Last Updated:
ಸ್ಟಾರ್ ಸುವರ್ಣ ವಾಹಿನಿ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಸೀರಿಯಲ್ ಮುಕ್ತಾಯ ಆಗಿದೆ. ಈ ಸೀರಿಯಲ್‌ನ ಕೊನೆಯ ಸಂಚಿಕೆ ಈ ಭಾನುವಾರ ಪ್ರಸಾರ ಆಗುತ್ತಿದೆ. ಈ ಬಗೆಗಿನ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.
ಸ್ಟಾರ್ ಸುವರ್ಣ ವಾಹಿನಿಯ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಸೀರಿಯಲ್ (Udho Udho Sri Renuka Yellamma Serial) ಮುಕ್ತಾಯ ಆಗಿದೆ. ಸಾವಿರಾರು ಸಂಚಿಕಗಳು ಈಗಾಗಲೇ ಪ್ರಸಾರ ಆಗಿವೆ. ಇವುಗಳಲ್ಲಿ ರೇಣುಕಾ ಮತ್ತು ಯಲಮ್ಮನ (Renuka Yellamma) ಬಾಲ್ಯದಿಂದ ಕಥೆ ಹೇಳ್ತಾನೇ ಬರಲಾಗಿದೆ. ಪ್ರತಿ ಹಂತದಲ್ಲೂ ಬೇರೆ ಬೇರೆ ಕಲಾವಿದರು ರೇಣುಕಾ ಮತ್ತು ಯಲಮ್ಮನ ಅವರ ಆಯಾ ಪಾತ್ರ ಮಾಡಿದ್ದಾರೆ. ಈ ರೀತಿ ಕಥೆ ಬೆಳೆಯುತ್ತಲೆ ಸೀರಿಯಲ್ ಪ್ರಿಯರನ್ನ ಇದು ರಂಜಿಸಿದೆ. ಆದರೆ, ಇದೀಗ ಈ ಸೀರಿಯಲ್ ಕ್ಲೈಮ್ಯಾಕ್ಸ್ (Serial Climax) ಹಂತಕ್ಕೆ ಬಂದಿದೆ. ಈ ಭಾನುವಾರ ಇದರ ಕೊನೆಯ ಸಂಚಿಕೆ ಪ್ರಸಾರ ಆಗುತ್ತಿದೆ. ಈ ಬಗೆಗಿನ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.
ಈ ಭಾನುವಾರ ಕೊನೆ ಸಂಚಿಕೆ
ರೇಣುಕಾ ಮತ್ತು ಯಲ್ಲಮ್ಮ ಇದೀಗ ಒಂದೇ ಆಗಿದ್ದಾರೆ. ಅಂದ್ರೆ ಒಂದೇ ದೇಹ ಆಗಿದ್ದಾರೆ. ಸಮಾಜದಲ್ಲಿರೋ ದುಷ್ಟ ಶಕ್ತಿಗಳನ್ನ ಹೊಡೆದು ಹಾಕುವ ಕೆಲಸ ಮಾಡುತ್ತಿದ್ದಾರೆ. ಈ ಹಂತಕ್ಕೆ ಬಂದ ಸೀರಿಯಲ್‌ನ ಇದೀಗ ಕೊನೆ ಆಗುತ್ತಿದೆ.
ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಸೀರಿಯಲ್ ಈಗಾಗಲೇ ಸುಮಾರು 1,100 ಸಂಚಿಕೆ ಪೂರ್ಣಗೊಳಿಸಿದೆ. ರೇಣುಕಾ ಮತ್ತು ಯಲ್ಲಮ್ಮನರ ಬಾಲ್ಯ-ಹದಿಹರೆಯ-ಮದುವೆ-ಮಕ್ಕಳು ಹೀಗೆ ಎಲ್ಲ ಹಂತದಲ್ಲೂ ಅಷ್ಟೆ ವಿಶೇಷವಾಗಿಯೇ ಪ್ರತಿ ಸಂಚಿಕೆಯಲ್ಲೂ ಕಥೆಯನ್ನ ಹೇಳಲಾಗಿದೆ.
ಈ ಒಂದು ಸೀರಿಯಲ್ ಅದ್ಧೂರಿಯಾಗಿಯೆ ಬಂದಿದೆ. ಗ್ರಾಫಿಕ್ಸ್ ಸೇರಿದಂತೆ ಎಲ್ಲ ವಿಚಾರದಲ್ಲೂ ಇದು ಅಷ್ಟೆ ವೈಭವದಿಂದಲೆ ಬಂದಿದೆ.
ಊಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಸೀರಿಯಲ್ ಚೆನ್ನಾಗಿಯೇ ಬಂದಿದೆ. ಜನರನ್ನ ರಂಜಿಸುತ್ತಲೆ ಬಂದಿದೆ. ಆರಂಭದಿಂದಲೂ ಈ ಸೀರಿಯಲ್ ಉತ್ತಮ ರೇಟಿಂಗ್ ಪಡೆದಿದೆ.
ಪ್ರತಿ ದಿನ ರಾತ್ರಿ 9 ಗಂಟೆಗೆ ಪ್ರಸಾರ
ಈಗಲೂ ಈ ಸೀರಿಯಲ್ ಟಾಪ್ ರೇಟೆಡ್ ಸೀರಿಯಲ್ ಅಂತ ಸ್ಟಾರ್ ಸುವರ್ಣ ವಾಹಿನಿ ಅಧಿಕೃತವಾಗಿ ಮಾಹಿತಿ ಕೊಡುತ್ತದೆ. ಈ ಸೀರಿಯಲ್ ಅಲ್ಲಿ ಜಮದಗ್ನಿ ಪಾತ್ರದ ಎಂಟ್ರಿನೂ ಜನರ ಮೆಚ್ಚುಗೆ ಪಡೆದುಕೊಂಡಿದೆ.
ಈ ಸೀರಿಯಲ್ ಅಲ್ಲಿ ಜಮದಗ್ನಿ ತನ್ನ ತಾಯಿಯ ತಲೆ ಕಡಿಯುವ ಸೀನ್ ಕೂಡ ಬರುತ್ತದೆ. ಇದನ್ನ ಅಷ್ಟೆ ಅದ್ಭುತವಾಗಿಯೆ ತೋರಲಾಗಿದೆ.
ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಸೀರಿಯಲ್ ಪ್ರತಿ ದಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿತ್ತು. ಇನ್ನು ಈ ಜಾಗದಲ್ಲಿ ಫಸ್ಟ್ ಟೈಮ್ ಫ್ಯಾಮಿಲಿ ಫಿಕ್ಷನ್ ಸೀರಿಯಲ್ ಪ್ರಸಾರ ಆಗುತ್ತಿದೆ.
ಸ್ಟಾರ್ ಸುವರ್ಣ ಅಲ್ಲಿ 2020 ರಿಂದ 2026 ರವರೆಗೂ ರಾತ್ರಿ 9 ಗಂಟೆಗೆ ಪೌರಾಣಿಕ ಕಥೆಗಳೇ ಪ್ರಸಾರ ಆಗಿವೆ. ಆದರೆ, ಇನ್ಮುಂದೆ ಇಲ್ಲಿ ಫ್ಯಾಮಿಲಿ ಫಿಕ್ಷನ್ ಸೀರಿಯಲ್ ಪ್ರಸಾರ ಆಗುತ್ತಿದೆ ಅಂತ ಸ್ಟಾರ್ ಸುವರ್ಣ ವಾಹಿನಿ ಅಧಿಕೃತ ಮಾಹಿತಿ ಕೊಟ್ಟಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka













