Jagaddhatri Serial: ಜಗದ್ಧಾತ್ರಿ ಸೀರಿಯಲ್‌ಗೆ ಸ್ಟಾರ್ ಹೀರೋ ಎಂಟ್ರಿ? ಹೊಸ ನ್ಯೂಸ್ ಫುಲ್ ವೈರಲ್! | | ACTPnews

ಜಗದ್ಧಾತ್ರಿ ಸೀರಿಯಲ್ ಹೀರೋ ಯಾರು; ಹೊಸ ನ್ಯೂಸ್ ಫುಲ್ ವೈರಲ್!


Last Updated:

ಜಗದ್ಧಾತ್ರಿ ಸೀರಿಯಲ್ ಹೀರೋ ಯಾರು? ಈಗ ಹರಿದಾಡ್ತಿರೋ ಹೆಸರು ನಿಜವೇ? ಮೋಕ್ಷಿತಾ ಪೈ ಜೊತೆಗೆ ವಿಜಯ್ ಸೂರ್ಯ ಅನ್ನೋ ನ್ಯೂಸ್ ಪಕ್ಕಾನಾ? ವಿವರ ಇಲ್ಲಿದೆ ಓದಿ.

ಜಗದ್ಧಾತ್ರಿ ಸೀರಿಯಲ್ ಹೀರೋ ಯಾರು; ಹೊಸ ನ್ಯೂಸ್ ಫುಲ್ ವೈರಲ್!
ಜಗದ್ಧಾತ್ರಿ ಸೀರಿಯಲ್ ಹೀರೋ ಯಾರು; ಹೊಸ ನ್ಯೂಸ್ ಫುಲ್ ವೈರಲ್!

ಸ್ಯಾಂಡಲ್‌ವುಡ್‌ನ ಹ್ಯಾಂಡ್ಸಮ್ ಹೀರೋ ವಿಜಯ್ ಸೂರ್ಯ (Vijay Surya) ಕನ್ನಡ ಸಿನಿಮಾಗಳನ್ನು ಮಾಡಿದ್ದಾರೆ. ಇಷ್ಟಕಾಮ್ಯ, ಕ್ರೇಜಿ ಲೋಕ ಚಿತ್ರದಲ್ಲಿ (Crazy Loka Movie) ನಟಿಸಿದ್ದಾರೆ. ಆದರೆ, ಅಗ್ನಿಸಾಕ್ಷಿ ಸೀರಿಯಲ್ (Agnisakshi Serial) ಇವರಿಗೆ ದೊಡ್ಡ ಹೆಸರು ತಂದು ಕೊಟ್ಟಿದೆ. ಇದೀಗ ಹೊಸ ಸುದ್ದಿ ಒಂದು ಹರಿದಾಡುತ್ತಿದೆ. ಜೀ ಕನ್ನಡದ ಜಗದ್ಧಾತ್ರಿ ಸೀರಿಯಲ್‌ಗೆ (Jagaddhatri Serial) ಇವರೇ ಹೀರೋ ಅನ್ನೋದು ದಟ್ಟವಾಗಿಯೇ ಕೇಳಿ ಬರ್ತಿದೆ. ಈ ಸುದ್ದಿಯ ಸುತ್ತದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಮೋಕ್ಷಿತಾ-ವಿಜಯ್ ಮೋಡಿ

ಜಗದ್ಧಾತ್ರಿ ಸೀರಿಯಲ್ ಹೀರೋಯಿನ್ ಯಾರು ಅನ್ನೋದು ತಿಳಿದಿದೆ. ಬಿಗ್ ಬಾಸ್ ಫೇಮ್ ಮೋಕ್ಷಿತಾ ಪೈ ಇಲ್ಲಿ ನಾಯಕಿ ಆಗಿದ್ದಾರೆ. ಇವರಿಗೆ ಸೀರಿಯಲ್ ಹೊಸದೇನು ಅಲ್ಲ. ಈ ಹಿಂದೆ ಪಾರು ಸೀರಿಯಲ್ ಮಾಡಿದ್ದರು. ಜನರ ಮೆಚ್ಚುಗೆ ಕೂಡ ಪಡೆದುಕೊಂಡರು.
zee kannada jagadhatri Serial hero viral news

ಮೋಕ್ಷಿತಾ-ವಿಜಯ್ ಮೋಡಿ

(ಚಿತ್ರ ಕೃಪೆ: ಮೋಕ್ಷಿತಾ ಪೈ ಇನ್‌ಸ್ಟಾಗ್ರಾಮ್)

ಇದೀಗ ಇದೇ ಮೋಕ್ಷಿತಾ ಪೈ ಜಗದ್ಧಾತ್ರಿ ಸೀರಿಯಲ್ ಮಾಡ್ತಿದ್ದಾರೆ. ಆದರೆ, ಇವರ ಜೋಡಿ ಆಗಿ ಯಾರು ಇರ್ತಾರೆ ಅನ್ನುವ ಪ್ರ್ನೆ ಇದೆ. ಇದಕ್ಕೆ ಉತ್ತರ ರೂಪದಲ್ಲಿ ಅಗ್ನಿಸಾಕ್ಷಿ ಸೀರಿಯಲ್ ವಿಜಯ್ ಸೂರ್ಯ ಹೆಸರು ಕೇಳಿ ಬರ್ತಿದೆ.

ಸೋಷಿಯಲ್ ಮೀಡಿಯಾ ಸದ್ದು

ಈ ಒಂದು ಸುದ್ದಿ ಅಧಿಕೃತವಾಗಿ ಇನ್ನು ಹೊರ ಬಂದಿಲ್ಲ. ವಿಜಯ್ ಸೂರ್ಯ ಕೂಡ ಎಲ್ಲು ಇನ್ನು ಹೇಳಿಕೊಂಡಿಲ್ಲ. ಸೀರಿಯಲ್ ಪ್ರಸಾರ ಆಗಲಿರೋ ಜೀ ಕನ್ನಡ ಕೂಡ ಏನೂ ಹೇಳಿಕೊಂಡಿಲ್ಲ.

ಆದರೂ ಈ ಸುದ್ದಿ ಹೆಚ್ಚು ವೈರಲ್ ಆಗಿದೆ. ಇನ್‌ಸ್ಟಾಗ್ರಾಮ್ ಪೇಜ್‌ಗಳಲ್ಲಿಯೂ ಈ ನ್ಯೂಸ್ ಇದೆ. Zee Aura ಅನ್ನುವ ಪೇಜ್ ಅಲ್ಲಿ ಈ ವಿಷಯ ಇದೆ. ಇದರ ವಿವರ ಹೀಗಿದೆ.

ಜಗದ್ಧಾತ್ರಿ ಸೀರಿಯಲ್ ನಾಯಕ

ಜಗದ್ಧಾತ್ರಿ ಧಾರವಾಹಿಯಲ್ಲಿ ವಿಜಯ್ ಸೂರ್ಯ ನಾಯಕರಾಗಿಯೇ ನಟಿಸಲಿದ್ದಾರೆ ಅನ್ನುವ ಮಾಹಿತಿ ಇಲ್ಲಿ ಸಿಗುತ್ತದೆ. ಇರೊಟ್ಟಿಗೆ ವಿಜಯ್ ಸೂರ್ಯ ಅವರ ಒಂದು ಫೋಟೋ ಕೂಡ ಇದೆ.

zee kannada jagadhatri Serial hero viral news

ಜಗದ್ಧಾತ್ರಿ ಸೀರಿಯಲ್ ನಾಯಕ

(ಚಿತ್ರ ಕೃಪೆ: ವಿಜಯ್ ಸೂರ್ಯ ಇನ್‌ಸ್ಟಾಗ್ರಾಮ್)

ಇನ್ನುಳಿದಂತೆ ಈ ಜಗದ್ಧಾತ್ರಿ ಸೀರಿಯಲ್‌ನ ಪ್ರೋಮೋ ತುಂಬಾನೆ ಇಂಟ್ರಸ್ಟಿಂಗ್ ಆಗಿದೆ. ನಾಯಕಿ ಜಗದ್ಧಾತ್ರಿ ಸಾಮಾನ್ಯ ಹೆಣ್ಣುಮಗಳು ಅಲ್ವೆ ಅಲ್ಲ. ಈಕೆ ಗನ್ ಹಿಡಿದು ಗುರಿ ಇಟ್ಟು ಕಾಲಿಗೇನೆ ಗುಂಡು ಹೊಡೆಯೋ ಶೂಟರ್ ಅನ್ನೋದು ತಿಳಿಯುತ್ತದೆ.

ಜಗದ್ಧಾತ್ರಿ ಇಲ್ಲಿ ಏನು

ಈ ಒಂದು ಪ್ರಶ್ನೆ ಇದ್ದೇ ಇದೆ. ಕಾರಣ, ಪ್ರೋಮೋ ಆ ರೀತಿಯ ಕುತೂಹಲ ಕೆರಳಿಸಿದೆ. ಇದರ ಜೊತೆಗೆ ಜಗದ್ಧಾತ್ರಿ ಇಲ್ಲಿ ಪೊಲೀಸ್ ಆಗಿರಬೇಕು ಅನಿಸುತ್ತದೆ.

ಆದರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಬೇರೆ ವಿಷಯ ಏನು ಹೊರ ಬಂದಿಲ್ಲ. ಬದಲಾಗಿ ಈ ಸೀರಿಯಲ್ ಪ್ರೋಮೋ ಹೆಚ್ಚು ಗಮನ ಸೆಳೆಯುತ್ತಲೆ ಇದೆ. ಇದರ ನಡುವೆ ಈ ಸೀರಿಯಲ್ ಹೀರೋ ವಿಚಾರ ಈಗ ವೈರಲ್ ಆಗಿದೆ.

ಜಗದ್ಧಾತ್ರಿ ಸೀರಿಯಲ್

ಜಗದ್ಧಾತ್ರಿ ಸೀರಿಯಲ್ ಯಾವ ರೀತಿಯ ಸೀರಿಯಲ್ ಅನ್ನುವ ಪ್ರಶ್ನೆನೂ ಇದೆ. ಈ ಸೀರಿಯಲ್ ನಾಯಕಿ ಪೊಲೀಸಾ? ಅಥವಾ ಗುಪ್ತಚ ಇಲಾಖೆಯ ಅಧಿಕಾರಿನಾ ಅನ್ನುವ ಡೌಟ್ ಕೂಡ ಇದೆ.

ಆದರೆ, ಈ ಜಗದ್ಧಾತ್ರಿ ಎರಡು ರೀತಿಯ ಜೀವನ ಇರ್ತದೆ ಅನ್ನೋದು ಪ್ರೋಮೋದಲ್ಲಿಯೇ ಗೊತ್ತಾಗುತ್ತದೆ. ಸಾಮಾನ್ಯ ಗೃಹಿಣಿಯ ತರವೇ ಇರ್ತಾಳೆ. ಆದರೆ, ಕೆಲಸ ಅಂತ ಬಂದಾಗ ರೂಪವೇ ಬದಲಾಗುತ್ತದೆ. ಆ ರೀತಿಯ ರೋಲ್ ಇದಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೆ ಹೊರಗೆ ಬರಬೇಕಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed