Last Updated:
Kangana Ranaut: ಸಿಜೆಪಿ ವಕ್ತಾರ್ ಸೌರವ್ ದಾಸ್, ಕಂಗನಾ ಮಾತನ್ನು ಅವರ ಬಿಜೆಪಿ ಪಕ್ಷದವರೇ ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ ಎಂದಿದ್ದರು. ಇದಕ್ಕೆ ಕೌಂಟರ್ ನೀಡಿರುವ ಕಂಗನಾ, ಸೌರವ್ ದಾಸ್ರನ್ನು ನಿರುದ್ಯೋಗಿ ಅಂತ ಟೀಕಿಸಿದ್ದಾರೆ! ನಿನ್ನ ವಯಸ್ಸಲ್ಲಿ ನಾನು 2 ರಾಷ್ಟ್ರಪ್ರಶಸ್ತಿ ಪಡೆದಿದ್ದೆ ಅಂತ ಛೇಡಿಸಿದ್ದಾರೆ.
ದೆಹಲಿ: ಬಾಲಿವುಡ್ ನಟಿ ಕಮ್ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಸಿಜೆಪಿ (CJP) ವಿರುದ್ಧ ಗರಂ ಆಗಿದ್ದಾರೆ. ಸಿಜೆಪಿ ಜಂತರ್ ಮಂತರ್ ಪ್ರತಿಭಟನೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕಂಗನಾ, ಪ್ರಧಾನಿಯವರ ದಿವಂಗತ ತಾಯಿ (Modi’s Mother) ಬಗ್ಗೆ ಅಶ್ಲೀಲವಾಗಿ ಮಾತನಾಡುವ ಇವರೆಲ್ಲ ಯಾವ ಸೀಮೆ ವಿದ್ಯಾರ್ಥಿಗಳು ಅಂತ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಜೆಪಿ ವಕ್ತಾರ್ ಸೌರವ್ ದಾಸ್ (CJP spokesperson Saurav Das), ಕಂಗನಾ ಮಾತನ್ನು ಅವರ ಬಿಜೆಪಿ ಪಕ್ಷದವರೇ ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ ಎಂದಿದ್ದರು. ಇದಕ್ಕೆ ಕೌಂಟರ್ ನೀಡಿರುವ ಕಂಗನಾ, ಸೌರವ್ ದಾಸ್ರನ್ನು ನಿರುದ್ಯೋಗಿ (unemployed) ಅಂತ ಟೀಕಿಸಿದ್ದಾರೆ! ನಿನ್ನ ವಯಸ್ಸಲ್ಲಿ ನಾನು 2 ರಾಷ್ಟ್ರಪ್ರಶಸ್ತಿ (National Awards) ಪಡೆದಿದ್ದೆ ಅಂತ ಛೇಡಿಸಿದ್ದಾರೆ.
ಜಂತರ್ ಮಂತರ್ ಹಾಗೂ ದೆಹಲಿಯ ಇತರೆಡೆ ಜೆನ್ ಝಿ ಯುವಕರು, ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ, ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಾಕಾರರು ಬಳಸಿದ್ದ ಭಾಷೆ ಮತ್ತು ಇನ್ಸ್ಟಾಗ್ರಾಮ್ ಪೋಸ್ಟ್ಗಳನ್ನು ‘ವಾಂತಿ ಹುಟ್ಟಿಸುವ ಪೋಸ್ಟ್’ ಅಂತ ನಟಿ, ಸಂಸದೆ ಕಂಗನಾ ರಣಾವತ್ ಟೀಕಿಸಿದ್ದರು. ನನ್ನ ಜೀವನದಲ್ಲಿ ಎಂದಿಗೂ ಒಂದೇ ಸ್ಥಳದಲ್ಲಿ ಇಷ್ಟೊಂದು ಕೊಳಕುತನವನ್ನು ನಾನು ನೋಡಿಲ್ಲ ಅಂತ ಟೀಕಿಸಿದ್ದರು.
ನಮ್ಮ 75 ವರ್ಷದ ಪ್ರಧಾನಿಯನ್ನು ಗುರಿಯಾಗಿಸಿಕೊಂಡು ಅವರ ದಿವಂಗತ ತಾಯಿಯ ಮೇಲೆ ಕೆಟ್ಟ ನಿಂದನೆ ಮಾಡಲಾಯಿತು. ನಾವು ಕೂಡ ವಿದ್ಯಾರ್ಥಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದೇವೆ. ಆದರೆ ಇವರು ಯಾವ ರೀತಿಯ ವಿದ್ಯಾರ್ಥಿಗಳು ಅಂತ ಕಂಗನಾ ಪ್ರಶ್ನಿಸಿದ್ದಾರೆ. ಅವರು ಯಾವ ರೀತಿಯ ಅಶ್ಲೀಲ ಭಾಷೆಯನ್ನು ಬಳಸುತ್ತಿದ್ದಾರೆ? ಅವರು ಯಾವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಹೋಲುತ್ತಾರೆ? ಅಂತ ಅವರು ಖಾರವಾಗಿ ಪ್ರಶ್ನಿಸಿದ್ದರು.
ಕಂಗನಾ ಹೇಳಿಕೆಗೆ ಸಿಜೆಪಿ ವಕ್ತಾರ ಸೌರವ್ ದಾಸ್ ತಿರುಗೇಟು ನೀಡಿದ್ದರು. ಕಂಗನಾ ರನೌತ್ ಅವರನ್ನು ಅವರದೇ ಪಕ್ಷದವರು ಗಂಭೀರವಾಗಿ ಪರಿಗಣಿಸುವುದಿಲ್ಲ. ಯುವ ಪೀಳಿಗೆಯವರೂ ಅವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಕಿಚಾಯಿಸಿದ್ದರು. ಅಲ್ಲದೇ ಸಂಸದೆಯಾಗಿ ಕೆಲಸ ಎಷ್ಟು ಕಷ್ಟ ಎಂಬುದನ್ನು ಅವರು ತಾವೇ ಒಪ್ಪಿಕೊಂಡಿದ್ದಾರೆ ಎಂದು ಕಾಲೆಳೆದಿದ್ದರು.
ಇನ್ನು ಸೌರವ್ ದಾಸ್ ಟೀಕೆಗೆ ಕಂಗನಾ ರಣಾವತ್ ತಿರುಗೇಟು ನೀಡಿದ್ದಾರೆ. ನಾನು ಕಳೆದ ಎರಡು ವರ್ಷಗಳಿಂದ ರಾಜಕೀಯದಲ್ಲಿದ್ದೇನೆ, ಆದರೆ ಕಳೆದ 20 ವರ್ಷಗಳಿಂದ ನಾನು ಸಾರ್ವಜನಿಕ ಜೀವನದಲ್ಲಿದ್ದೇನೆ. ಸೌರವ್ ದಾಸ್ ಅವರ ವಯಸ್ಸಿನಲ್ಲಿ, ನನಗೆ ಎರಡು ರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ ಎಂದಿದ್ದಾರೆ.
ಹೊಸ ಸಂಸದೆಯಾಗಿ ನಾನು ಎಲ್ಲಾ ಕೆಲಸಗಳಿಂದ ಬ್ಯುಸಿಯಾಗಿದ್ದೆ. ಯಾಕೆಂದರೆ ನಾನು ಚಲನಚಿತ್ರ ನಿರ್ಮಾಪಕಿ, ಕಲಾವಿದೆ, ಚಿತ್ರಕಥೆಗಾರ್ತಿ, ಉದ್ಯಮಿ ಕೂಡ ಆಗಿದ್ದೇನೆ. ಆದರೆ ಸಂಪೂರ್ಣವಾಗಿ ನಿಷ್ಪ್ರಯೋಜಕ ಮತ್ತು ನಿರುದ್ಯೋಗಿಯಾಗಿರುವ ಅವರಂತಹ ವ್ಯಕ್ತಿಗೆ ಯಾವುದೇ ವಯಸ್ಸಿನಲ್ಲಿ ಎಲ್ಲಾ ಸಮಯದಲ್ಲೂ ಭಾರಿ ಬೇಡಿಕೆಯಲ್ಲಿರುವುದು ಎಂದರೆ ಏನೆಂದು ಎಂದಿಗೂ ಅರ್ಥವಾಗುವುದಿಲ್ಲ ಎಂದು ಕಂಗನಾ ರಣಾವತ್ ಟೀಕಿಸಿದ್ದಾರೆ.
ಇನ್ನು ಮುಂದುವರೆದ ಕಂಗನಾ ರಣಾವತ್, ಸೌರವ್ ದಾಸ್ಗೆ ಕೆಲ ಸಲಹೆಗಳನ್ನು ನೀಡಿದ್ದಾರೆ. ಪ್ರಿಯ ಸೌರವ್, ನಿಮ್ಮ ಸಮಸ್ಯೆಗಳು ವೈಯಕ್ತಿಕ. ನೀವು ವಿದ್ಯಾರ್ಥಿಯಲ್ಲ. ನೀವು ಸರಳವಾಗಿ ನಿಷ್ಪ್ರಯೋಜಕರು, ಕೆಲವು ಕೌಶಲ್ಯಗಳನ್ನು ಕಲಿಯುವುದರೊಂದಿಗೆ ಹೊಸ ಕೆಲಸ ಪ್ರಾರಂಭಿಸಲು ಇದು ಒಳ್ಳೆಯ ಸ್ಥಳ ಎಂದು ಕಂಗನಾ ಖಾರವಾಗಿ ತಿರುಗೇಟು ನೀಡಿದ್ದಾರೆ.
Delhi,Delhi,Delhi














