IPL 2026: ಪ್ಲೇ ಆಫ್​​ಗೂ ಮುನ್ನ ಆರ್​​ಸಿಬಿ ತನ್ನ ವೀಕ್ನೆಸ್ ಸರಿ ಮಾಡಿಕೊಳ್ಳುತ್ತಾ? ಇದೊಂದು ಸರಿಯಾದ್ರೆ ಈ ಸಲನೂ ಕಪ್ ನಮ್ದೇ! | ಕ್ರೀಡಾ ಸುದ್ದಿ | ACTPnews

ರಾಯಲ್ ಚಾಲೆಂಜರ್ಸ್ ಬೆಂಗಳೂರು


Last Updated:

ಹಾಲಿ ಚಾಂಪಿಯನ್ ಆರ್​​ಸಿಬಿ ಐಪಿಎಲ್ 2026 ರಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಆರ್​​ಸಿಬಿ ಅಗ್ರಸ್ಥಾನದಲ್ಲಿದೆ. ಈಗಾಗಲೇ ಪ್ಲೇಆಫ್ ಸ್ಥಾನವನ್ನು ಪಡೆದುಕೊಂಡಿರುವ ಆರ್‌ಸಿಬಿ ತನ್ನ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳುವತ್ತ ಗಮನ ಹರಿಸುತ್ತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು

ಐಪಿಎಲ್ (IPL) 2026 ರ ಲೀಗ್ (League) ಹಂತದ ತನ್ನ ಕೊನೆಯ ಪಂದ್ಯ (Match) ವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಆಡಲಿದೆ. ಆರ್​​ಸಿಬಿ ತಂಡವು ಮೇ 22 ರಂದು ನಡೆಯುವ ಈ ಪಂದ್ಯವನ್ನು ಗೆಲ್ಲುವ ಮೂಲಕ ಅಗ್ರ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದೆ. ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್​​ಸಿಬಿ ಉತ್ಸಾಹದಲ್ಲಿದೆ. ಪ್ಲೇಆಫ್‌ಗಳು (Playoffs) ಪ್ರಾರಂಭವಾಗುವ ಮುನ್ನ ಆರ್​​ಸಿಬಿ ತನ್ನ ದೌರ್ಬಲ್ಯ (Weakness) ಗಳನ್ನು ಸರಿಪಡಿಸಿಕೊಳ್ಳುವತ್ತ ಗಮನ ಹರಿಸುತ್ತಿದೆ.

ಪ್ಲೇಆಫ್ ತಲುಪುವ ಮೊದಲು ಆರ್‌ಸಿಬಿ ಎರಡು ಪ್ರಮುಖ ಹಿನ್ನಡೆಗಳನ್ನು ಅನುಭವಿಸಿತು. ಆರಂಭಿಕರಾದ ಫಿಲ್ ಸಾಲ್ಟ್ ಮತ್ತು ನಾಯಕ ರಜತ್ ಪಾಟಿದಾರ್ ಗಾಯಗೊಂಡು ಕೊನೆಯ ಪಂದ್ಯದಿಂದ ಹೊರಗುಳಿದಿದ್ದಾರೆ. ಇದರ ಪರಿಣಾಮ ಆರ್‌ಸಿಬಿಯ ಬ್ಯಾಟಿಂಗ್ ವಿಭಾಗ ಭಾರೀ ಹಿನ್ನಡೆಯನ್ನು ಅನುಭವಿಸಿತು.

ಕಳೆದ ವಾರ ರಾಯ್‌ಪುರದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಜತ್ ಪಾಟಿದಾರ್ ಬ್ಯಾಟಿಂಗ್ ಮಾಡುವಾಗ ಗಾಯಗೊಂಡರು. ಈ ಕಾರಣದಿಂದಾಗಿ ಪಾಟಿದಾರ್ ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ  ಪಂದ್ಯವನ್ನು ತಪ್ಪಿಸಿಕೊಂಡರು. ಪಾಟಿದಾರ್ ಅನುಪಸ್ಥಿತಿಯಲ್ಲಿ, ಜಿತೇಶ್ ಶರ್ಮಾ ಆರ್‌ಸಿಬಿಯನ್ನು ಮುನ್ನಡೆಸಿದರು. ಜಿತೇಶ್ ನಾಯಕತ್ವದಲ್ಲಿ ಆರ್​​ಸಿಬಿ 23 ರನ್‌ಗಳ ಗೆಲುವು ಸಾಧಿಸಿತ್ತು.

ಆರ್​​ಸಿಬಿಗೆ ಶುಭ ಸುದ್ದಿ

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್‌ಸಿಬಿ ತಂಡಕ್ಕೆ ಒಳ್ಳೆಯ ಸುದ್ದಿ ಸಿಕ್ಕಿದೆ. ನಾಯಕ ರಜತ್ ಪಾಟಿದಾರ್ ಸಂಪೂರ್ಣವಾಗಿ ಫಿಟ್ ಆಗಿದ್ದು, ತಂಡದೊಂದಿಗೆ ಪ್ರಯಾಣಿಸುತ್ತಿದ್ದು, ಮಧ್ಯಮ ಕ್ರಮಾಂಕದ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿವಾರಿಸಿದ್ದಾರೆ. ಇಎಸ್‌ಪಿಎನ್ ಕ್ರಿಕ್‌ಇನ್ಫೊದ ಹೊಸ ವರದಿಯ ಪ್ರಕಾರ, ಫಿಲ್ ಸಾಲ್ಟ್ ಕೂಡ ಈ ವಾರದ ಅಂತ್ಯದ ವೇಳೆಗೆ ತಂಡವನ್ನು ಮತ್ತೆ ಸೇರಿಕೊಳ್ಳಬಹುದು. ಅವರ ಸೇರ್ಪಡೆಯು ಆರಂಭಿಕ ಬ್ಯಾಟಿಂಗ್‌ನಲ್ಲಿ ನಡೆಯುತ್ತಿರುವ ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸುತ್ತದೆ.

ಯಾವ ಆಟಗಾರ ಹೊರಗೆ?

ಫಿಲ್ ಸಾಲ್ಟ್ ಬದಲಿಗೆ ತಂಡದಲ್ಲಿ ಜಾಕೋಬ್ ಬೆಥೆಲ್ ಆಡುತ್ತಿದ್ದಾರೆ. ಬೆಥಲ್ ಸಿಕ್ಕ ಅವಕಾಶಗಳನ್ನು ಕೈ ಚೆಲ್ಲಿದ್ದಾರೆ. ಸತತ 7 ಪಂದ್ಯಗಳಿಂದ ಬೆಥೆಲ್ ಇನ್ನೂ ಒಂದೇ ಒಂದು ಅರ್ಧಶತಕವನ್ನು ಗಳಿಸಿಲ್ಲ. ಪರಿಣಾಮ ಇನ್ನೊಂದು ತುದಿಯಲ್ಲಿರುವ ವಿರಾಟ್ ಕೊಹ್ಲಿ ಮೇಲಿನ ಒತ್ತಡ ಹೆಚ್ಚುತ್ತಿದೆ. ಹಾಗಾಗಿ ಸಾಲ್ಟ್ ತಂಡಕ್ಕೆ ಮರಳಿದರೆ, ಬೆಥಲ್ ಹೊರಗುಳಿಯಬಹುದು.

ಅಯ್ಯರ್​ಗೆ ಚಾನ್ಸ್ ಸಿಗುತ್ತಾ?

ಫಿಲ್ ಸಾಲ್ಟ್ ಮತ್ತು ರಜತ್ ಪಾಟಿದಾರ್ ಆಡುವ ಹನ್ನೊಂದರ ಬಳಗಕ್ಕೆ ಮರಳಿದ ನಂತರ, ಫಾರ್ಮ್‌ನಲ್ಲಿರುವ ವೆಂಕಟೇಶ್ ಅಯ್ಯರ್ ಅವರನ್ನು ಸೇರಿಸಿಕೊಳ್ಳುವುದು ಕಷ್ಟಕರವಾಗಿರುತ್ತದೆ. ಆದಾಗ್ಯೂ, ರೊಮಾರಿಯೊ ಶೆಫರ್ಡ್ ಬದಲಿಗೆ ಅವರಿಗೆ ಅವಕಾಶ ನೀಡಬಹುದು. ಈ ಎಲ್ಲಾ ಸಮಸ್ಯೆಗಳನ್ನು ಸರಿ ಮಾಡಿಕೊಳ್ಳುವ ಮೂಲಕ ಆರ್​​ಸಿಬಿ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗುವ ನಿರೀಕ್ಷೆಯಲ್ಲಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed