Janumada Jodi: ಆ ನಟಿಯ ಕಣ್ಣು ತುಂಬಾ ಚೆನ್ನಾಗಿವೆ; ಕನಕ ಪಾತ್ರಕ್ಕೆ ನೋಡಿ ಎಂದಿದ್ದರು ಶಿವರಾಜ್ ಕುಮಾರ್! ಮುಂದೇನಾಯ್ತು ಗೊತ್ತಾ? | | ACTPnews

ಆ ನಟಿಯ ಕಣ್ಣುಗಳು ತುಂಬಾ ಚೆನ್ನಾಗಿವೆ; ಕನಕ ಪಾತ್ರಕ್ಕೆ ನೋಡಿ ಎಂದಿದ್ದರು ಶಿವರಾಜ್ ಕುಮಾರ್!


Last Updated:

ಜನುಮದ ಜೋಡಿ ಚಿತ್ರದ ನಾಯಕಿಯ ಆಯ್ಕೆ ಕಥೆ ಇಂಟ್ರಸ್ಟಿಂಗ್ ಆಗಿದೆ. ಕನ್ನಡದ ನಟಿಯರಿಗೆ ಮೊದಲ ಆದತ್ಯೆ ಕೊಡಬೇಕು ಅನ್ನೋ ಯೋಚನೆನೂ ಇತ್ತು. ಕೊನೆಗೆ ಅದು ಆಗದೇ ಇದ್ದಾಗ ಶಿವಣ್ಣ ಒಂದು ಸಲಹೆ ಕೊಟ್ಟರು. ಆ ನಟಿಯ ಕಣ್ಣುಗಳು ಚೆನ್ನಾಗಿವೆ ಅಂತ ಹೇಳಿದರು. ಮುಂದೆ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ.

ಆ ನಟಿಯ ಕಣ್ಣುಗಳು ತುಂಬಾ ಚೆನ್ನಾಗಿವೆ; ಕನಕ ಪಾತ್ರಕ್ಕೆ ನೋಡಿ ಎಂದಿದ್ದರು ಶಿವರಾಜ್ ಕುಮಾರ್!
ಆ ನಟಿಯ ಕಣ್ಣುಗಳು ತುಂಬಾ ಚೆನ್ನಾಗಿವೆ; ಕನಕ ಪಾತ್ರಕ್ಕೆ ನೋಡಿ ಎಂದಿದ್ದರು ಶಿವರಾಜ್ ಕುಮಾರ್!

ಜನುಮದ ಜೋಡಿ ಚಿತ್ರ (Janumada Jodi Film) ಎಲ್ಲ ಕಾಲಕ್ಕೂ ಎಲ್ಲರಿಗೂ ಇಷ್ಟವಾಗುವ ಚಿತ್ರವೇ ಆಗಿದೆ. ಈಗಲೂ ರಿಯಾಲಿಟಿ ಶೋಗಳಲ್ಲಿ ಈ ಚಿತ್ರದ ಹಾಡುಗಳಿಗೆ ಸ್ಪರ್ಧಿಗಳು ಪರ್ಫಾರ್ಮ್ ಮಾಡುತ್ತಾರೆ. ಅದರಲ್ಲು ಶಿವರಾಜ್‌ ಕುಮಾರ್ (Shiva Rajkumar) ಮುಂದೇನೆ ಅಂತಹ ಪರ್ಫಾಮೆನ್ಸ್ ಕೊಡುವ ಸ್ಪರ್ಧಿಗಳು, ಮೆಚ್ಚುಗೆ ಪಡೆದುಕೊಳ್ಳುವುದು ಇದೆ. ಆ ರೀತಿಯ ಜನುಮದ ಜೋಡಿ ಚಿತ್ರದ (Janumada Jodi Movie) ಹಿಂದೆ ಸಾಕಷ್ಟು ಇಂಟ್ರಸ್ಟಿಂಗ್ ವಿಷಯಗಳಿವೆ. ಚಿತ್ರೀಕರಣದ ಸಮಯದಲ್ಲಿ ಕೆಲವು ಸ್ವಾರಸ್ಯಕರ ಘಟನೆಗಳೂ ನಡೆದಿವೆ. ಈ ಚಿತ್ರದ (Movie) ನಾಯಕಿಯ ಆಯ್ಕೆ ವಿಚಾರಗಳು ಈಗಲೂ ಕುತೂಹಲ ಮೂಡಿಸುತ್ತವೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.

ಜನುಮದ ಜೋಡಿ ಸ್ವಾರಸ್ಯಕರ ಸಂಗತಿ

ಜನುಮದ ಜೋಡಿ ಚಿತ್ರ 1996 ರಲ್ಲಿ ರಿಲೀಸ್ ಆಗಿತ್ತು. ಈ ಚಿತ್ರವನ್ನ ನೋಡಲು ಜನ ಸಾಗರೋಪಾದಿಯಲ್ಲಿಯೇ ಬರ್ತಾ ಇದ್ದರು. ಸೂಪರ್ ಡೂಪರ್ ಹಿಟ್ ಆಗಿರೋ ಈ ಚಿತ್ರದ ಪ್ರತಿ ಸೀನ್ ಈಗಲೂ ಸಿನಿಮಾ ಪ್ರೇಮಿಗಳ ಮನದಲ್ಲಿವೆ. ಆ ರೀತಿಯ ಪ್ರಭಾವ ಬೀರಿರೋ ಈ ಚಿತ್ರದ ಹಿಂದೆ ಒಂದಷ್ಟು ಸ್ವಾರಸ್ಯಕರ ಕಥೆಗಳಿವೆ.

Shiva Rajkumar Shilpa Acted Janumada Jodi Film Unknown facts

ಶಿಲ್ಪಾ ಕಣ್ಣು ಚೆನ್ನಾಗಿವೆ ನೋಡಿ

ಈ ಚಿತ್ರಕ್ಕೆ ಕನ್ನಡದ ನಾಯಕಿಯನ್ನೆ ತರಬೇಕು ಅಂತಲೂ ಮಾತು ಇತ್ತು. ಕನ್ನಡದ ನಟಿ ಶೃತಿ, ಪ್ರೇಮಾ, ಸುಧಾರಾಣಿ ಅವರಲ್ಲಿ ಒಬ್ಬರನ್ನ ಈ ಚಿತ್ರದ ಕನಕ ಪಾತ್ರಕ್ಕೆ ಆಯ್ಕೆ ಮಾಡ್ಬೇಕು ಅಂತಲೇ ಯೋಚನೆ ಇತ್ತು. ಆದರೆ, ಈ ಮೂವರು ನಟಿಯರ ಬ್ಯುಸಿ ಇದ್ದ ಕಾರಣ ಅದು ಸಾಧ್ಯವೇ ಆಗಲಿಲ್ಲ ನೋಡಿ.

ಡೈರೆಕ್ಟರ್ ಮನದಲ್ಲಿ ಇವರಿದ್ದರು

ಡೈರೆಕ್ಟರ್ ಟಿ.ಎಸ್.ನಾಗಾಭರಣ ಅವರ ಮನದಲ್ಲಿ ಮೊದಲು ನಟಿ ಸೌಂದರ್ಯ ಹೆಸರು ಮೂಡಿತ್ತು. ಅದನ್ನ ಪಾರ್ವತಮ್ಮ ರಾಜಕುಮಾರ್ ಮುಂದೇನೂ ಹೇಳಿಕೊಂಡರು.

ಪಾರ್ವತಮ್ಮನವರು ಡೈರೆಕ್ಟರ್ ಆಸೆಯಂತೆ ಓಕೆ ಅಂದರು. ನವ ನಟಿಯರಿಗೆ ಅವಕಾಶ ಕೊಡ್ತಾ ಬಂದಿದ್ದ ಪಾರ್ವತಮ್ಮನವರು ಡೈರೆಕ್ಟರ್ ಮಾತಿಗೆ ತಮ್ಮ ಯೋಚನೆಯನ್ನ ಪಕ್ಕಕ್ಕೆ ಇಟ್ಟಿದ್ದರು.

Shiva Rajkumar Shilpa Acted Janumada Jodi Film Unknown facts

ಡೈರೆಕ್ಟರ್ ಮನದಲ್ಲಿ ಇವರಿದ್ದರು

ಆದರೆ, ನಟಿ ಸೌಂದರ್ಯ ಅವರು ಈ ಚಿತ್ರದಲ್ಲಿ ನಟಿಸೋ ಆಗಲೇ ಇಲ್ಲ. ಕಾರಣ ಅವರಿಗೆ ಬೇರೆ ಬೇರೆ ಸಿನಿಮಾಗಳು ಇದ್ದವು. ಎಲ್ಲ ಚಿತ್ರಗಳ ಡೇಟ್ಸ್ ಕೂಡ ಬ್ಯಾಕ್ ಟು ಬ್ಯಾಕ್ ಇದ್ದವು. ಅದಕ್ಕೇನೆ ಜನುಮದ ಜೋಡಿ ಒಪ್ಪಿಕೊಳ್ಳಲು ಸಾಧ್ಯವೇ ಆಗಲಿಲ್ಲ ಅನ್ನುವ ಮಾತು ಇದೆ.

ಶಿಲ್ಪಾ ಕಣ್ಣು ಚೆನ್ನಾಗಿವೆ ನೋಡಿ

ಶಿಲ್ಪಾ ಅವರ ಬಗ್ಗೆ ಶಿವರಾಜ್ ಕುಮಾರ್ ತಿಳಿದುಕೊಂಡಿದ್ದರು. ಅವರ ಕಣ್ಣುಗಳು ತುಂಬಾನೆ ಚೆನ್ನಾಗಿವೆ ಅಂತಲೂ ಹೇಳಿದ್ದರು. ಕನಕ ಪಾತ್ರಕ್ಕೆ ಯಾರು ಅಂತ ಸಿನಿಮಾ ಟೀಮ್ ಚರ್ಚೆ ಮಾಡ್ತಾ ಇತ್ತು.

ಆಗಲೇ ಶಿವಣ್ಣ ಈ ಒಂದು ಸಲಹೆ ಕೊಟ್ಟಿದ್ದರು. ಶಿಲ್ಪಾ ಅವರಿಗೆ ಡೈರೆಕ್ಷನ್ ಟೀಮ್‌ನ ಪ್ರಕಾಶ್ ಅವರು ಕಥೆ ಹೇಳಿದರು. ಆದರೆ, ಕನ್ನಡ ಬರೋದಿಲ್ಲ ಅಂತ ತಿಳಿದಾಗ ಡೈರೆಕ್ಟರ್ ಟಿ.ಎಸ್.ನಾಗಾಭರಣ ಒಂದು ಕೆಲಸ ಮಾಡಿದರು. ತಮ್ಮ ತಂಡದ ಅದೇ ಪ್ರಕಾಶ್ ಅವರಿಗೆ ಕನ್ನಡ ಕಲಿಸೋ ಜವಾಬ್ದಾರಿ ಕೊಟ್ಟರು. ಅದನ್ನ ಪ್ರಕಾಶ್ ಅಷ್ಟೆ ಚೆನ್ನಾಗಿ ಮಾಡಿದರು.

ಹೀಗೆ ಶಿಲ್ಪಾ ಕನ್ನಡದ ಜನುಮದ ಜೋಡಿ ಚಿತ್ರಕ್ಕೆ ಆಯ್ಕೆ ಆದರು. ಈ ಒಂದು ಚಿತ್ರದ ಪಾತ್ರವನ್ನ ಶಿಲ್ಪಾ ಅದ್ಭುತವಾಗಿಯೇ ಮಾಡಿದರು. ಚಿತ್ರದ ಈ ಅಭಿನಯಕ್ಕೆ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡರು. ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದುಕೊಂಡರು ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed