IND vs ZIM: ಮಿಂಚಿದ ಮಯಾಂಕ್​, ಪ್ರಿನ್ಸ್ ಯಾದವ್, ಅಬ್ಬರಿಸಿದ ವೈಭವ್! ಜಿಂಬಾಬ್ವೆ ಮಣಿಸಿ ಸೋಲಿನ ಸರಪಳಿ ಕಳಚಿದ ಭಾರತ | ಕ್ರೀಡಾ ಸುದ್ದಿ | ACTPnews

ವೈಭವ್ ಸೂರ್ಯವಂಶಿ-ಅಭಿಷೇಕ್ ಶರ್ಮಾ


Last Updated:

ಶ್ರೇಯಸ್ ಅಯ್ಯರ್​​ ನಾಯಕತ್ವದಲ್ಲಿ ಟೀಮ್ ಇಂಡಿಯಾ ಮೊದಲ ಸತತ 6 ಸೋಲುಗಳ ನಂತರ ಮೊದಲ ಜಯ ಸಾಧಿಸಿದೆ. ವೈಭವ್ ಸೂರ್ಯವಂಶಿ 19 ಎಸೆತಗಳಲ್ಲಿ 50 ರನ್​ಗಳಿಸಿ ಗೆಲುವಿನ ರೂವಾರಿಯಾದರು.

ವೈಭವ್ ಸೂರ್ಯವಂಶಿ-ಅಭಿಷೇಕ್ ಶರ್ಮಾ
ವೈಭವ್ ಸೂರ್ಯವಂಶಿ-ಅಭಿಷೇಕ್ ಶರ್ಮಾ

ಹರಾರೆ ಸ್ಪೋರ್ಟ್ಸ್ ಕ್ಲಬ್​​ನಲ್ಲಿ ನಡೆದ ಮೂರು ಪಂದ್ಯಗಳ ಟಿ20 ಸರಣಿ ಮೊದಲ ಪಂದ್ಯದಲ್ಲಿ ಭಾರತ ತಂಡ ಅತಿಥೇಯ ಜಿಂಬಾಬ್ವೆ ವಿರುದ್ಧ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಜಯದ ಮೂಲಕ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ. ಅಲ್ಲದೆ ಶ್ರೇಯಸ್ ಅಯ್ಯರ್​​ ನಾಯಕತ್ವದಲ್ಲಿ ಟೀಮ್ ಇಂಡಿಯಾ ಮೊದಲ ಸತತ 6 ಸೋಲುಗಳ ನಂತರ ಮೊದಲ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಭಾರತ ತಂಡ ಟಾಸ್​ ಗೆದ್ದು ಜಿಂಬಾಬ್ವೆ ತಂಡವನ್ನ ಕೇವಲ 125ಕ್ಕೆ ನಿಯಂತ್ರಿಸಿತ್ತು. ನಂತರ ವೈಭವ್ ಸೂರ್ಯವಂಶಿ ಸಿಡಿಸಿದ ಸಿಡಿಲಬ್ಬರದ ಅರ್ಧಶತಕ ಹಾಗೂ ಇಶಾನ್ ಕಿಶನ್ ಮತ್ತು ನಾಯಕ ಶ್ರೇಯಸ್​ ಅಯ್ಯರ್​ರ ಜವಾಬ್ದಾರಿಯುವ ಬ್ಯಾಟಿಂಗ್ ನೆರವಿನಿಂದ ಕೇವಲ 13.2 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಅಬ್ಬರಿಸಿದ ವೈಭವ್ ಸೂರ್ಯವಂಶಿ

126 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ 3ನೇ ಓವರ್​​ನಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. 8 ಎಸೆತಗಳನ್ನೆದುರಿಸಿದ ಅಭಿಷೇಕ್ ಶರ್ಮಾ ಕೇವಲ 1 ರನ್​ಗಳಿಸಿ ಔಟ್ ಆದರು.  ಆದರೆ ವೈಭವ್ ಸೂರ್ಯವಂಶಿ ಮಾತ್ರ ತಮ್ಮ ಅಬ್ಬರವನ್ನ ಮುಂದುವರಿಸಿದರು. ಇಶಾನ್ ಕಿಶನ್ ಜೊತೆಗೆ 2ನೇ ವಿಕೆಟ್​ ಜೊತೆಯಾಟದಲ್ಲಿ 21 ಎಸೆತಗಳಲ್ಲಿ 45 ರನ್​ಗಳ ಜೊತೆಯಾಟ ನಡೆಸಿದರು. 7ನೇ ಓವರ್​​ನ ಮೊದಲ ಎಸೆತದಲ್ಲಿ 2 ರನ್​ ಪಡೆಯುವ ಮೂಲಕ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಅರ್ಧಶತಕ ಸಿಡಿಸಿದ ವೈಭವ್ ನಂತರದ ಎಸೆತದಲ್ಲೇ ಔಟ್ ಆದರು. 19 ಎಸೆತಗಳನ್ನಾಡಿದ 15 ವರ್ಷದ ಆಟಗಾರ ತಲಾ 4 ಬೌಂಡರಿ, ಸಿಕ್ಸರ್​ಗಳ ಸಹಿತ 50 ರನ್​ಗಳಿಸಿ ಔಟ್ ಆದರು. ಆದರೂ ಟಿ20ಐನಲ್ಲಿ ಅರ್ಧಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ವಿಶ್ವದಾಖಲೆಗೆ ಪಾತ್ರರಾದರು.

ಜಿಂಬಾಬ್ವೆ ಪರ ಬ್ಲೆಸ್ಸಿಂಗ್ ಮುಜರಬಾನಿ 26ಕ್ಕೆ2 ವಿಕೆಟ್ ಪಡೆದರೆ, ರಿಚರ್ಡ್ ಎನ್​ಗರಾವ 30ಕ್ಕೆ1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ಜಿಂಬಾಬ್ವೆ ತಂಡ ಭಾರತೀಯ ವೇಗಿಗಳ ದಾಳಿಗೆ ತತ್ತರಿಸಿತ್ತು. 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 125 ರನ್​ಗಳಿಸಲಷ್ಟೇ ಶಕ್ತವಾಗಿತ್ತು.

ತವರಿನ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಜಿಂಬಾಬ್ವೆ ತಂಡ ಮೊದಲ ಎಸೆತದಲ್ಲಿಯೇ ವಿಕೆಟ್ ಕಳೆದುಕೊಂಡಿತು. 2 ವರ್ಷಗಳ ನಂತರ ರಾಷ್ಟ್ರೀಯ ತಂಡಕ್ಕೆ ಮರಳಿದ್ದ ಮಯಾಂಕ್ ಯಾದವ್ ಬ್ರಿಯಾನ್ ಬೆನೆಟ್ ಅವರನ್ನು ಪೆವಿಲಿಯನ್​​ಗೆ ಗೋಲ್ಡನ್ ಡಕ್ ಮಾಡಿದರು. ನಂತರ ನಾಲ್ಕನೇ ಓವರ್‌ನಲ್ಲಿ ಬೆನ್ ಕರ್ರನ್ (10) ಪ್ರಿನ್ಸ್ ಯಾದವ್​ಗೆ ಬಲಿಯಾದರು. ಅವರು 8 ಎಸೆತಗಳಲ್ಲಿ 10 ರನ್ ಗಳಿಸಿದರು. ನಂತರ 5ನೇ ಓವರ್​​ನಲ್ಲಿ ಮಯಾಂಕ್ ಯಾದವ್ 14 ಎಸೆತಗಳಲ್ಲಿ 6 ರನ್ ಗಳಿಸಿದ್ದ ಡಿಯಾನ್ ಮೈಯರ್ಸ್​​ಗೆ ಪೆವಿಲಿಯನ್​ಗೆ ದಾರಿ ತೋರಿಸಿದರು. ಶಿವಂ ದುಬೆ ನಾಯಕ ಸಿಕಂದರ್ ರಾಜಾ(4) ಅವರನ್ನು ಔಟ್ ಮಾಡಿದರು, ರಾಜಾ 7 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿ ಔಟ್ ಆದರು.

ಜಿಂಬಾಬ್ವೆ 32 ರನ್​ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು. ಈ ಹಂತರದಲ್ಲಿ 100ರೊಳಗೆ ಆಲೌಟ್ ಆಗುವ ಭೀತಿ ಎದುರಿಸಿತ್ತು. ಆದರೆ ರಯಾನ್ ಬರ್ಲ್ ಹಾಗೂ ಮಧೆವೆರೆ 5ನೇ ವಿಕೆಟ್ ಜೊತೆಯಾಟದಲ್ಲಿ 32 ರನ್ ಸೇರಿಸಿದರು. ಬರ್ಲ್ 35 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸಹಿತ 26 ರನ್​ ಸಿಡಿಸಿ ರವಿ ಬಿಷ್ಣೋಯ್​ಗೆ ವಿಕೆಟ್ ಒಪ್ಪಿಸಿದರು.

100ರ ಗಡಿ ದಾಟಿಸಿದ ಮಧೆವೆರೆ-ಮರುಮಣಿ

ನಂತರ ಒಂದಾದ ಮಧೆವೆರೆ ಹಾಗೂ ಮರುಮಣಿ 6ನೇ ವಿಕೆಟ್ ಜೊತೆಯಾಟದಲ್ಲಿ 58 ರನ್​ಗಳಿಸಿ ತಂಡದ ಮೊತ್ತವನ್ನ 100ರ ಗಡಿ ದಾಟಿಸಿದರು.  ಮಧೆವೆರೆ 34 ಎಸೆತಗಳಲ್ಲಿ  3 ಬೌಂಡರಿ, 1 ಸಿಕ್ಸರ್ ಸಹಿತ 39 ರನ್​ಗಳಿಸಿ 20ನೇ ಓವರರ್​​ನಲ್ಲಿ ಔಟ್ ಆದರು.  ಮರುಮಣಿ 20 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್​ ಸಹಿತ ಅಜೆಯ 27 ರನ್​ಗಳಿಸಿದರು. ಒಟ್ಟಾರೆ ಜಿಂಬಾಬ್ವೆ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 125 ರನ್​ಗಳನ್ನಷ್ಟೇ ಗಳಿಸಲು ಶಕ್ತವಾಯಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed