ಸ್ವಾತಿಷ್ಟ ಕೃಷ್ಣನ್
ಈ ಚಿತ್ರಗಳಲ್ಲದೆ ತಮಿಳಿನಲ್ಲಿ ಸವರಕತ್ತಿ ಹಾಗೂ ವಿಕ್ರಮ್ ಚಿತ್ರದಲ್ಲೂ ನಟಿಸಿದ್ದಾರೆ. ತೆಲುಗು ಸಿನಿಮಾ ಅಂತ ಬಂದ್ರೆ, ಗುಂಡೇ ಕಥಾ ವಿಂಟಾರ ಚಿತ್ರದಲ್ಲಿ ಸ್ವಾತಿಷ್ಟ ಕೃಷ್ಣನ್ ಅಭಿನಯಿಸಿದ್ದಾರೆ.
ಸದ್ಯದ ಅತಿಕಾಯ ಚಿತ್ರದಲ್ಲಿ ಸ್ವಾತಿಷ್ಟ ಕೃಷ್ಣನ್ ಪ್ರಮುಖ ರೋಲ್ ಮಾಡಿದ್ದಾರೆ. ಚಿತ್ರದಲ್ಲಿ ಹಾಗೆ ಬಂದ ಹೀಗೆ ಹೋಗುವ ರೋಲ್ ಇದಲ್ಲ ಬಿಡಿ.
ಅತಿಕಾಯ ಚಿತ್ರದಲ್ಲಿ ಮಾಸ್ ಎಲಿಮೆಂಟ್ಸ್ ಇವೆ. ಈ ಒಂದು ಚಿತ್ರಕ್ಕೆ ನಿರೂಪ್ ಭಂಡಾರಿ ಸಖತ್ ಆಗಿಯೇ ರೆಡಿ ಆಗಿದ್ದಾರೆ. ಅಲ್ಲದೆ ಈ ಚಿತ್ರ ಸದ್ಯ ಕೊನೆಯ ಹಂತದ ಚಿತ್ರೀಕರಣದ ತಯಾರಿಯಲ್ಲಿಯೇ ಇದೆ.
ಈಗಾಗಲೆ ಈ ಚಿತ್ರದ ಬಹುತೇಕ ಕೆಲಸ ಕಂಪ್ಲೀಟ್ ಆಗಿದೆ. ಕೊನೆಯ ಹಂತದ ಚಿತ್ರೀಕರಣಕ್ಕೆ ಬೇಕಿರೋ ತಯಾರಿಯನ್ನು ಡೈರೆಕ್ಟರ್ ನಾಗರಾಜ್ ಪೀಣ್ಯ ಮಾಡಿಕೊಳ್ಳುತ್ತಿದ್ದಾರೆ.
ಈ ಚಿತ್ರವನ್ನ ರಿಯಲಿಸ್ಟಿಕ್ ಆಗಿಯೇ ಪ್ಲಾನ್ ಮಾಡಲಾಗಿದೆ. ಹಾಗಾಗಿಯೇ ಬೆಂಗಳೂರಿನ ಜನಜಂಗುಳಿ ಪ್ರದೇಶದಲ್ಲಿಯೇ ಈ ಚಿತ್ರದ ಶೂಟಿಂಗ್ ಮಾಡಲಾಗಿದೆ.
ಹಾಗೆ ಈ ಚಿತ್ರದ ನಾಯಕ ನಟ ನಿರೂಪ್ ಭಂಡಾರಿ ದೇಹವನ್ನ ದಂಡಿಸಿದ್ದಾರೆ. ಚಿತ್ರದ ಪಾತ್ರಕ್ಕಾಗಿಯೇ ಸಾಕಷ್ಟು ಬದಲಾಗಿದ್ದಾರೆ. ಗೆಟಪ್ ಕೂಡ ಚೇಂಜ್ ಆಗಿದೆ.
ಡಿಫರಂಟ್ ಲುಕ್ ಅಲ್ಲಿ ನಿರೂಪ್
ನಿರೂಪ್ ಭಂಡಾರಿ ಈ ಚಿತ್ರಕ್ಕಾಗಿಯೇ ಕಂಪ್ಲೀಟ್ ಚೇಂಜ್ ಆಗಿದ್ದಾರೆ. ಈ ಹಿಂದಿನ ಚಿತ್ರಗಳಲ್ಲಿ ಚಾಕೋಲೆಟ್ ಬಾಯ್, ಲವರ್ ಬಾಯ್ ರೀತಿಯ ಪಾತ್ರವನ್ನೆ ಮಾಡಿದ್ದಾರೆ.
ಆದರೆ, ಈ ಅತಿಕಾಯ ಚಿತ್ರದಲ್ಲಿ ನಿರೂಪ್ ಬದಲಾಗಿದ್ದಾರೆ. ತಮ್ಮ ಎಂದಿನ ಗೆಟಪ್ ಬದಲಿಸಿದ್ದಾರೆ. ರಗಡ್ ಲುಕ್ ಅಲ್ಲಿಯೇ ಇಲ್ಲಿ ಹೊಳೆಯುತ್ತಿದ್ದಾರೆ.
ಈ ಚಿತ್ರದಲ್ಲಿ ಹರೀಶ್ ರಾಯ್, ದಿನೇಶ್ ಮಂಗ್ಳೂರು, ಬಿ.ಸುರೇಶ, ಕಾಕ್ರೋಚ್ ಸುಧೀ, ವಜ್ರಧೀರ್ ಜೈನ್, ವರ್ಧನ್ ತೀರ್ಥಹಳ್ಳಿ, ಮಹಾಂತೇಶ್ ಹಾಗೂ ಜಾಕ್ ಜಾಲಿ ಸೇರಿದಂತೆ ಇನ್ನು ಅನೇಕ ಕಲಾವಿದರು ಅಭಿನಯಿಸಿದ್ದಾರೆ.
ಉದಯಲೀಲಾ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ. ಸಚಿನ್ ಬಸ್ರೂರು ಮ್ಯೂಸಿಕ್ ಮಾಡಿದ್ದಾರೆ. ಹಾಗೆ ಡೈರೆಕ್ಟರ್ ನಾಗರಾಜ್ ಪೀಣ್ಯ ಅವರು ಈ ಹಿಂದಿನ ನಮಕ್‌ಹರಾಮ್, ಪದೇ ಪದೇ ಚಿತ್ರ ಮಾಡಿದ್ದಾರೆ.
ಇದೀಗ ಅತಿಕಾಯ ಹೆಸರಿನ ಚಿತ್ರ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಕೊನೆ ಹಂತದ ಚಿತ್ರೀಕರಣಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಅಂತ ಹೇಳಬಹುದು.











