Janhvi Kapoor: ಶಿವಣ್ಣನ ಕಣ್ಣು ವೆರಿ ಪವರ್‌ಫುಲ್‌ ಎಂದ ನಟಿ ಜಾನ್ವಿ ಕಪೂರ್ ; ಕಣ್ಣಲ್ಲ ಇವು AK47 ಗನ್ನು ಎಂದ ಫ್ಯಾನ್ಸ್! | | ACTPnews

ಶಿವಣ್ಣನ ಕಣ್ಣು ವೇರಿ ಪವರ್‌ಫುಲ್‌; ಕಣ್ಣಲ್ಲ ಇವು AK47 ಗನ್ನು ಎಂದ ಫ್ಯಾನ್ಸ್!


Last Updated:

ಶಿವರಾಜ್ ಕುಮಾರ್ ಪವರ್ ಫುಲ್‌ ಕಣ್ಣುಗಳ ಬಗ್ಗೆ ಜಾನ್ವಿ ಕಪೂರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೆದ್ದಿ ಚಿತ್ರದಲ್ಲಿ ನಟಿಸುವಾಗಿನ ಅನುಭವ ಹಂಚಿಕೊಂಡಿದ್ದಾರೆ. ಜಾನ್ವಿ ಕಪೂರ್ ಈ ಮಾತಿನ ಪೂರ್ಣ ವಿವರ ಇಲ್ಲಿದೆ ಓದಿ.

ಶಿವಣ್ಣನ ಕಣ್ಣು ವೇರಿ ಪವರ್‌ಫುಲ್‌; ಕಣ್ಣಲ್ಲ ಇವು AK47 ಗನ್ನು ಎಂದ ಫ್ಯಾನ್ಸ್!
ಶಿವಣ್ಣನ ಕಣ್ಣು ವೇರಿ ಪವರ್‌ಫುಲ್‌; ಕಣ್ಣಲ್ಲ ಇವು AK47 ಗನ್ನು ಎಂದ ಫ್ಯಾನ್ಸ್!

ಜಾನ್ವಿ ಕಪೂರ್ (Janhvi Kapoor) ಕನ್ನಡ ಮಾತನಾಡಿದ್ದಾರೆ. ಬೆಳಗ್ಗೇನೆ ಬೆಂಗಳೂರಿಗೆ ಬಂದು ಕನ್ನಡ ಮಾತುಗಳನ್ನೆ ಗಟ್ಟಿ ಮಾಡಿಕೊಂಡಿದ್ದರು. “ನಮಸ್ಕಾರ ಬೆಂಗಳೂರು ಚೆನ್ನಾಗಿದ್ದೀರಾ? ನಮ್ಮನ್ನ ನೋಡಿ ನನಗೆ ಸಂತೋಷವಾಯಿತು” ಅಂತಲೆ ಹೇಳಿದರು. ಆದರೆ, ಈ ಒಂದು ಮಾತುಗಳ ಬಳಿಕ ಆ್ಯಂಕರ್ ಅನುಶ್ರೀ (Anchor Anushree) ಸಣ್ಣ ತಿದ್ದುಪಡಿ ಮಾಡಿದರು. “ನಿಮ್ಮನ್ನ” ಅಂತ ಹೇಳಿದರು. ನಿಮ್ಮನ್ನ ನೋಡಿ ನನಗೆ ಸಂತೋಷವಾಯಿತು ಅಂತಲೇ ಜಾನ್ವಿ ಕಪೂರ್ (Janhvi Kapoor) ಹೇಳಿದರು. ಈ ಮೂಲಕ ಕನ್ನಡಿಗರ ದಿಲ್ ಕದ್ದರು. ಆದರೆ, ಇದೇ ಜಾನ್ವಿ ಕಪೂರ್ ಹೇಳಿದ ಮಾತಿನಿಂದ ಶಿವರಾಜ್ ಕುಮಾರ್ (Shiva Rajkumar) ಫ್ಯಾನ್ಸ್ ಕೂಡ ಫುಲ್ ಖುಷ್ ಆಗಿದ್ದಾರೆ. ಯಾಕೆ ಅನ್ನೋದು ಮುಂದಿದೆ ಓದಿ.

ಶಿವಣ್ಣನ ಕಣ್ಣು…..

ಪೆದ್ದಿ ಚಿತ್ರದಲ್ಲಿ ಶಿವಣ್ಣ ಕುಸ್ತಿ ಉಸ್ತಾದ್ ಪಾತ್ರ ಮಾಡಿದ್ದಾರೆ. ಗೌರ್ ನಾಯ್ಡು ಅನ್ನೋ ಈ ಪಾತ್ರದ ಜೊತೆಗೆ ರಾಮ್ ಚರಣ್ ಪಾತ್ರದ ಸೀನ್‌ಗಳೇ ಜಾಸ್ತಿ ಇವೆ.

Janhvi Kapoor share experience working with shiva rajkumar in peddi movie

ಶಿವಣ್ಣನ ಕಣ್ಣು…..
ಗುರು ಮತ್ತು ಶಿಷ್ಯನ ರೋಲ್ ಅಲ್ಲಿಯೇ ಇವರು ತೆರೆ ಹಂಚಿಕೊಂಡಿದ್ದಾರೆ. ಆದರೆ, ಶಿವಣ್ಣ ಜೊತೆಗೆ ಜಾನ್ವಿ ಕಪೂರ್ ಸೀನ್ ಇವೆಯಾ ಅನ್ನುವ ಪ್ರಶ್ನೆಯನ್ನು ಅನುಶ್ರೀ ಇಲ್ಲಿ ಕೇಳಿದರು. ಇದಕ್ಕೆ ಜಾನ್ವಿ ಅದ್ಭುತ ಉತ್ತರವನ್ನೆ ಕೊಟ್ಟಿದ್ದಾರೆ.
ಪವರ್ ಫುಲ್ ಕಣ್ಣುಗಳು

ಶಿವರಾಜ್ ಕುಮಾರ್ ಅವರ ಕಣ್ಣುಗಳು ಪವರ್ ಫುಲ್ ಆಗಿವೆ. ಇವರ ಜೊತೆಗೆ ನಟಿಸಿದ ಒಂದೇ ಸೀನ್ ಅಲ್ಲಿಯೇ ನಾನು ತಿಳಿದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಇವರ ಜೊತೆಗೆ ಸಿನಿಮಾ ಮಾಡುವ ಆಸೆನೂ ಇದೆ ಅಂತಲೂ ಜಾನ್ವಿ ಕಪೂರ್ ಹೇಳಿಕೊಂಡಿದ್ದಾರೆ.

ಈ ಮಾತು ಕೇಳಿ ಶಿವಣ್ಣನ ಫ್ಯಾನ್ ಫುಲ್ ಖುಷ್ ಆಗಿದ್ದಾರೆ. ಕಣ್ಣುಗಳ ಬಗ್ಗೆ ಜಾನ್ವಿ ಕಪೂರ್ ಹೇಳಿದ ಆ ಮಾತಿಗೆ ಅಭಿಮಾನಿ ಒಬ್ಬರು ಹೀಗೆ ಹೇಳಿದ್ದಾರೆ. ಶಿವಣ್ಣನ ಕಣ್ಣು AK47 ಗನ್ನು ಅಂತಲೇ ಹೇಳಿದ್ದಾರೆ.

ಶಿವಣ್ಣ ಹೇಳಿದ್ದೇನು

ಜಾನ್ವಿ ಕಪೂರ್ ಮಾತಿನ ಬಳಿಕ ಶಿವಣ್ಣ ಮತ್ತು ರಾಮ್ ಚರಣ್ ವೇದಿಕೆ ಹತ್ತಿದರು. ಶಿವಣ್ಣ ಇಲ್ಲಿ ಜಾನ್ವಿ ಕಪೂರ್ ಅವರ ಬಗ್ಗೆ ಮಾತನಾಡಿದರು.

Janhvi Kapoor share experience working with shiva rajkumar in peddi movie

ಜೂನ್-4 ರಂದು ರಿಲೀಸ್

ಜಾನ್ವಿ ಕಪೂರ್ ಚೆನ್ನಾಗಿ ಬೆಳೆಯಲಿ, ಅಮ್ಮ ಶ್ರೀದೇವಿ ಅವರ ಹಾಗೇನೆ ಎತ್ತರಕ್ಕೆ ಹೋಗಲಿ ಅಂತಲು ಹಾರೈಸಿದರು. ಶಿವಣ್ಣನ ಈ ಮಾತಿನ ಬಳಿಕ ರಾಮ್ ಚರಣ್ ಮಾತನಾಡಿದ್ದರು.

ಶಿವಣ್ಣ ನನಗೆ ಎಲ್ಲ…

ಶಿವಣ್ಣ ನನಗೆ ಎಲ್ಲವೂ ಆಗಿದ್ದಾರೆ. ಅಂಕಲ್, ಬ್ರದರ್, ಗುರು ಹೀಗೆ ಎಲ್ಲವೂ ಆಗಿದ್ದಾರೆ. ಇವರ ಜೊತೆಗೆ ತೆರೆ ಹಂಚಿಕೊಳ್ಳುವ ಖುಷಿನೇ ಬೇರೆ ಅನ್ನವು ಅರ್ಥದಲ್ಲಿಯೇ ರಾಮ್ ಚರಣ್ ಹೇಳಿಕೊಂಡಿದ್ದಾರೆ.

ಜೂನ್-4 ರಂದು ರಿಲೀಸ್

ಪೆದ್ದಿ ಚಿತ್ರ ಜೂನ್-4 ರಂದು ರಿಲೀಸ್ ಆಗುತ್ತಿದೆ. ವಿಶ್ವದಾದ್ಯಂತ ಈ ಚಿತ್ರ ತೆರೆ ಕಾಣುತ್ತಿದೆ. ತೆಲುಗು ಸೇರಿದಂತೆ ಕನ್ನಡ, ಹಿಂದಿ, ತಮಿಳು ಹೀಗೆ ಬಹು ಭಾಷೆಯಲ್ಲೂ ಈ ಚಿತ್ರ ಬಿಡುಗಡೆ ಆಗುತ್ತಿದೆ.

ಚಿತ್ರದ ಎ.ಆರ್.ರೆಹಮಾನ್ ಸಂಗೀತದ ಹಾಡು ವೈರಲ್ ಆಗಿವೆ. ಶ್ರುತಿ ಹಾಸನ್ ಡ್ಯಾನ್ಸ್ ಮಾಡಿರೋ ಐಟಂ ನಂಬರ್ ಕೂಡ ಗಮನ ಸೆಳೆದಿದೆ. ಇನ್ನುಳಿದಂತೆ ರಾಮ್ ಚರಣ್ ಹಾಗೂ ಜಾನ್ವಿ ಕಪೂರ್ ಬೆಂಗಳೂರಿಗೆ ಬಂದು ತಮ್ಮ ಚಿತ್ರವನ್ನ ಪ್ರಮೋಟ್ ಮಾಡಿದ್ದಾರೆ. ಶಿವಣ್ಣ ಕೂಡ ಇದಕ್ಕೆ ಸಾಥ್ ಕೊಟ್ಟಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed