ್ನಾಟಕದ ಪ್ರಮುಖ ಡ್ಯಾಮ್‍ಗಳಲ್ಲಿ (Dam) ನೀರಿನಮತ ಗಣನೀಯವಾಗಿ ಏರಿಕೆಯಾಗಿದ್ದು, ಜಲಕಳಕಿಯಿಂದ ಕಂಗೊಳಿಸುತ್ತಿವೆ. ಚೆಸ್ಕಾಂ ಹಾಗೂ ಜಲಸಂಪನ್ಮೂಲ ಇಲಾಖೆಯ (Water Resources Department) ಅಧಿಕೃತ ಮಾಹಿತಿಯಂತೆ ರಾಜ್ಯದ ಪ್ರಮುಖ ಅಣೆಕಟ್ಟುಗಳ ಪ್ರಸ್ತುತ ನೀರಿನ ಮಟ್ಟ ಮತ್ತು ಒಳಹರಿವಿನ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಹೇಮಾವತಿ ಅಣೆಕಟ್ಟು: ಗರಿಷ್ಠ 2922 ಅಡಿ ಇದ್ದು, ಪ್ರಸ್ತುತ 2912.70 ಅಡಿಗೆ ತಲುಪಿದೆ (ಶೇ. 77.57 – 28.78 ಟಿಎಂಸಿ ಸಂಗ್ರಹ). ಒಳಹರಿವು 4879 ಕ್ಯೂಸೆಕ್ ಇದೆ.
ಕಬಿನಿ ಅಣೆಕಟ್ಟು: ಶೇ. 93.59 ರಷ್ಟು (19.51 ಟಿಎಂಸಿ) ಭರ್ತಿಯಾಗಿ ಸಕ್ಕತ್ ಸದ್ದು ಮಾಡುತ್ತಿದೆ.
ಆಲಮಟ್ಟಿ ಅಣೆಕಟ್ಟು: ಗರಿಷ್ಠ 1704.81 ಅಡಿಗಳಿದ್ದು, ಪ್ರಸ್ತುತ 1702.37 ಅಡಿಗೆ ತಲುಪಿದೆ. ಶೇ. 90.31 ರಷ್ಟು (111.16 ಟಿಎಂಸಿ) ಭರ್ತಿಯಾಗಿದ್ದು, ಬರೋಬ್ಬರಿ 1,40,257 ಕ್ಯೂಸೆಕ್ ಭಾರಿ ಒಳಹರಿವು ದಾಖಲಾಗಿದೆ.
ತುಂಗಭದ್ರಾ ಅಣೆಕಟ್ಟು: ಶೇ. 56.45 ರಷ್ಟು ಭರ್ತಿಯಾಗಿದ್ದು (59.71 ಟಿಎಂಸಿ), 1,00,750 ಕ್ಯೂಸೆಕ್ ಒಳಹರಿವು ಇದೆ.
ಹಿಡ್ಕಲ್ ಅಣೆಕಟ್ಟು: ಶೇ. 82.28 ರಷ್ಟು (41.96 ಟಿಎಂಸಿ) ತುಂಬಿದ್ದು, 22,693 ಕ್ಯೂಸೆಕ್ ಒಳಹರಿವು ದಾಖಲಾಗಿದೆ.
Bangalore [Bangalore],Bangalore,Karnataka
Aug 05, 2026 10:56 AM IST














