IPL 2026, DC vs RR: ರಾಹುಲ್​​​​​​​​​​​​​​​​​-ಪೊರೆಲ್ ಅಬ್ಬರ! ರಾಜಸ್ಥಾನ್​ ರಾಯಲ್ಸ್​ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್​​ ಕನಸು ಜೀವಂತ | | ACTPnews

ಡೆಲ್ಲಿ ಕ್ಯಾಪಿಟಲ್ಸ್


Last Updated:

ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 193 ರನ್​ಗಳಿಸಿತ್ತು.  194 ರನ್​ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ 19.2  ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.  ಕೆಎಲ್ ರಾಹುಲ್ 56, ಅಭಿಷೇಕ್ ಪೊರೆಲ್ 51 ಹಾಗೂ ಅಕ್ಷರ್ ಪಟೇಲ್ ಅಜೇಯ 34 ರನ್​ಗಳಿಸಿ ಗೆಲುವಿನ ರೂವಾರಿಗಳಾದರು.

ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿ ಕ್ಯಾಪಿಟಲ್ಸ್

2026ರ ಐಪಿಎಲ್​​ನ (IPL 2026) 62ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (RR vs DC) ಗೆಲುವು ಸಾಧಿಸಿದೆ. ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 193 ರನ್​ಗಳಿಸಿತ್ತು. 194 ರನ್​ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ 19.2 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಕೆಎಲ್ ರಾಹುಲ್ 56, ಅಭಿಷೇಕ್ ಪೊರೆಲ್ 51 ಹಾಗೂ ಅಕ್ಷರ್ ಪಟೇಲ್ ಅಜೇಯ 34 ರನ್​ಗಳಿಸಿ ಗೆಲುವಿನ ರೂವಾರಿಗಳಾದರು. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ಕನಸು ಇನ್ನೂ ಜೀವಂತವಾಗಿದೆ. ಅತ್ತ ಸೋಲು ಕಂಡ ರಾಜಸ್ಥಾನ್ ರಾಯಲ್ಸ್ ತನ್ನ ಪ್ಲೇ ಆಫ್ ಹಾದಿಯನ್ನ ಮತ್ತಷ್ಟು ಕಠಿಣವಾಗಿಸಿಕೊಂಡಿದೆ. 

194 ರನ್​ಗಳ ಗುರಿಯನ್ನ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಕೆಎಲ್ ರಾಹುಲ್ ಹಾಗೂ ಅಭಿಷೇಕ್ ಪೊರೆಲ್ ಮೊದಲ ವಿಕೆಟ್​​ಗೆ 105 ರನ್​ಗಳ ಜೊತೆಯಾಟ ನಡೆಸಿದರು. ಭರ್ಜರಿ ಬ್ಯಾಟಿಂಗ್ ಮಾಡಿದ 31 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್​ ಸಹಿತ 51 ರನ್​ಗಳಿಸಿ 11ನೇ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ಮೊದಲ ವಿಕೆಟ್ ಬೀಳುತ್ತಿದ್ದಂತೆ ಡೆಲ್ಲಿ ದಿಢೀರ್ ಕುಸಿತ ಕಂಡಿತು.

ಸಾಹುಲ್ ಪರಾಕ್ 13ನೇ ಓವರ್​​​​ನಲ್ಲಿ ಜೋಫ್ರಾ ಆರ್ಚರ್​ ಬೌಲಿಂಗ್​​​​​​​​​​​​​​​​​​​​​​​​​​​ನಲ್ಲಿ ಜುರೆಲ್​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ 42 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್​ಗಳ ಸಹಿತ 56 ರನ್​ಗಳಿಸಿ 15ನೇ ಓವರ್​​ನಲ್ಲಿ ಶನಕಾ ಓವರ್​ನಲ್ಲಿ ಬೌಲ್ಡ್ ಆದರು. ಸ್ಫೋಟಕ ಆಟಗಾರ ಸ್ಟಬ್ಸ್ 6 ಎಸೆತಗಳಲ್ಲಿ 4 ರನ್​ಗಳಿಸಿ ಆರ್ಚರ್ ಬೌಲಿಂಗ್​​ನಲ್ಲಿ, ಡೇವಿಡ್ ಮಿಲ್ಲರ್ 6 ಎಸೆತಗಳಲ್ಲಿ 9 ರನ್​ಗಳಿಸಿ ಬ್ರಿಜೇಶ್ ಶರ್ಮಾ ಬೌಲಿಂಗ್​​ನಲ್ಲಿ ಔಟ್ ಆದರು.

ಗೆಲುವಿನ ಗಡಿ ದಾಟಿಸಿದ ಅಕ್ಷರ್-ಅಶುತೋಷ್

ನಾಯಕ ಅಕ್ಷರ್ ಪಟೇಲ್ 18 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್​ಗಳ ಸಹಿತ ಅಜೇಯ 34 ಹಾಗೂ ಅಶುತೋಷ್ ಶರ್ಮಾ 5 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್​ಗಳ ಸಹಿತ ಅಜೇಯ 18 ರನ್​ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು. ಡೆಲ್ಲಿ ಈ ಗೆಲುವಿನೊಂದಿಗೆ ತನ್ನ ಪ್ಲೇ ಆಫ್​ ರೇಸ್​​​ಅನ್ನ ಇನ್ನೂ ಜೀವಂತವಾಗಿರಿಸಿಕೊಂಡಿದೆ. ನೇರವಾಗಿ ಪ್ಲೇಆಫ್ ಸಾಧ್ಯವಾಗದಿದ್ದರೂ, ಇತರ ತಂಡಗಳ ಫಲಿತಾಂಶದ ಆಧಾರದ ಮೇಲೆ ಇನ್ನೂ ಜೀವಂತವಾಗಿದೆ.

ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್ 35ಕ್ಕೆ2, ಬ್ರಿಜೇಶ್ ಶರ್ಮಾ 44ಕ್ಕೆ2, ದಾಸುನ್ ಶನಕಾ 29ಕ್ಕೆ1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್​​ ಮಾಡಿದ್ದ ರಾಜಸ್ಥಾನ್ ರಾಯಲ್ಸ್ 2ನೇ ಓವರ್​ನಲ್ಲಿಯೇ ಯಶಸ್ವಿ ಜೈಸ್ವಾಲ್​ (12) ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟ್ಸ್‌ಮನ್ 9 ಎಸೆತಗಳಲ್ಲಿ 12 ರನ್​ಗಳಿಸಿ ಲುಂಗಿ ಎನ್ಗಿಡಿ ಬೌಲಿಂಗ್​​ನಲ್ಲಿ ವಿಕೆಟ್ ಒಪ್ಪಿಸಿದರು. ಸ್ಫೋಟಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ 21 ಎಸೆತಗಳಲ್ಲಿ 46 ರನ್ ಗಳಿಸಿ ಅಬ್ಬರಿಸಿದರು. ಸೂರ್ಯವಂಶಿ 2ನೇ ವಿಕೆಟ್ ಜೊತೆಯಾಟದಲ್ಲಿ ಜುರೆಲ್ ಜೊತೆಗೂಡಿ 70 ರನ್​ಗಳ ಜೊತೆಯಾಟ ನೀಡಿದರು. ಮಾಧವ್ ತಿವಾರಿ ಸೂರ್ಯವಂಶಿ ವಿಕೆಟ್ ಪಡೆದು ಡೆಲ್ಲಿಗೆ ಬ್ರೇಕ್ ನೀಡಿದರು.

ಇದನ್ನೂ ಓದಿ: PBKS vs RCB: ಪಂಜಾಬ್ ವಿರುದ್ಧ 23 ರನ್​ಗಳಿಂದ ಗೆದ್ದ ಆರ್​ಸಿಬಿ! ಮೊದಲ ತಂಡವಾಗಿ ಪ್ಲೇಆಫ್​ ಪ್ರವೇಶಿಸಿದ ಬೆಂಗಳೂರು

ಸೂರ್ಯವಂಶಿ ವಿಕೆಟ್ ಬಳಿಕ ಬಂದ ನಾಯಕ ರಿಯಾನ್ ಪರಾಗ್ ಕೂಡ ಅಬ್ಬರಿಸಿದರು. ಕೇವಲ 26 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್​ಗಳ ಸಹಿತ 51 ರನ್​ಗಳಿಸಿ ತಂಡದ ಮೊತ್ತವನ್ನ ಹೆಚ್ಚಿಸಿದರು. ಆದರೆ ಮಿಚೆಲ್ ಸ್ಟಾರ್ಕ್​ 15ನೇ ಓವರ್​ನಲ್ಲಿ ಮೂರು ವಿಕೆಟ್ ಪಡೆದು ರಾಜಸ್ಥಾನದ ಬೃಹತ್ ಮೊತ್ತದ ಕನಸಿಗೆ ಭಂಗ ತಂದರು. 15ನೇ ಓವರ್​ನ 2ನೇ ಎಸೆತದಲ್ಲಿ ಪರಾಗ್​​ರನ್ನ ಪೆವಿಲಿಯನ್​ಗಟ್ಟಿದ ಸ್ಟಾರ್ಕ್ ನಂತರ 3ನೇ ಎಸೆತದಲ್ಲಿ ಡೊನೊವೆನ್ ಪರೇರಾ(0) ಹಾಗೂ 5ನೇ ಎಸೆತದಲ್ಲಿ ರವಿ ಸಿಂಗ್ (4) ವಿಕೆಟ್ ಪಡೆದರು.

ಅನಂತರ ರಾಜಸ್ಥಾನ್ ರಾಯಲ್ಸ್ ನಿರಂತರವಾಗಿ ವಿಕೆಟ್ ಕಳೆದುಕೊಂಡಿತು. ಶುಭಂ ದುಬೆ 5, ದಾಸುನ್ ಶನಕಾ 8 ಎಸೆತಗಳಲ್ಲಿ 10, ಧ್ರುವ್ ಜುರೆಲ್ 40 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಿತ 53 ರನ್​ಗಳಿಸಿ 20ನೇ ಓವರ್​ನಲ್ಲಿ ಔಟ್ ಆದರು. ಜೋಫ್ರಾ ಆರ್ಚರ್ ಅಜೇಯ 2, ಆ್ಯಡಂ ಮಿಲ್ನೆ ಅಜೇಯ 2 ರನ್​ಗಳಿಸಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed