IND vs ENG, 1st ODI: ರೂಟ್, ಡಾಸೆನ್ ಹೋರಾಟದ ಅರ್ಧಶತಕ! ಭಾರತಕ್ಕೆ 259 ರನ್‌ಗಳ ಸಾಧಾರಣ ಗುರಿ ನೀಡಿದ ಇಂಗ್ಲೆಂಡ್ | ಕ್ರೀಡಾ ಸುದ್ದಿ | ACTPnews

ಜೋ ರೂಟ್​


Last Updated:

ಎಡ್ಜ್​ಬಾಸ್ಟನ್​​ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡ 258 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ.

ಜೋ ರೂಟ್​
ಜೋ ರೂಟ್​

ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಮೊದಲ ಏಕದಿನ (ODI) ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡ 258 ರನ್‌ಗಳ ಸಾಧಾರಣ ಮೊತ್ತ ದಾಖಲಿಸಿದೆ. 107ಕ್ಕೆ 6 ವಿಕೆಟ್ ಕಳೆದುಕೊಂಡು ಆಘಾತ ಆರಂಭದಲ್ಲೇ ಕುಸಿತ ಕಂಡಿದ್ದ ಇಂಗ್ಲೆಂಡ್ ತಂಡಕ್ಕೆ ಅನುಭವಿ ಬ್ಯಾಟರ್ ಜೋ ರೂಟ್ (86) ಹಾಗೂ ಲಿಯಾಮ್ ಡಾಸೆನ್ (68) ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಮೊತ್ತ 250ರ ಗಡಿ ದಾಟುವಂತೆ ಮಾಡಿದರು.

ಉತ್ತಮ ಆರಂಭ ಪಡೆದ ಇಂಗ್ಲೆಂಡ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕರು ಉತ್ತಮ ಅಡಿಪಾಯ ಹಾಕಿಕೊಟ್ಟರು. ಇನ್ನಿಂಗ್ಸ್ ಆರಂಭಿಸಿದ ಬೆನ್ ಡಕೆಟ್ ಹಾಗೂ ಜೇಕಬ್ ಬೆಥೆಲ್ ಆರಂಭದಲ್ಲಿ ರನ್‌ಗಳಿಸಲು ಪರದಾಡಿದರೂ ಆ ನಂತರ ಲಯಕ್ಕೆ ಮರಳಿ 61 ರನ್‌ಗಳ ಜೊತೆಯಾಟ ನೀಡಿದರು. ಆದರೆ ಗುನ್ರೂರ್ ಬ್ರಾರ್ ಒಂದೇ ಓವರ್‌ನಲ್ಲಿ ಈ ಇಬ್ಬರು ಆರಂಭಿಕರನ್ನ ಪೆವಿಲಿಯನ್ ಸೇರಿಸಿ ಭಾರತಕ್ಕೆ ಮೊದಲ ಮುನ್ನಡೆ ದೊರಕಿಸಿಕೊಟ್ಟರು. ಬೆಥೆಲ್ 31 ಎಸೆತಗಳಲ್ಲಿ 14 ರನ್‌ಗಳಿಸಿ ಸುಂದರ್‌ಗೆ ಕ್ಯಾಚ್ ನೀಡಿದರೆ, 45 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್‌ಗಳ ಸಹಿತ 43 ರನ್‌ಗಳಿಸಿದ್ದ ಬೆನ್ ಡಕೆಟ್ ಕೇವಲ 2 ಎಸೆತಗಳ ನಂತರ ಬುಮ್ರಾಗೆ ಕ್ಯಾಚ್ ನೀಡಿ ಔಟ್ ಆದರು.

ದಿಢೀರ್ ಕುಸಿತ ಕಂಡ ಆಂಗ್ಲರು

ಮುಂದಿನ ಓವರ್‌ನಲ್ಲಿ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ 3 ಎಸೆತಗಳಲ್ಲಿ 1 ರನ್‌ಗಳಿಸಿ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಶೂನ್ಯಕ್ಕೆ 61 ರನ್‌ಗಳಿಸಿದ್ದ ಇಂಗ್ಲೆಂಡ್ ಕೇವಲ 3 ರನ್‌ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಮುಂದಿನ 2 ಓವರ್‌ಗಳಲ್ಲಿ ಪ್ರಸಿದ್ಧ್ ಕೃಷ್ಣ ಇಂಗ್ಲೆಂಡ್‌ಗೆ ಮತ್ತೊಂದು ಶಾಕ್ ಕೊಟ್ಟರು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಜೋಸ್ ಬಟ್ಲರ್(5) ಹಾಗೂ ಸ್ಯಾಮ್ ಕರ್ರನ್(0) ವಿಕೆಟ್ ಉಡಾಯಿಸಿದರು.

ರೂಟ್​-ಡಾಸೆನ್ ಶತಕದ ಜೊತೆಯಾಟ

7ನೇ ಕ್ರಮಾಂಕದಲ್ಲಿ ಬಂದ ವಿಲ್ ಜಾಕ್ಸ್ 7ನೇ ವಿಕೆಟ್ ಜೊತೆಯಾಟದಲ್ಲಿ ರೂಟ್ ಜೊತೆ ಸೇರಿ 27 ರನ್ ಸೇರಿಸಿದರು. ಜಾಕ್ಸ್ 20 ರನ್‌ಗಳಿಸಿ ದುಬೆಗೆ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್ 22 ಓವರ್ ವೇಳೆಗೆ 6 ವಿಕೆಟ್ ಕಳೆದುಕೊಂಡು 6 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಇಂಗ್ಲೆಂಡ್ 150 ರನ್‌ಗಳಿಸುವುದು ಅನುಮಾನದಂತಿತ್ತು. ಆದರೆ ಲಿಯಾಮ್ ಡಾಸೆನ್ ಹಾಗೂ ರೂಟ್ ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡಿದರು. ಈ ಜೋಡಿ 8ನೇ ವಿಕೆಟ್ ಜೊತೆಯಾಟದಲ್ಲಿ 121 ರನ್‌ಗಳ ಜೊತೆಯಾಟ ನೀಡಿತು. ಅಪಾಯಕಾರಿಯಾಗುತ್ತಿದ್ದ ಈ ಜೊಡಿಯನ್ನ ಅಕ್ಷರ್ ಪಟೇಲ್ ಬೇರ್ಪಡಿಸಿದರು. ಡಾಸೆನ್ 83 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 68 ರನ್‌ಗಳಿಸಿ 44ನೇ ಓವರ್‌ನಲ್ಲಿ ಪೆವಿಲಿಯನ್ ಸೇರಿಕೊಂಡರು.

ಭಾರತದ ಪರ ಅಕ್ಷರ್ ಪಟೇಲ್ 62ಕ್ಕೆ4 ವಿಕೆಟ್ ಪಡೆದರೆ, ಗುರ್ನೂರ್ ಬ್ರಾರ್ 62ಕ್ಕೆ2, ಪ್ರಸಿದ್ಧ್ ಕೃಷ್ಣ 50ಕ್ಕೆ2, ಜಸ್ಪ್ರೀತ್ ಬುಮ್ರಾ 31ಕ್ಕೆ1 ಹಾಗೂ ಶಿವಂ ದುಬೆ 27ಕ್ಕೆ1 ವಿಕೆಟ್ ಪಡೆದು ಮಿಂಚಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed