India Post Office Franchise: ನಿಮ್ಮ ಊರಿನಲ್ಲೇ ಪೋಸ್ಟ್ ಆಫೀಸ್​​ ಬ್ಯುಸಿನೆಸ್​ ಶುರು ಮಾಡಿ; ಅಂಚೆ ಇಲಾಖೆಯೊಂದಿಗೆ ಕೈಜೋಡಿಸಿ! | ವ್ಯಾಪಾರ ಸುದ್ದಿ | ACTPnews

ಅಂಚೆ ಕಚೇರಿ ಫ್ರಾಂಚೈಸಿ ಬ್ಯುಸಿನೆಸ್


Last Updated:

ಭಾರತ ಅಂಚೆ ಇಲಾಖೆ ಇ ಕಾಮರ್ಸ್ ಹಿಡಿತ ಬಲಪಡಿಸಲು ಫ್ರಾಂಚೈಸಿ ಸ್ಕಿಮ್ 2.0 ಜಾರಿ, ಎಪಿಟಿ 2.0 ಆಧಾರಿತ ಡಿಜಿಟಲ್ ಸೇವೆ, ಯುವಕರಿಗೆ ಸ್ವ ಉದ್ಯೋಗ, ಕಮಿಷನ್ ಆಧಾರಿತ ಆದಾಯ ಸಿಗಲಿದೆ.

ಅಂಚೆ ಕಚೇರಿ ಫ್ರಾಂಚೈಸಿ ಬ್ಯುಸಿನೆಸ್
ಅಂಚೆ ಕಚೇರಿ ಫ್ರಾಂಚೈಸಿ ಬ್ಯುಸಿನೆಸ್

ಪ್ರೈವೇಟ್ ಕೊರಿಯರ್ ಸಂಸ್ಥೆಗಳಿಗೆ ಬ್ರೇಕ್ ಹಾಕುವಂತೆ, ಇ-ಕಾಮರ್ಸ್ ಮಾರ್ಕೆಟ್ (E-Commerce Market) ಮೇಲೆ ತಮ್ಮ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ಉದ್ದೇಶದಿಂದ ಭಾರತ ಅಂಚೆ ಇಲಾಖೆ ಹೊಸ ಯೋಜನೆಯನ್ನು (Indian Post) ರೂಪಿಸಿದೆ. ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಾ ಹೊಸ ‘ಫ್ರಾಂಚೈಸಿ ಸ್ಕಿಮ್ 2.0’ (India Post Office Franchise) ಅನ್ನು ದೇಶದಾದ್ಯಂತ ಜಾರಿ ಮಾಡಿದೆ. ಆಧುನಿಕತೆಗೆ ತಕ್ಕಂತೆ, ಹೊಸ ಅಡ್ವಾನ್ಸ್ ಪೋಸ್ಟಲ್ ಟೆಕ್ನಾಲಜಿ (ಎಪಿಟಿ 2.0) ಅನ್ವಯ ಈ ಯೋಜನೆಯನ್ನು ಡಿಸೈನ್ ಮಾಡಿದೆ. ಇದರ ಮೂಲಕ ಗ್ರಾಮ, ಪಟ್ಟಣದಲ್ಲಿ ನಿರುದ್ಯೋಗಿ ಯುವಕ-ಯುವತಿಯರಿಗೆ, ಸ್ವಯಂ ಉದ್ಯೋಗ (Jobs) ಮಾಡಲು ಬಯಸುವ ಮಹಿಳೆಯರಿಗೆ, ಚಿಕ್ಕ ವ್ಯಾಪಾರಿಗಳಿಗೆ ಪೋಸ್ಟ್ ಆಫೀಸ್ ಪಾಲುದಾರರಾಗಿ ಸ್ವತಃ ವ್ಯಾಪಾರವನ್ನು ಆರಂಭಿಸಬಹುದು.

ಇಷ್ಟ ಬಂದ ಸೇವೆ, ಉತ್ತಮ ಆದಾಯ!

ಫ್ರಾಂಚೈಸಿಯನ್ನು ತೆಗೆದುಕೊಂಡವರು ಕೇವಲ ಒಂದೇ ಕೆಲಸಕ್ಕೆ ಸೀಮಿತ ಆಗಬೇಕಿಲ್ಲ. ಮಾರ್ಕೆಟ್ ಅಗತ್ಯಗಳನ್ನು ಅರಿತುಕೊಂಡು ನಾಲ್ಕು ರೀತಿಯ ಸೇವೆಗಳನ್ನು ಪೂರೈಕೆ ಮಾಡಬಹುದು.

ಬುಕ್ಕಿಂಗ್ ಸೇವೆಗಳು: ಕೇವಲ ಸ್ಪೀಡ್ ಪೋಸ್ಟ್, ಪಾರ್ಸೆಲ್, ಅಂತರಾಷ್ಟ್ರೀಯ ಇಎಂಎಸ್​ ಪತ್ರಗಳನ್ನು ಬುಕ್ ಮಾಡಿಕೊಳ್ಳಬಹುದು.

ಡೆಲಿವರಿ ಸೇವೆಗಳು: ಇ-ಕಾಮರ್ಸ್ ಪಾರ್ಸೆಲ್ ಗಳನ್ನು ಗ್ರಾಹಕರ ಮನೆಗೆ ತಲುಪಿಸುವುದು.

ಪಿಕ್ ಅಪ್ ಸೇವೆಗಳು: ನೇರ ವ್ಯಾಪಾರಿಗಳು ಅಥವಾ ಜನರ ಬಳಿಯೇ ಹೋಗಿ ಪಾರ್ಸೆಲ್ ಗಳನ್ನು ಸಂಗ್ರಹ ಮಾಡುವುದು.

ಆಲ್ ಇನ್ ವನ್ ಸೇವೆಗಳು: ಮೇಲೆ ತಿಳಿಸಿರುವ ಬುಕ್ಕಿಂಗ್, ಡೆಲಿವರಿ, ಪಿಕ್ ಅಪ್ ಸೇರಿದಂತೆ ಎಲ್ಲಾ ಸೇವೆಗಳನ್ನು ಒಂದೇ ಸೂರಿನ ಅಡಿ ನೀಡಬಹುದು.

ಯೋಜನೆಗೆ ಆಯ್ಕೆಯಾಗಲು ಏನೆಲ್ಲಾ ಅರ್ಹತೆ ಇರಬೇಕು?

ಈ ಯೋಜನೆಗೆ ಆಯ್ಕೆಯಾಗಲು ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು. ಬುಕ್ಕಿಂಗ್ ಕೌಂಟರ್ ಆರಂಭ ಮಾಡಬೇಕು ಎಂದುಕೊಂಡರೆ, 12ನೇ ತರಗತಿ, ಪಾರ್ಸೆಲ್ ಸೇವೆ ಆರಂಭಿಸಲು 10ನೇ ತರಗತಿ, ಪಾಸ್ ಆಗಿರಬೇಕು. ಸ್ಮಾರ್ಟ್ ಫೋನ್ ಅಥವಾ ಕಂಪ್ಯೂಟರ್ ಬಳಕೆಯ ಜ್ಞಾನ ಇರಬೇಕು. ಒಂದೊಮ್ಮೆ ಡೆಲಿವರಿ ಸೇವೆಗಳನ್ನು ಆಯ್ಕೆ ಮಾಡಿಕೊಂಡರೆ ನಿಮಗೆ ಒಂದು ಸ್ವತಃ ದ್ವಿಚಕ್ರ ವಾಹನ, ಡ್ರೈವಿಂಗ್ ಲೈಸೆನ್ಸ್ ಇರುವುದು ಕಡ್ಡಾಯ. ಆದರೆ ಈಗಾಗಲೇ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಕುಟುಂಬ ಸದಸ್ಯರಿಗೆ ಈ ಫ್ರಾಂಚೈಸಿಗಳನ್ನು ನೀಡುವುದಿಲ್ಲ.

ಅಂಚೆ ಇಲಾಖೆ (ಸಾಂದರ್ಭಿಕ ಚಿತ್ರ)
ಮೂಲಭೂತ ಸೌಲಭ್ಯಗಳು & ಸೆಕ್ಯೂರಿಟಿ ಡಿಪಾಸಿಟ್

ಬುಕ್ಕಿಂಗ್ ಕೇಂದ್ರವನ್ನು ಆರಂಭಿಸಲು ಅಗತ್ಯವಿರುವ ಕೊಠಡಿ, ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್, ಇಂಟರ್​​ನೆಟ್ ಸಂಪರ್ಕ, ಪ್ರಿಂಟರ್ ಹೊಂದಿರಬೇಕು. ಈ ಬ್ಯುಸಿನೆಸ್ ಮಾಡೆಲ್ ಅನ್ವಯ ನೀವು ರಿಫಂಡಬಲ್ ಸೆಕ್ಯೂರಿಟಿ ಡಿಪಾಸಿಟ್ ಮಾಡಬೇಕು. ಕೇವಲ ಪಿಕ್ ಅಪ್ ಅಥವಾ ಡೆಲಿವರಿ ಸೇವೆಗಳನ್ನ ಆಯ್ಕೆ ಮಾಡಿಕೊಂಡರೆ ನೀವು 5 ಸಾವಿರ, ಬುಕ್ಕಿಂಗ್ ಕೇಂದ್ರಕ್ಕೆ 10 ಸಾವಿರ ರೂಪಾಯಿ, ಎಲ್ಲಾ ರೀತಿಯ ಸೇವೆಗಳನ್ನು ನೀಡುವ ‘ಫುಲ್ ಫ್ರಾಂಚೈಸಿ’ ಆರಂಭಿಸಲು 15 ಸಾವಿರ ರೂಪಾಯಿ ಡಿಪಾಸಿಟ್ ಮಾಡಬೇಕು.

ಹೆಚ್ಚಿನ ವಹಿವಾಟು, ಹೆಚ್ಚು ಹೆಚ್ಚು ಕಮಿಷನ್!

ಈ ಹೊಸ ವಿಧಾನದಲ್ಲಿ ಹೆಚ್ಚು ವಹಿವಾಟು ನಡೆಸಲು ‘ಎಪಿಟಿ 2.0’ ಮೊಬೈಲ್ ಆ್ಯಪ್, ಸೆಲ್ಫ್​ ಸರ್ವೀಸ್​ ಪೋರ್ಟಲ್ ಮೂಲಕ ಸಂಪೂರ್ಣವಾಗಿ ಡಿಜಿಟಲ್ ಪದ್ಧತಿಯಲ್ಲೇ ನಡೆಯಲಿದೆ. ಪ್ರತಿಯೊಂದು ಬುಕ್ಕಿಂಗ್, ಡೆಲಿವರಿ ಮೇಲೆ ಆಕರ್ಷಕ ಕಮಿಷನ್ ನೇರವಾಗಿ ಸಿಗುತ್ತದೆ. ವಹಿವಾಟು, ವ್ಯಾಪಾರ ಬೆಳೆದಂತೆ ಕಮಿಷನ್ ಮೊತ್ತ ಕೂಡ ಹೆಚ್ಚಾಗುತ್ತದೆ. ಪ್ರಮುಖವಾಗಿ ಕ್ಯಾಶ್ ಆನ್ ಡೆಲಿವರಿ (ಸಿಒಡಿ) ಪಾರ್ಸೆಲ್ ಮೇಲೆ ಹೆಚ್ಚುವರಿ ಲಾಭಗಳು ಸಿಗಲಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಇಂಡಿಯಾ ಪೋಸ್ಟ್ ಈ ಫ್ರಾಂಚೈಸಿಗಳ ಆರಂಭಕ್ಕೆ ಪ್ರತಿ ವರ್ಷ ನಾಲ್ಕು ಬಾರಿ ಅರ್ಜಿಗಳನ್ನು ಆಹ್ವಾನಿಸುತ್ತದೆ. (ಜನವರಿ, ಏಪ್ರಿಲ್, ಜುಲೈ, ಅಕ್ಟೋಬರ್) ತಿಂಗಳಿನಲ್ಲಿ ಹಂತ ಹಂತವಾಗಿ ಅರ್ಜಿಗಳನ್ನು ಬಿಡುಗಡೆ ಮಾಡುತ್ತದೆ. ಈ ಬಗ್ಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ನಿಮ್ಮ ಅರ್ಹತೆಗಳನ್ನು ಪರಿಶೀಲನೆ ನಡೆಸಿ ಆಯ್ಕೆಯಾದ ವ್ಯಕ್ತಿಗಳಿಗೆ ಅಂಚೆ ಇಲಾಖೆ ಸಂಪೂರ್ಣ ತರಬೇತಿಯನ್ನು ನೀಡುತ್ತದೆ. ಅಧಿಕೃತ ಒಪ್ಪಂದ ಆದ 30 ದಿನಗಳ ಒಳಗೆ ನೀವು ನಿಮ್ಮ ಸ್ವತಃ ವ್ಯಾಪಾರವನ್ನು ಶುರು ಮಾಡಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed