Kannada Super Star: ರಾಮ, ರಾವಣ, ಆಂಜನೇಯ ಮೂರು ಪಾತ್ರದಲ್ಲಿ ನಟಿಸಿದ ಕನ್ನಡದ ಏಕೈಕ ನಟ ಯಾರು? | | ACTPnews

ರಾಮ, ರಾವಣ, ಆಂಜನೇಯ ಮೂರು ಪಾತ್ರದಲ್ಲಿ ನಟಿಸಿದ ಕನ್ನಡದ ಏಕೈಕ ನಟ ಯಾರು?


Last Updated:

ಅಣ್ಣಾವ್ರು ರಾವಣನ ರೋಲ್ ಮಾಡಿದ್ದಾರೆ. ಶ್ರೀರಾಮನ ಪಾತ್ರದಲ್ಲೂ ನಟಿಸಿದ್ದಾರೆ. ಅಷ್ಟೆ ಯಾಕೆ ಆಂಜನೇಯನ ರೋಲ್ ಕೂಡ ಮಾಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ರಾಮ, ರಾವಣ, ಆಂಜನೇಯ ಮೂರು ಪಾತ್ರದಲ್ಲಿ ನಟಿಸಿದ ಕನ್ನಡದ ಏಕೈಕ ನಟ ಯಾರು?
ರಾಮ, ರಾವಣ, ಆಂಜನೇಯ ಮೂರು ಪಾತ್ರದಲ್ಲಿ ನಟಿಸಿದ ಕನ್ನಡದ ಏಕೈಕ ನಟ ಯಾರು?

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ರಾಮಾಯಣ ಟ್ರೈಲರ್ ಹೆಚ್ಚು ವೈರಲ್ ಆಗಿದೆ. ಎಲ್ಲರೂ ಈ ಬಗ್ಗೆ ಮಾತನಾಡುತ್ತಿದ್ದಾರೆ. ಕಾಮೆಂಟ್‌ ಹೊಡೆಯೋರು ಇದ್ದಾರೆ. ಇದರ ನಡುವೆ ಒಂದು ಪ್ರಶ್ನೆ ಬರುತ್ತದೆ. ಈ ಹಿಂದೆ ಕನ್ನಡದಲ್ಲಿ ರಾವಣ (Ravana) ರೋಲ್ ಯಾರು ಮಾಡಲೇ ಇಲ್ವೇ? ಈ ಪ್ರಶ್ನೆಗೆ ಉತ್ತರವೂ ಇದೆ. ರಾವಣನ ಪಾತ್ರದಲ್ಲಿ ದೇವರಾಜ್ ನಟಿಸಿದ್ದಾರೆ. ವಜ್ರಮುನಿ ಅವರೂ ಅಭಿನಯಿಸಿದ್ದಾರೆ. ಆದರೆ ಇವರ ನಡುವೆ ರಾಜಕುಮಾರ್ (Rajkumar) ವಿಶೇಷ ಅನಿಸುತ್ತಾರೆ. ರಾಮ, (Ram) ರಾವಣ ಮತ್ತು ಆಂಜನೇಯ ಹೀಗೆ ಮೂರು ಪಾತ್ರಗಳನ್ನ ಇವರು ಪ್ರತ್ಯೇಕ ಮೂರು ಸಿನಿಮಾಗಳಲ್ಲಿ ಮಾಡಿದ್ದಾರೆ. ಈ ವಿಶೇಷತೆಯ ಇನ್ನಷ್ಟು ವಿವರ ಇಲ್ಲಿದೆ ಓದಿ.

ರಾಜಕುಮಾರ್ ಸಿನಿಮಾಗಳು

ರಾಜಕುಮಾರ್ ಅವರು ಭೂಕೈಲಾಸ ಚಿತ್ರದಲ್ಲಿ ರಾವಣನ ಪಾತ್ರ ಮಾಡಿದ್ದಾರೆ. ಈ ಚಿತ್ರ ಫೆಬ್ರವರಿ-5, 1958 ರಂದು ರಿಲೀಸ್ ಆಗಿತ್ತು. ಕೆ.ಶಂಕರ್ ಇದನ್ನ ಡೈರೆಕ್ಷನ್ ಮಾಡಿದ್ದರು.
Sandalwood Vetran Actor rajkumar acted as Ravana Ram Hanuman Three Different Movies

ಭೂಕೈಲಾಸ ಚಿತ್ರದಲ್ಲಿ ರಾವಣನ ಪಾತ್ರ

ಈ ಪಾತ್ರವನ್ನು ಕೂಡ ಜನ ಮೆಚ್ಚಿದ್ದರು. ರಾವಣನಾಗಿಯೇ ರಾಜಕುಮಾರ್ ಇಲ್ಲಿ ಅಬ್ಬರಿಸಿದ್ದರು. ಆ ರೀತಿಯ ಈ ಪಾತ್ರ ಅಣ್ಣಾವ್ರಿಗೆ ಹೆಸರು ತಂದುಕೊಟ್ಟಿತ್ತು.

ರಾಮನ ಪಾತ್ರದಲ್ಲಿ ಅಣ್ಣಾವ್ರು

ರಾಮಾಂಜನೇಯ ಯುದ್ಧ ಚಿತ್ರ ಡಿಸೆಂಬರ್-17,1963 ರಲ್ಲಿ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ರಾಜಕುಮಾರ್ ಅವರು ಶ್ರೀರಾಮನ ಪಾತ್ರ ಮಾಡಿದ್ದರು.

ರಾಮನ ಪರಮ ಭಕ್ತ ಆಂಜನೇಯನ ಪಾತ್ರವನ್ನ ನಟ ಉದಯಕುಮಾರ್ ಮಾಡಿದ್ದರು. ಇವರ ಈ ಚಿತ್ರವನ್ನ ಎಂ.ನಾಗೇಶ್ವರ್ ರಾವ್ ಹಾಗೂ ಎಂ.ಎಸ್.ನಾಯಕ್ ಡೈರೆಕ್ಷನ್ ಮಾಡಿದ್ದರು.

ಅಣ್ಣಾವ್ರ ಆಂಜನೇಯನ ರೋಲ್

ಅಣ್ಣಾವ್ರು ಆಂಜನೇಯನ ರೋಲ್ ಕೂಡ ಮಾಡಿದ್ದಾರೆ. ದೂರದ ಬೆಟ್ಟ ಚಿತ್ರದಲ್ಲಿ ಹಳ್ಳಿ ಯುವಕರು ನಾಟಕ ಮಾಡುತ್ತಾರೆ. ಲಂಕಾ ದಹನ ಅನ್ನುವ ನಾಟಕವನ್ನೆ ಇವರು ಮಾಡುತ್ತಾರೆ.

Sandalwood Vetran Actor rajkumar acted as Ravana Ram Hanuman Three Different Movies

ರಾಮನ ಪಾತ್ರದಲ್ಲಿ ಅಣ್ಣಾವ್ರು

ಈ ಒಂದು ದೃಶ್ಯ ಶೂಟ್ ಕೂಡ ಆಗಿದೆ. ಚಿತ್ರದ ಫೈನಲ್ ಕಾಪಿಯಲ್ಲೂ ಇತ್ತು. ಆದರೆ, ಅಣ್ಣಾವ್ರು, ವರದರಾಜ್, ಡೈರೆಕ್ಟರ್ ಸಿದ್ದಲಿಂಗಯ್ಯನವರು ಈ ಚಿತ್ರವನ್ನ ನೋಡಿದ್ದಾರೆ. ಆದರೆ, ಲಂಕಾ ದಹನ ನಾಟಕದ ದೃಶ್ಯ ತೆಗೆಯಬೇಕು ಅಂತಲೂ ಅನಿಸಿದೆ. ಹಾಗಾಗಿಯೇ ಇದನ್ನ ತೆಗೆದಿದ್ದಾರೆ.

ಯಾಕ್ ತೆಗೆದರು..?

ಈ ಚಿತ್ರದಲ್ಲಿ ಲಂಕಾ ದಹನ ನಾಟಕದ ಆಂಜನೇಯನ ಪಾತ್ರದಲ್ಲಿ ಹಾಸ್ಯವು ಇದೆ. ಕಾರಣ, ಹಳ್ಳಿ ಯುವಕರು ಈ ಒಂದು ನಾಟಕ ಮಾಡುವಾಗ ಆಗುವ ಆಬಾಸಗಳನ್ನೆ ಇಲ್ಲಿ ಹಾಸ್ಯ ರೂಪದಲ್ಲಿಯೇ ಚಿತ್ರೀಕರಣ ಮಾಡಿದ್ದರು.

Sandalwood Vetran Actor rajkumar acted as Ravana Ram Hanuman Three Different Movies

ಅಣ್ಣಾವ್ರ ಆಂಜನೇಯನ ರೋಲ್(ಚಿತ್ರ ಕೃಪೆ: ಪ್ರಗತಿ ಅಶ್ವತ್ಥ್ ನಾರಾಯಣ್ ಫೇಸ್ ಬುಕ್ ಪೇಜ್)

ಚಿತ್ರ ನೋಡಿದ್ಮೇಲೆ ರಾಜಕುಮಾರ್, ವರದಾಜ್, ಸಿದ್ದಲಿಂಗಯ್ಯನವರಿಗೆ ಈ ದೃಶ್ಯ ಬೇಡ ಅನಿಸಿದೆ. ನಾವೆಲ್ಲ ರಂಗಭೂಮಿಯಿಂದಲೇ ಬಂದವರು. ಯುವಕರ ನಾಟಕ ಪ್ರೇಮವನ್ನ ನಾವು ಪ್ರೋತ್ಸಾಹಿಸಬೇಕು ಹೊರತು, ಹಾಸ್ಯ ಮಾಡಬಾರದು ಅಂತಲೇ ಈ ದೃಶ್ಯ ತೆಗೆದಿದ್ದಾರೆ.

ಈ ವಿಚಾರವನ್ನ ಪ್ರಗತಿ ಅಶ್ವತ್ಥ್ ನಾರಾಯಣ್ ಅವರ ಫೇಸ್ ಬುಕ್ ಅಲ್ಲಿಯೇ ಬರೆದುಕೊಂಡಿದ್ದಾರೆ. ಇವರು ಈ ದೂರದ ಬೆಟ್ಟ ಚಿತ್ರಕ್ಕೆ ಸ್ಥಿರ ಛಾಯಾಗ್ರಾಹಕರಾಗಿಯೇ ಕೆಲಸ ಮಾಡಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed