Job Alert: ತಿಂಗಳಿಗೆ 1 ಲಕ್ಷ ಸಂಬಳ ಸಿಗೋ ನೌಕರಿ ಬೇಕೆ? ಬಿದ್ದಾಯ್ತು ಸರ್ಕಾರದ ಮುದ್ರೆ, ಪದವೀಧರರೇ ತಯಾರಾಗಿ! | ಉದ್ಯೋಗ ಸುದ್ದಿ | ACTPnews

ನೇಮಕಾತಿ


Last Updated:

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಫುಡ್ ಟೆಕ್ನಾಲಜಿ, ಬಯೋಟೆಕ್ನಾಲಜಿ, ಡೈರಿ ಟೆಕ್ನಾಲಜಿ, ಮೈಕ್ರೋಬಯಾಲಜಿ, ಕೆಮಿಸ್ಟ್ರಿ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ಲಭ್ಯವಾಗುವ ನಿರೀಕ್ಷೆಯಿದೆ. ಅಧಿಕೃತ ಅಧಿಸೂಚನೆ ಶೀಘ್ರದಲ್ಲೇ ಪ್ರಕಟವಾಗಲಿದೆ.

ನೇಮಕಾತಿ
ನೇಮಕಾತಿ

ಬೆಂಗಳೂರು: ಸರ್ಕಾರಿ ನೌಕರಿಗಾಗಿ (Government Job) ಚಾತಕ ಪಕ್ಷಿಯಂತೆ ಕಾಯುತ್ತಿರುವ ರಾಜ್ಯದ ನಿರುದ್ಯೋಗಿ ಯುವಕ-ಯುವತಿಯರಿಗೆ ಇದೊಂದು ಅಕ್ಷರಶಃ ಬಂಪರ್ ಆಫರ್! ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ‘ಆಹಾರ ಸುರಕ್ಷತಾ ವಿಭಾಗ’ದಲ್ಲಿ ಬಹಳ ವರ್ಷಗಳಿಂದ ಧೂಳು ಹಿಡಿಯುತ್ತಿದ್ದ ಬರೋಬ್ಬರಿ 84 ವಿವಿಧ ವೃಂದದ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ (Direct Recruitment) ಮೂಲಕ ಭರ್ತಿ ಮಾಡಲು ರಾಜ್ಯ ಸರ್ಕಾರ ಅಧಿಕೃತ ಗ್ರೀನ್ ಸಿಗ್ನಲ್ ಕೊಟ್ಟಿದೆ! ಸದ್ಯದಲ್ಲೇ KEA ಅಧಿಕೃತ ವೆಬ್‌ಸೈಟ್‌ನಲ್ಲಿ ವಿಸ್ತೃತ ಅಧಿಸೂಚನೆ ಪ್ರಕಟವಾಗಲಿದ್ದು, ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರು ಈ ಬೃಹತ್ ಅವಕಾಶವನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬಾರದು!

84 ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದಕ್ಕೂ ಇದೇ ಆರೋಗ್ಯ ಇಲಾಖೆಯ ಅಧೀನ ಕಾರ್ಯದರ್ಶಿಗಳು ಕಳೆದ ಜುಲೈ 8 ರಂದು ಕೇವಲ ಕಲ್ಯಾಣ ಕರ್ನಾಟಕ (HK) ವೃಂದದ 22 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದ್ದರು. ಆದರೆ, ಇದೀಗ ಆ ಹಳೆಯ ಆದೇಶವನ್ನು ಸಂಪೂರ್ಣವಾಗಿ ರದ್ದುಗೊಳಿಸಿ (Withdrawn), ಅದರ ಬದಲಾಗಿ ರಾಜ್ಯಾದ್ಯಂತ ಉಳಿಕೆ ಮೂಲ ವೃಂದ (RPC) ಹಾಗೂ ಕಲ್ಯಾಣ ಕರ್ನಾಟಕ ವೃಂದವನ್ನು (HK) ಒಳಗೊಂಡಂತೆ ಒಟ್ಟು 84 ಹುದ್ದೆಗಳ ಸಮಗ್ರ ನೇಮಕಾತಿಗೆ ಅಸ್ತು ಎಂದಿರುವುದು ನಿಜಕ್ಕೂ ಲಕ್ಷಾಂತರ ಅಭ್ಯರ್ಥಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.

ಅರ್ಜಿ ಹಾಕಲು ಶೈಕ್ಷಣಿಕ ಅರ್ಹತೆ ಏನಿರಬೇಕು ಗೊತ್ತೇ?

ಹಾಗಾದರೆ ಈ ಹುದ್ದೆಗಳಿಗೆ ಅರ್ಜಿ ಹಾಕಲು ಶೈಕ್ಷಣಿಕ ಅರ್ಹತೆ ಏನಿರಬೇಕು ಗೊತ್ತೇ? ಅಂಗೀಕೃತ ವಿಶ್ವವಿದ್ಯಾಲಯದಿಂದ ಫುಡ್ ಟೆಕ್ನಾಲಜಿ (Food Technology), ಫುಡ್ ಸೈನ್ಸ್, ಡೈರಿ ಟೆಕ್ನಾಲಜಿ (Dairy Technology), ಬಯೋಟೆಕ್ನಾಲಜಿ, ಅಥವಾ ಆಯಿಲ್ ಟೆಕ್ನಾಲಜಿಯಲ್ಲಿ ಬ್ಯಾಚುಲರ್ಸ್ ಅಥವಾ ಮಾಸ್ಟರ್ಸ್ ಡಿಗ್ರಿ (B.Sc / B.Tech / B.E / M.Sc / M.Tech) ಪಡೆದವರಿಗೆ ಇಲ್ಲಿ ಮೊದಲ ಆದ್ಯತೆ! ಅಷ್ಟೇ ಅಲ್ಲ, ಅಗ್ರಿಕಲ್ಚರ್ ಸೈನ್ಸ್, ಬಯೋಕೆಮಿಸ್ಟ್ರಿ, ಮೈಕ್ರೋಬಯಾಲಜಿ, ಹಾಗೂ ಕೆಮಿಸ್ಟ್ರಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದವರೂ ಅರ್ಜಿ ಸಲ್ಲಿಸಬಹುದು. ಇನ್ನು ವೆಟರ್ನರಿ ಸೈನ್ಸ್, ಹಾಗೂ ವೈದ್ಯಕೀಯ ಕ್ಷೇತ್ರದ ಪದವೀಧರರಿಗೂ (MBBS, BDS, BAMS, BHMS, BUMS) ಭರ್ಜರಿ ಅವಕಾಶವಿದ್ದು, ಕೆಲವು ನಿಯಮಗಳ ಅನ್ವಯ ಪಿಎಚ್‌ಡಿ (Ph.D.) ಮುಗಿಸಿದವರೂ ಅರ್ಹರಾಗುತ್ತಾರೆ. ಇದರ ಜೊತೆಗೆ ಕನಿಷ್ಠ ಕಂಪ್ಯೂಟರ್ ಜ್ಞಾನ (Computer Knowledge) ಕಡ್ಡಾಯ ಅಥವಾ ಅಪೇಕ್ಷಣೀಯವಾಗಿರಲಿದೆ ಎಂಬುದನ್ನು ಮರೆಯುವಂತಿಲ್ಲ.

ನೇಮಕಾತಿಗೆ ವಯೋಮಿತಿ ಎಷ್ಟಿರಬೇಕು?

ಇದನ್ನೂ ಓದಿ: CIMS Recruitment: ವೈದ್ಯರಿಗೆ ಭರ್ಜರಿ ಗುಡ್‍ನ್ಯೂಸ್, ಚಾಮರಾಜನಗರ ವೈದ್ಯಕೀಯ ಸಂಸ್ಥೆಯಲ್ಲಿ 49 ಹುದ್ದೆಗಳ ನೇಮಕಾತಿ!

ಈ ಬೃಹತ್ ನೇಮಕಾತಿಗೆ ವಯೋಮಿತಿ ಎಷ್ಟಿರಬೇಕು ಎಂಬ ಕುತೂಹಲವೇ? ನಿರೀಕ್ಷಿತ ಅಂದಾಜಿನ ಪ್ರಕಾರ, ಸಾಮಾನ್ಯ (General) ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 18 ರಿಂದ ಗರಿಷ್ಠ 35-38 ವರ್ಷ, ಒಬಿಸಿ (2A, 2B, 3A, 3B) ವರ್ಗದವರಿಗೆ 18 ರಿಂದ 38-40 ವರ್ಷ ಹಾಗೂ ಎಸ್‌ಸಿ/ಎಸ್‌ಟಿ (SC/ST) ವರ್ಗದ ಅಭ್ಯರ್ಥಿಗಳಿಗೆ 18 ರಿಂದ 40-43 ವರ್ಷಗಳವರೆಗೆ ಅವಕಾಶವಿರಲಿದೆ. ಜೊತೆಗೆ ಕರ್ನಾಟಕ ಸರ್ಕಾರದ ನಿಯಮಾನುಸಾರ ವಿಕಲಚೇತನರು (PwBD) ಹಾಗೂ ಮಾಜಿ ಸೈನಿಕರಿಗೆ (Ex-SM) ವಯೋಮಿತಿ ಸಡಿಲಿಕೆ ಕೂಡ ಸಿಗಲಿದೆ! ಆಹಾರ ಸುರಕ್ಷತಾಧಿಕಾರಿ (FSO) ಹುದ್ದೆಗಳು ಅತ್ಯಂತ ಬೇಡಿಕೆ ಹಾಗೂ ಆಕರ್ಷಕ ವೇತನ ಶ್ರೇಣಿಯನ್ನು ಹೊಂದಿರುವುದರಿಂದ ಪೈಪೋಟಿ ತೀವ್ರವಾಗಿರಲಿದೆ, ಈ ಹುದ್ದೆಗೆ 60 ಸಾವಿರದಿಂದ 97 ಸಾವಿರದವರೆಗೆ ಆಕರ್ಷಕ ಸಂಬಳವಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed