Last Updated:
ಮೊದಲ ದಿನದ ಅಂತ್ಯಕ್ಕೆ 131 ರನ್ ಗಳಿಸಿ ಅಜೇಯರಾಗಿದ್ದ ಕರ್ನಾಟಕದ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್, ಎರಡನೇ ದಿನವೂ ಅದ್ಭುತ ಪ್ರದರ್ಶನ ನೀಡಿದರು. ಅವರು ಅಸಿತ ಫೆರ್ನಾಂಡೋ ಅವರ ಬೌಲಿಂಗ್‌ನಲ್ಲಿ ಫೋರ್ ಬಾರಿಸುವ ಮೂಲಕ 215 ಎಸೆತಗಳಲ್ಲಿ ತಮ್ಮ ಚೊಚ್ಚಲ 150 ರನ್‌ಗಳ ಮೈಲಿಗಲ್ಲನ್ನು ದಾಟಿದರು.
ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ (Test Series) ಮೊದಲ ಪಂದ್ಯ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೊದಲ ಎರಡು ದಿನಗಳ ಆಟ ಅಂತ್ಯವಾಗಿದ್ದು ಟೀಮ್ ಇಂಡಿಯಾ 9 ವಿಕೆಟ್ ನಷ್ಟಕ್ಕೆ 460 ರನ್ ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದೆ. ಮಳೆ ಹಾಗೂ ತೇವಭರಿತ ಮೈದಾನದ ಕಾರಣದಿಂದಾಗಿ ಎರಡನೇ ದಿನದ ಆಟವು ತಡವಾಗಿ ಆರಂಭವಾಯಿತು. ಆದರೂ, ಆರಂಭಿಕ ಬ್ಯಾಟರ್ ದೇವದತ್ ಪಡಿಕ್ಕಲ್ ಅವರ ಆಕರ್ಷಕ ಶತಕದ ನೆರವಿನಿಂದ ಭಾರತ ದೊಡ್ಡ ಮೊತ್ತ ಪೇರಿಸಿದೆ.














