Last Updated:
ಇಶಾನ್ ಕಿಶನ್ ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ ಸಹಾಯಕ ವ್ಯವಸ್ಥಾಪಕ ಹುದ್ದೆಯನ್ನ ಹೊಂದಿದ್ದಾರೆ. ಅವರನ್ನು 2017ರಲ್ಲಿ ಕ್ರೀಡಾ ಕೋಟಾದಡಿಯಲ್ಲಿ ಈ ಹುದ್ದೆಗೆ ನೇಮಕವಾಗಿದ್ದರು. ಆ ಸಮಯದಲ್ಲಿ, ಇಶಾನ್ ಒಬ್ಬ ಉದಯೋನ್ಮುಖ ಕ್ರಿಕೆಟಿಗ ಮತ್ತು ಕೇವಲ 18 ವರ್ಷ ವಯಸ್ಸಿನವರಾಗಿದ್ದರು.
ಮೈದಾನದಲ್ಲಿ ಬೌಂಡರಿ-ಸಿಕ್ಸರ್ ಸಿಡಿಸಲು ಹೆಸರಾಗಿರುವ ಭಾರತದ ಯುವ ಆಟಗಾರ ಇಶಾನ್ ಕಿಶನ್ (Ishan Kishan) ಫಾರ್ಮಲ್ ಡ್ರೆಸ್, ಐಡಿ ಧರಿಸಿ ಸರ್ಕಾರಿ ಆಫೀಸರ್ ಅವತಾರದಲ್ಲಿ ಆರ್ಬಿಐ (RBI) ಕಚೇರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತ ಕ್ರಿಕೆಟ್ (Indian Cricketer) ತಂಡದ ತಾರೆ ಇಶಾನ್ ಕ್ರಿಕೆಟ್ಗೆ ಸುದೀರ್ಘ ರಜೆ ಇರುವ ಹಿನ್ನಲೆ ಪಾಟ್ನಾದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಆಗಮಿಸಿದರು. ಇಶಾನ್ ಕಿಶನ್ ನೋಡಿದ ಖುಷಿಯಲ್ಲಿ ಬ್ಯಾಂಕ್ ಸಿಬ್ಬಂದಿಗಳು ಸ್ಟಾರ್ ಕ್ರಿಕೆಟರ್ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಹಲವಾರು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಇಶಾನ್ ಸ್ವತಃ ಆರ್ಬಿಐ ಐಡಿ ಕಾರ್ಡ್ ಧರಿಸಿದ್ದಾರೆ. ಇಶಾನ್ ಕಿಶನ್ ಆರ್ಬಿಐ ಸಂಸ್ಥೆಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಪೋಸ್ಟ್ ಹೊಂದಿದ್ದಾರೆ.
ಇಶಾನ್ ಕಿಶನ್ ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ ಸಹಾಯಕ ವ್ಯವಸ್ಥಾಪಕ ಹುದ್ದೆಯನ್ನ ಹೊಂದಿದ್ದಾರೆ. ಅವರನ್ನು 2017ರಲ್ಲಿ ಕ್ರೀಡಾ ಕೋಟಾದಡಿಯಲ್ಲಿ ಈ ಹುದ್ದೆಗೆ ನೇಮಕವಾಗಿದ್ದರು. ಆ ಸಮಯದಲ್ಲಿ, ಇಶಾನ್ ಒಬ್ಬ ಉದಯೋನ್ಮುಖ ಕ್ರಿಕೆಟಿಗ ಮತ್ತು ಕೇವಲ 18ವರ್ಷ ವಯಸ್ಸಿನವರಾಗಿದ್ದರು. ಇಶಾನ್ ಡಿವೈ ಪಾಟೀಲ್ ಟ್ರೋಫಿಯಂತಹ ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಆರ್ಬಿಐ ಅನ್ನು ಪ್ರತಿನಿಧಿಸಿದ್ದಾರೆ. ಆದ್ದರಿಂದ, ಕ್ರಿಕೆಟ್ನಿಂದ ಬಿಡುವು ಸಿಕ್ಕಾಗಲೆಲ್ಲಾ ಅವರು ಆರ್ಬಿಐ ಕಚೇರಿಗೆ ಭೇಟಿ ನೀಡುತ್ತಾರೆ.
ಇಶಾನ್ ಕಿಶನ್ ಇಂದು ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಅದಕ್ಕಾಗಿಯೇ ಇಶಾನ್ ಕಚೇರಿಗೆ ಬಂದ ತಕ್ಷಣ, ಸಿಬ್ಬಂದಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಇಶಾನ್ ಅವರ ಕಾರ್ಯನಿರತ ಕ್ರಿಕೆಟ್ ವೇಳಾಪಟ್ಟಿಯಿಂದಾಗಿ ಆರ್ಬಿಐ ಕರ್ತವ್ಯಕ್ಕೆ ವಿರಳವಾಗಿ ಬರುವುದರಿಂದ, ಅಲ್ಲಿನ ಉದ್ಯೋಗಿಗಳು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಅವಕಾಶವನ್ನು ಮಿಸ್ ಮಾಡಿಕೊಳ್ಳದೆ ಸದುಪಯೋಗ ಪಡಿಸಿಕೊಂಡರು. ಇಶಾನ್ ಕೂಡ ಬೇಸರಿಸಿಕೊಳ್ಳದೆ ಎಲ್ಲರ ಜೊತೆಗೆ ನಗುಮುಖದಲ್ಲೇ ಫೋಟೋಗೆ ಪೋಸ್ ನೀಡಿದರು.
ಭಾರತೀಯ ರಿಸರ್ವ್ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಹುದ್ದೆಯೂ ಗ್ರೇಡ್ ಎ-ಲೆವೆಲ್ ಹುದ್ದೆಯಾಗಿದೆ. ಹಾಗಾಗಿ ವೇತನವು ಕೂಡ ಉತ್ತಮವಾಗಿದೆ. ಈ ಹುದ್ದೆಗೆ ಮೂಲ ವೇತನವೇ ₹45,000 ರಿಂದ ₹49,000 ವರೆಗೆ ಇರುತ್ತದೆ. ಮೂಲ ವೇತನಕ್ಕೆ ಸವಲತ್ತುಗಳು ಮತ್ತು ಭತ್ಯೆಗಳನ್ನು ಸೇರಿಸುವುದರಿಂದ ವೇತನ ₹90,000 ರಿಂದ ₹115,000 ವರೆಗೆ ಇರುತ್ತದೆ. ಕೆಲವು ಅಗತ್ಯ ಕಡಿತಗಳ ನಂತರ, ₹75,000 ರಿಂದ ₹90,000 ವರೆಗೆ ಕೈಗೆ ಸಿಗುತ್ತದೆ. ಹೀಗಾಗಿ, ಇಶಾನ್ ಕಿಶನ್ ಆರ್ಬಿಐನಿಂದ ತಿಂಗಳಿಗೆ ಸುಮಾರು ₹90,000 ಗಳಿಸುತ್ತಾರೆ.
ವಿಕೆಟ್ ಕೀಪರ್-ಬ್ಯಾಟರ್ ಎರಡು ವರ್ಷಗಳ ನಂತರ ಜನವರಿಯಲ್ಲಿ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದರು. 2023ರಲ್ಲಿ ತಂಡದಿಂದ ಹೊರಬಿದ್ದಿದ್ದರು. ದೇಶೀಯ ಕ್ರಿಕೆಟ್ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ ನಂತರ ಜಾರ್ಖಂಡ್ನ ಈ “ಪಾಕೆಟ್ ಡೈನಮೈಟ್” ಟೀಮ್ ಇಂಡಿಯಾಗೆ ಅದ್ಭುತ ಕಮ್ಬ್ಯಾಕ್ ಮಾಡಿದರು. ಟಿ 20 ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.
ಐರ್ಲೆಂಡ್, ಇಂಗ್ಲೆಂಡ್ ಮತ್ತು ಜಿಂಬಾಬ್ವೆ ಪ್ರವಾಸಗಳನ್ನು ಒಳಗೊಂಡ ಬಿಡುವಿಲ್ಲದ ವೇಳಾಪಟ್ಟಿಯ ನಂತರ, ಇಶಾನ್ ಕಿಶನ್ ಪ್ರಸ್ತುತ ವಿರಾಮ ತೆಗೆದುಕೊಳ್ಳುತ್ತಿದ್ದಾರೆ. ಶ್ರೀಲಂಕಾದ ಟೀಮ್ ಇಂಡಿಯಾದ ಟೆಸ್ಟ್ ಸರಣಿ ಪ್ರವಾಸಕ್ಕಾಗಿ ಅವರನ್ನು ತಂಡದಲ್ಲಿ ಸೇರಿಸಿಲ್ಲ. ಪರಿಣಾಮವಾಗಿ, ಅವರು ತಮ್ಮ ಊರಿಗೆ ಮರಳಿದ್ದು, ಬಿಡುವಿರುವುದರಿಂದ ಆರ್ಬಿಐನಲ್ಲಿ ಕರ್ತವ್ಯಕ್ಕೆ ಹಾಜಾರಾಗಿದ್ದರು.
Aug 05, 2026 10:42 PM IST
Ishan Kishan: ಕ್ರಿಕೆಟ್ಗೆ ಸುದೀರ್ಘ ರಜೆ, ಆರ್ಬಿಐ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಇಶಾನ್ ಕಿಶನ್ ಕೆಲಸಕ್ಕೆ ಹಾಜರ್! ವೇತನ ಎಷ್ಟು ಗೊತ್ತಾ?














