Last Updated:
Iran Parliament: ಒಟ್ಟು ಇನ್ನೂರ ಎಪ್ಪತ್ತೊಂದು ಮತಗಳ ಪೈಕಿ ಇನ್ನೂರ ಮೂವತ್ತೈದು ವೋಟ್ಸ್ ಪಡೆಯುವ ಮೂಲಕ ಇಡೀ ಸಂಸತ್ತು ಇವರ ಕೈಯಲ್ಲಿದೆ ಎಂಬುದು ಪ್ರೂವ್ ಆಗಿದೆ. ಆದರೆ ಈಗ ಇಡೀ ವಿಶ್ವದ ಕಣ್ಣು ಇವರ ಮರು ಆಯ್ಕೆಯ ಮೇಲಲ್ಲ, ಬದಲಿಗೆ ಇವರ ಎಂಟ್ರಿಯಿಂದಾಗಿ ಇರಾನ್ ಮತ್ತು ಅಮೆರಿಕ ನಡುವಿನ “ವಾರ್ ವೈಬ್ಸ್” ನಿಲ್ಲುತ್ತಾ? ಅಥವಾ ಮಿಡಲ್ ಈಸ್ಟ್ ಬಿಕ್ಕಟ್ಟು ನೆಕ್ಸ್ಟ್ ಲೆವೆಲ್ ತಲುಪುತ್ತಾ? ಅನ್ನೋ ಬಿಗ್ ಸಸ್ಪೆನ್ಸ್ ಕ್ರಿಯೇಟ್ ಆಗಿದೆ.
ಜಾಗತಿಕ ರಾಜಕೀಯದ (Geo Politics) ಹಾಟ್ ಸ್ಪಾಟ್ ಆಗಿರುವ ಇರಾನ್ ಸಂಸತ್ತಿಗೆ (ಮಜ್ಲಿಸ್) ಮೊಹಮ್ಮದ್ ಬಾಗೇರ್ ಘಾಲಿಬಾಫ್ (Ghalibaap) ಸ್ಪೀಕರ್ (Speaker) ಆಗಿ ಆಯ್ಕೆಯಾಗಿದ್ದಾರೆ. ಒಟ್ಟು ಇನ್ನೂರ ಎಪ್ಪತ್ತೊಂದು ಮತಗಳ ಪೈಕಿ ಇನ್ನೂರ ಮೂವತ್ತೈದು ವೋಟ್ಸ್ ಪಡೆಯುವ ಮೂಲಕ ಇಡೀ ಸಂಸತ್ತು ಇವರ ಕೈಯಲ್ಲಿದೆ ಎಂಬುದು ಪ್ರೂವ್ ಆಗಿದೆ. ಆದರೆ ಈಗ ಇಡೀ ವಿಶ್ವದ ಕಣ್ಣು ಇವರ ಮರು ಆಯ್ಕೆಯ ಮೇಲಲ್ಲ, ಬದಲಿಗೆ ಇವರ ಎಂಟ್ರಿಯಿಂದಾಗಿ ಇರಾನ್ (Iran) ಮತ್ತು ಅಮೆರಿಕ (America) ನಡುವಿನ “ವಾರ್ ವೈಬ್ಸ್” (War Vibes) ನಿಲ್ಲುತ್ತಾ? ಅಥವಾ ಮಿಡಲ್ ಈಸ್ಟ್ ಬಿಕ್ಕಟ್ಟು ನೆಕ್ಸ್ಟ್ ಲೆವೆಲ್ ತಲುಪುತ್ತಾ? ಅನ್ನೋ ಬಿಗ್ ಸಸ್ಪೆನ್ಸ್ ಕ್ರಿಯೇಟ್ ಆಗಿದೆ.
ಘಾಲಿಬಾಫ್ ಅವರನ್ನು ಕೇವಲ ಒಬ್ಬ ಸಾಂಪ್ರದಾಯಿಕ ರಾಜಕಾರಣಿ ಎಂದು ನೋಡಲು ಸಾಧ್ಯವಿಲ್ಲ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಮಾಜಿ ಏರೋಸ್ಪೇಸ್ ಕಮಾಂಡರ್ ಆಗಿದ್ದ ಇವರು ಯುದ್ಧದ ಮೈದಾನವನ್ನು ಹತ್ತಿರದಿಂದ ನೋಡಿದವರು. ಅಂತರರಾಷ್ಟ್ರೀಯ ವಲಯದಲ್ಲಿ ಇವರನ್ನು “ವ್ಯಾವಹಾರಿಕ ಕಠಿಣ ನಿಲುವುಳ್ಳವರು” (Pragmatic Hardliner) ಎಂದು ಕರೆಯಲಾಗುತ್ತದೆ. ಅಂದರೆ, ಇವರು ದೇಶದ ಸೈನ್ಯ ಮತ್ತು ಸ್ವಾಭಿಮಾನದ ವಿಷಯದಲ್ಲಿ ಕಡು ಹಠಮಾರಿ, ಆದರೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಶತ್ರುಗಳ ಜೊತೆ ಮಾತುಕತೆಯ ಮೇಜಿನ ಬಳಿ ಕೂರಲು ಸಿದ್ಧರಿರುವ ಚಾಣಕ್ಯ.
ಘಾಲಿಬಾಫ್ ಅವರ ಎಂಟ್ರಿಯಿಂದಾಗಿ ಯುದ್ಧದ ಕಾರ್ಮೋಡ ಸರಿದು ಶಾಂತಿ ಸ್ಥಾಪನೆಯಾಗಬಹುದು ಎಂಬ ಪಾಸಿಟಿವ್ ಟಾಕ್ ಒಂದು ಕಡೆ ಕೇಳಿಬರುತ್ತಿದೆ. ಸದ್ಯ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ನೇರ ಶಾಂತಿ ಮಾತುಕತೆಗಳ ಮುಖ್ಯ ಸಂಧಾನಕಾರರಾಗಿ ಇವರೇ ಕಾರ್ಯನಿರ್ವಹಿಸುತ್ತಿದ್ದಾರೆ. ಇರಾನ್ ಮೇಲಿರುವ ಜಾಗತಿಕ ಆರ್ಥಿಕ ನಿರ್ಬಂಧಗಳು ತೆರವಾಗದಿದ್ದರೆ ದೇಶದ ಆರ್ಥಿಕತೆ ಉದ್ಧಾರವಾಗಲ್ಲ ಎಂಬ ವಾಸ್ತವ ಇವರಿಗೆ ಗೊತ್ತು. ಹಾಗಾಗಿ, ಬಲಪ್ರದರ್ಶನದ ಮೂಲಕವೇ ಅಮೆರಿಕವನ್ನು ಮಣಿಸಿ, ಇರಾನ್‌ನ ಗೌರವಕ್ಕೆ ಧಕ್ಕೆ ಬಾರದಂತೆ ಯುದ್ಧವನ್ನು ಕೊನೆಗೊಳಿಸಲು ಇವರು ಬಿಗ್ ಪ್ಲಾನ್ ಮಾಡುತ್ತಿದ್ದಾರೆ. ಇವರ ಭರ್ಜರಿ ಗೆಲುವು ಈ ಶಾಂತಿ ಮಾತುಕತೆಗಳಿಗೆ ಹೆಚ್ಚಿನ ರಾಜತಾಂತ್ರಿಕ ಶಕ್ತಿ ನೀಡಿದೆ.
ಇನ್ನೊಂದೆಡೆ, ಪರಿಸ್ಥಿತಿ ಇನ್ನೂ ವರ್ಸ್ಟ್ ಆಗಬಹುದು ಎಂಬ ಆತಂಕವೂ ಇದೆ. ಏಕೆಂದರೆ ಖಾಲಿಬಾಫ್ ಮೂಲತಃ ಮಿಲಿಟರಿ ಹಿನ್ನೆಲೆಯುಳ್ಳವರು. “ನಾವು ಶಾಂತಿ ಮಾತುಕತೆ ನಡೆಸುತ್ತಿದ್ದೇವೆ ಎಂದರೆ ನಮ್ಮ ಸೈನ್ಯ ಸುಮ್ಮನೆ ಕೂತಿದೆ ಎಂದಲ್ಲ” ಎಂದು ಅವರು ಈಗಾಗಲೇ ಅಮೆರಿಕಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಷರತ್ತು ಉಲ್ಲಂಘಣೆ ಆದರೆ?
ಇರಾನ್‌ನ ಕ್ರಾಂತಿಕಾರಿ ಹಿತಾಸಕ್ತಿಗಳಿಗೆ ಅಥವಾ ಸಶಸ್ತ್ರ ಪಡೆಗಳಿಗೆ ಅಮೆರಿಕದಿಂದ ಸಣ್ಣ ಧಕ್ಕೆಯಾದರೂ ಇವರು ಸುಮ್ಮನೆ ಕೂರುವ ನಾಯಕನಲ್ಲ. ಅಮೆರಿಕ ಏನಾದರೂ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿದರೆ ಅಥವಾ ಯುದ್ಧದ ಹಠ ಮುಂದುವರಿಸಿದರೆ, ಖಾಲಿಬಾಫ್ ನೇತೃತ್ವದ ಇರಾನ್ ಸಂಸತ್ತು ಮತ್ತಷ್ಟು ಆಕ್ರಮಣಕಾರಿ ಮಿಲಿಟರಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಬಿಕ್ಕಟ್ಟನ್ನು ನೆಕ್ಸ್ಟ್ ಲೆವೆಲ್‌ಗೆ ಕೊಂಡೊಯ್ಯುವ ಎಲ್ಲಾ ಸಾಧ್ಯತೆಗಳೂ ಇವೆ.
ಸದ್ಯದ ಪರಿಸ್ಥಿತಿಯಲ್ಲಿ ಖಾಲಿಬಾಫ್ ಅವರ ನಡೆ ಇಡೀ ಮಿಡಲ್ ಈಸ್ಟ್‌ನ ಫ್ಯೂಚರ್ ಅನ್ನು ನಿರ್ಧರಿಸಲಿದೆ. ಇವರು ತಮ್ಮ ವ್ಯಾವಹಾರಿಕ ಬುದ್ಧಿವಂತಿಕೆಯಿಂದ ಯುದ್ಧದ ವೈಬ್ಸ್ ಬಿಟ್ಟು ಶಾಂತಿ ತರುತ್ತಾರೋ ಅಥವಾ ಅಮೆರಿಕದ ಹಠದ ಮುಂದೆ ಕಠಿಣ ಮಿಲಿಟರಿ ನಿಲುವು ತಳೆದು ಬಿಕ್ಕಟ್ಟನ್ನು ಇನ್ನಷ್ಟು ಉಲ್ಬಣಗೊಳಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ, ಇರಾನ್ ಸಂಸತ್ತಿಗೆ ಘಾಲಿಬಾಫ್ ಎಂಟ್ರಿಯಾಗಿರುವುದು ಜಾಗತಿಕ ರಾಜಕೀಯದಲ್ಲಿ ಒಂದು ದೊಡ್ಡ ಗೇಮ್ ಚೇಂಜರ್ ಅಂತೂ ಹೌದು.
Iran Parliament: ಇರಾನ್ ಸಂಸತ್ತಿನ ಸ್ಪೀಕರ್ ಆಗಿ ಈ ವ್ಯಕ್ತಿ ಆಯ್ಕೆ; ವಾರ್ ವೈಬ್ಸ್ ನಿಲ್ಲುತ್ತಾ ಅಥವಾ ಬಿಕ್ಕಟ್ಟು ನೆಕ್ಸ್ಟ್ ಲೆವೆಲ್ ತಲುಪುತ್ತಾ? ಇಲ್ಲಿದೆ ಕಂಪ್ಲೀಟ್ ಮಾಹಿತಿ!













