Last Updated:
ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ, ಹಿಡ್ಕಲ್, ಆಲಮಟ್ಟಿ ಭರ್ತಿ. ನಾರಾಯಣಪುರ, ಹೇಮಾವತಿ, ತುಂಗಭದ್ರಾ, ಭದ್ರಾ ಡ್ಯಾಮ್ಗಳಿಂದ ನೀರು ಬಿಡುಗಡೆ. KRS, ಕಬಿನಿ, ಹಾರಂಗಿ ಉತ್ತಮ ಸ್ಥಿತಿಯಲ್ಲಿವೆ.
ಬೆಂಗಳೂರು: ರಾಜ್ಯದಾದ್ಯಂತ ಮಳೆಯ (Rain) ಅಬ್ಬರ ಮುಂದುವರಿದಿದ್ದು, ಪ್ರಮುಖ ಜಲಾಶಯಗಳ (Reservoirs) ನೀರಿನ ಮಟ್ಟದಲ್ಲಿ (Water Level) ಭಾರೀ ಏರಿಕೆಯಾಗಿದೆ. ಸೆಪ್ಟೆಂಬರ್ ತಿಂಗಳ ಈ ನವೀಕೃತ ಅಂಕಿಅಂಶಗಳ ಪ್ರಕಾರ, ಉತ್ತರ ಹಾಗೂ ದಕ್ಷಿಣ ಕರ್ನಾಟಕದ (Karnataka) ಹಲವು ಡ್ಯಾಮ್ಗಳು (Dams) ಭರ್ತಿಯಾಗುವ ಅಂಚಿಗೆ ತಲುಪಿವೆ.
ಹಿಡ್ಕಲ್ ಅಣೆಕಟ್ಟು ಶೇ. 99.63 ರಷ್ಟು ಭರ್ತಿಯಾಗುವ ಮೂಲಕ ಗರಿಷ್ಠ ಮಟ್ಟ ತಲುಪುತ್ತಿದ್ದ, 50.81 ಖಿಒಅ ನೀರು ಸಂಗ್ರಹವಾಗಿದೆ.
ಆಲಮಟ್ಟಿ ಅಣೆಕಟ್ಟು ಕೂಡ ಶೇ. 98.65 ರಷ್ಟು (121.43 TMC) ತುಂಬಿದ್ದು, ಸುರಕ್ಷತೆಯ ದೃಷ್ಟಿಯಿಂದ ಬರೋಬ್ಬರಿ 12,777 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.
ನಾರಾಯಣಪುರ ಅಣೆಕಟ್ಟು ಶೇ. 84.43 ರಷ್ಟು ಭರ್ತಿಯಾಗಿದ್ದು, 12,320 ಕ್ಯೂಸೆಕ್ ಹೊರಹರಿವು ದಾಖಲಾಗಿದೆ.
ಹೇಮಾವತಿ ಅಣೆಕಟ್ಟು ಒಳಹರಿವು ಹೆಚ್ಚಿದ್ದು, ಒಟ್ಟು 9,300 ಕ್ಯೂಸೆಕ್ ನೀರನ್ನು ನದಿ ಹಾಗೂ ಕಾಲುವೆಗಳಿಗೆ ಹರಿಸಲಾಗುತ್ತಿದೆ.
ತುಂಗಭದ್ರಾ ಅಣೆಕಟ್ಟು ಶೇ. 79.22 ರಷ್ಟು (83.81 TMC) ತುಂಬಿದ್ದು, 10,867 ಕ್ಯೂಸೆಕ್ ಹೊರಹರಿವು ಇದೆ.
ಭದ್ರಾ ಅಣೆಕಟ್ಟು ಶೇ. 87.12 ರಷ್ಟು ಭರ್ತಿಯಾಗಿ ರೈತರಲ್ಲಿ ಮುಖಾಮುಖಿ ನಗು ಮೂಡಿಸಿದೆ.
ಕೆ.ಆರ್.ಎಸ್ (KRS) ಅಣೆಕಟ್ಟು ಪ್ರಸ್ತುತ ಶೇ. 55.84 ರಷ್ಟು (27.61 TMC) ಭರ್ತಿಯಾಗಿದೆ. ಒಳಹರಿವು 4,221 ಕ್ಯೂಸೆಕ್ ಇದ್ದರೆ, ಹೊರಹರಿವು 3,252 ಕ್ಯೂಸೆಕ್ ಇದೆ.
ಹಾರಂಗಿ ಅಣೆಕಟ್ಟು ಶೇ. 74.07 ರಷ್ಟು ಭರ್ತಿಯಾಗಿ ಉತ್ತಮ ಸಂಗ್ರಹ ಹೊಂದಿದೆ.
ನದಿ ಪಾತ್ರದ ಕೆಳಭಾಗದ ಜನರಿಗೆ ಈಗಾಗಲೇ ಆಡಳಿತದಿಂದ ಎಚ್ಚರಿಕೆ ನೀಡಲಾಗಿದ್ದು, ಸುರಕ್ಷಿತ ಸ್ಥಳಗಳಲ್ಲಿರಲು ಸೂಚಿಸಲಾಗಿದೆ.
ಮುಂಗಾರು ಮಳೆಯನ್ನು ನಂಬಿ ಬೆಳೆ ಹಾಕಿರುವ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರ ಪರಿಸ್ಥಿತಿ ಈಗ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ, ಭರ್ತಿಯಾಗುವ ಹಂತಕ್ಕೆ ಬಂದಿದ್ದ ಜಲಾಶಯಗಳು ಮತ್ತೆ ಖಾಲಿಯಾಗುತ್ತಿರುವುದು ಅನ್ನದಾತರ ನಿದ್ದೆಗೆಡಿಸಿದೆ. ಬೆಳೆಗಳಿಗೆ ನೀರು ಹಾಯಿಸುವುದೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.














