Karnataka Dam Water Level: ಮಳೆ ಜೋರಾದರೂ KRS ಇನ್ನೂ ತುಂಬಿಲ್ಲ! ಹಾರಂಗಿ, ಆಲಮಟ್ಟಿ ಭರ್ತಿಯತ್ತ; ರಾಜ್ಯದ ಡ್ಯಾಂಗಳ ಹೊಸ ಚಿತ್ರಣ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

Karnataka Dam Water Level: ಮಳೆ ಜೋರಾದರೂ KRS ಇನ್ನೂ ತುಂಬಿಲ್ಲ! ಹಾರಂಗಿ, ಆಲಮಟ್ಟಿ ಭರ್ತಿಯತ್ತ; ರಾಜ್ಯದ ಡ್ಯಾಂಗಳ ಹೊಸ ಚಿತ್ರಣ | ಬೆಂಗಳೂರು ನಗರ ನ್ಯೂಸ್ (Bengaluru Urban News)


ಕಾವೇರಿ ಜಲಾನಯನದ ಡ್ಯಾಂಗಳ ಸ್ಥಿತಿ

ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಲ್ಲಿ ಹಾರಂಗಿ ಜಲಾಶಯವು ಅತ್ಯಂತ ವೇಗವಾಗಿ ಭರ್ತಿಯಾಗುತ್ತಿದ್ದು, ಪ್ರಸ್ತುತ 7.986 ಟಿಎಂಸಿ (TMC) ನೀರಿನ ಸಂಗ್ರಹದೊಂದಿಗೆ ಶೇಕಡಾ 93.95% ನಷ್ಟು ಭರ್ತಿಯಾಗಿದೆ. ಇನ್ನು ಹೇಮಾವತಿ ಜಲಾಶಯದಲ್ಲಿ 23.045 ಟಿಎಂಸಿ ನೀರು ಲಭ್ಯವಿದ್ದು, ಇದು ತನ್ನ ಒಟ್ಟು ಸಾಮರ್ಥ್ಯದ 62.11% ನಷ್ಟಿದೆ. ಹಾಗೆಯೇ ಕಬಿನಿ ಜಲಾಶಯದಲ್ಲಿ 13.277 ಟಿಎಂಸಿ ನೀರು ಸಂಗ್ರಹವಾಗಿದ್ದು, 68.03% ನಷ್ಟು ಭರ್ತಿಯಾಗಿದೆ. ಆದರೆ, ಈ ಭಾಗದ ಅತ್ಯಂತ ಪ್ರಮುಖ ಜಲಾಶಯವಾದ ಕೃಷ್ಣರಾಜ ಸಾಗರ (KRS) ನಲ್ಲಿ ಪ್ರಸ್ತುತ 17.051 ಟಿಎಂಸಿ ನೀರು ಮಾತ್ರ ಸಂಗ್ರಹವಿದ್ದು, ಇದು ತನ್ನ ಸಾಮರ್ಥ್ಯದ ಕೇವಲ 34.48% ನಷ್ಟಿದೆ.

*ಹಾರಂಗಿ ಭರ್ತಿಯತ್ತ

ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದಲ್ಲಿ 8.50 ಟಿಎಂಸಿ ಸಾಮರ್ಥ್ಯದಲ್ಲಿ 7.986 ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವು 4,914 ಕ್ಯೂಸೆಕ್ ಇದ್ದು, ಕೇವಲ 180 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.

*ಹೇಮಾವತಿಯಲ್ಲಿ ಸ್ಥಿರ ಏರಿಕೆ

ಹೇಮಾವತಿ ಜಲಾಶಯದಲ್ಲಿ 23.045 ಟಿಎಂಸಿ ನೀರು ಸಂಗ್ರಹವಾಗಿದ್ದು, ಇದು ಒಟ್ಟು ಸಾಮರ್ಥ್ಯದ 62.11% ಆಗಿದೆ. ಜಲಾಶಯಕ್ಕೆ 3,068 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 450 ಕ್ಯೂಸೆಕ್ ಹೊರಹರಿವು ದಾಖಲಾಗಿದೆ.

*ಕಬಿನಿ 68% ಭರ್ತಿ

ಕಬಿನಿ ಜಲಾಶಯದಲ್ಲಿ 13.277 ಟಿಎಂಸಿ ನೀರು ಲಭ್ಯವಿದ್ದು, ಒಟ್ಟು ಸಾಮರ್ಥ್ಯದ 68.03% ನೀರು ಸಂಗ್ರಹವಾಗಿದೆ. ಒಳಹರಿವು 2,369 ಕ್ಯೂಸೆಕ್, ಹೊರಹರಿವು 500 ಕ್ಯೂಸೆಕ್ ಇದೆ.

*KRS ಇನ್ನೂ 35% ಕೂಡ ತಲುಪಿಲ್ಲ

ಕೃಷ್ಣರಾಜ ಸಾಗರ ಜಲಾಶಯದಲ್ಲಿ ಕೇವಲ 17.051 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದ್ದು, ಇದು 34.48% ಸಾಮರ್ಥ್ಯಕ್ಕೆ ಸಮನಾಗಿದೆ. ಜಲಾಶಯಕ್ಕೆ 726 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 1,576 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.

ಉತ್ತರ ಕರ್ನಾಟಕದ ಪ್ರಮುಖ ಜಲಾಶಯಗಳ ಸ್ಥಿತಿ

*ಆಲಮಟ್ಟಿ ಮುಂಚೂಣಿಯಲ್ಲಿ

ಆಲಮಟ್ಟಿ ಜಲಾಶಯದಲ್ಲಿ 108.03 ಟಿಎಂಸಿ ನೀರು ಸಂಗ್ರಹವಾಗಿದ್ದು, ಇದು ಒಟ್ಟು ಸಾಮರ್ಥ್ಯದ 87.77% ಆಗಿದೆ. ಜಲಾಶಯಕ್ಕೆ 88,228 ಕ್ಯೂಸೆಕ್ ಒಳಹರಿವು ಇದ್ದು, 67,500 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.

*ನಾರಾಯಣಪುರವೂ ಭರ್ತಿಯ ಹಂತದಲ್ಲಿ

ನಾರಾಯಣಪುರ ಜಲಾಶಯದಲ್ಲಿ 31.23 ಟಿಎಂಸಿ ನೀರು ಸಂಗ್ರಹವಾಗಿದ್ದು, 93.75% ಸಾಮರ್ಥ್ಯ ತಲುಪಿದೆ. ಜಲಾಶಯಕ್ಕೆ 66,692 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 23,805 ಕ್ಯೂಸೆಕ್ ನೀರು ಹೊರಹರಿಯುತ್ತಿದೆ.
*ತುಂಗಭದ್ರದಲ್ಲಿ ಇನ್ನೂ ಕಡಿಮೆ ಸಂಗ್ರಹ

ತುಂಗಭದ್ರ ಜಲಾಶಯದಲ್ಲಿ 30.385 ಟಿಎಂಸಿ ನೀರು ಸಂಗ್ರಹವಾಗಿದ್ದು, ಇದು ಕೇವಲ 28.72% ಸಾಮರ್ಥ್ಯವಾಗಿದೆ.

ಇತರೆ ಪ್ರಮುಖ ಜಲಾಶಯಗಳು

ಭದ್ರ – 35.982 TMC (50.30%) ಹಿಡಕಲ್ – 28.356 TMC (55.60%) ಮಲಪ್ರಭಾ – 14.706 TMC (38.98%) ವಾಣಿವಿಲಾಸ ಸಾಗರ – 23.51 TMC (78.37%)

ರೈತರಿಗೆ ಸೂಚನೆ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed