Last Updated:
ಚೆಸ್ಟರ್-ಲೆ-ಸ್ಟ್ರೀಟ್ನಲ್ಲಿ ನಡೆದ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು, ಭಾರತ ಆ ಪಂದ್ಯದಲ್ಲಿ 7 ವಿಕೆಟ್ ಕಳೆದುಕೊಂಡು 189 ರನ್ ಗಳಿಸಿತ್ತು. ಪಂದ್ಯ ಫಲಿತಾಂಶರಹಿತವಾಗಿ ಕೊನೆಗೊಂಡರೂ, 15 ವರ್ಷದ ಆಟಗಾರನ ಬಗ್ಗೆ ಕುತೂಹಲ ಮತ್ತು ಚರ್ಚೆ ಕ್ರಿಕೆಟ್ ವಲಯಗಳಲ್ಲಿ ಬೆಳೆಯುತ್ತಲೇ ಇದೆ.
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಎರಡನೇ ಟಿ20ಐ ಮ್ಯಾಂಚೆಸ್ಟರ್ನಲ್ಲಿ ಶನಿವಾರ ನಡೆಯಲಿದ್ದು, ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರನ್ ಭಾರತದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. 15 ವರ್ಷದ ವೈಭವ್ ಪ್ರಸ್ತುತ ತಮ್ಮ ಜೀವನದ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ, ಆದರೆ ಆತಿಥೇಯ ತಂಡ ಓಲ್ಡ್ ಟ್ರಾಫರ್ಡ್ನಲ್ಲಿ ನಡೆಯಲಿರುವ ಪಂದ್ಯಕ್ಕಾಗಿ ಯುವ ಆಟಗಾರನನ್ನು ನಿಯಂತ್ರಿಸಲು ಸೂಕ್ತ ತಂತ್ರಗಳು ಮತ್ತು ಯೋಜನೆಗಳನ್ನು ಹೊಂದಿದೆ ಎಂದು ಕರ್ರನ್ ಹೇಳಿದ್ದಾರೆ. ಇತ್ತೀಚಿನ ಐಪಿಎಲ್ ಋತುವಿನಲ್ಲಿ ತಮ್ಮ ಅದ್ಭುತ ಪ್ರದರ್ಶನದೊಂದಿಗೆ ಭಾರತೀಯ ಕ್ರಿಕೆಟ್ನ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿರುವ ವೈಭವ್ ಸೂರ್ಯವಂಶಿ ಶನಿವಾರ ತಮ್ಮ ಟಿ20ಐ ಪದಾರ್ಪಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಚೆಸ್ಟರ್-ಲೆ-ಸ್ಟ್ರೀಟ್ನಲ್ಲಿ ನಡೆದ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು, ಭಾರತ ಆ ಪಂದ್ಯದಲ್ಲಿ 7 ವಿಕೆಟ್ ಕಳೆದುಕೊಂಡು 189 ರನ್ ಗಳಿಸಿತ್ತು. ಪಂದ್ಯ ಫಲಿತಾಂಶರಹಿತವಾಗಿ ಕೊನೆಗೊಂಡರೂ, 15 ವರ್ಷದ ಆಟಗಾರನ ಬಗ್ಗೆ ಕುತೂಹಲ ಮತ್ತು ಚರ್ಚೆ ಕ್ರಿಕೆಟ್ ವಲಯಗಳಲ್ಲಿ ಬೆಳೆಯುತ್ತಲೇ ಇದೆ.
ಪಂದ್ಯದ ಮುನ್ನಾದಿನ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಯಾಮ್ ಕರನ್, ವೈಭವ್ ಸೂರ್ಯವಂಶಿ ಅವರ ಪ್ರತಿಭೆಯನ್ನು ಶ್ಲಾಘಿಸಿದರು, ಆದರೆ ಇಂಗ್ಲೆಂಡ್ನಲ್ಲಿನ ಪರಿಸ್ಥಿತಿಗಳು ಯುವ ಆಟಗಾರನಿಗೆ ಸಂಪೂರ್ಣವಾಗಿ ವಿಭಿನ್ನ ಮತ್ತು ಸವಾಲಿನದ್ದಾಗಿರಬಹುದು ಎಂದು ಎಚ್ಚರಿಸಿದ್ದಾರೆ. “ಇಂಗ್ಲೆಂಡ್ನಲ್ಲಿನ ಪರಿಸ್ಥಿತಿಗಳು ವೈಭವ್ಗೆ ವಿಭಿನ್ನ ಸವಾಲನ್ನು ಒಡ್ಡುತ್ತವೆ ಎಂದು ನಾನು ಭಾವಿಸುತ್ತೇನೆ. ಇಲ್ಲಿನ ಪಿಚ್ಗಳು ಭಾರತಕ್ಕಿಂತ ತುಂಬಾ ವಿಭಿನ್ನವಾಗಿವೆ ಮತ್ತು ನಿಧಾನವಾಗಿರುತ್ತವೆ. ಬೌಲರ್ಗಳಾಗಿ, ನಾವು ಖಂಡಿತವಾಗಿಯೂ ಅವರ ವಿರುದ್ಧ ಪ್ಲಾನ್ ಸಿದ್ಧಪಡಿಸಿಕೊಂಡಿದ್ದೇವೆ. ಆದರೆ, ನಮ್ಮ ಯೋಜನೆಗಳು ಸಂಪೂರ್ಣವಾಗಿ ಕೆಲಸ ಮಾಡುತ್ತವೆ ಎಂದು ನಾನು ಹೇಳುತ್ತಿಲ್ಲ, ಏಕೆಂದರೆ ಅವರು ಯಾರೂ ನಂಬಲಾಗದಷ್ಟು ಚೆನ್ನಾಗಿ ಆಡುತ್ತಿದ್ದಾರೆ” ಎಂದು ವೈಭವ್ ಆಟವನ್ನು ಪ್ರಶಂಸಿಸಿದರು.
ಎಡಗೈ ವೇಗದ ಬೌಲರ್ ಮತ್ತು ಆಲ್ರೌಂಡರ್ ಸ್ಯಾಮ್ ಕರನ್ ಅವರಿಗೆ ಐಪಿಎಲ್ನಲ್ಲಿ ವ್ಯಾಪಕ ಅನುಭವವಿದೆ. ಭಾರತೀಯ ಕ್ರಿಕೆಟ್ನ ಸುತ್ತಲಿನ ಒತ್ತಡ ಮತ್ತು ಅಭಿಮಾನಿಗಳ ಉನ್ಮಾದವನ್ನು ಅವರು ನೇರವಾಗಿ ನೋಡಿದ್ದಾರೆ. ವೈಭವ್ಗೆ ರನ್ ಗಳಿಸುವುದಕ್ಕಿಂತ ಹೆಚ್ಚಾಗಿ, ಭಾರತೀಯ ಕ್ರಿಕೆಟಿಗನಾಗಿ ಬರುವ ಒತ್ತಡ ಮತ್ತು ಜನಪ್ರಿಯತೆಯನ್ನು ನಿಭಾಯಿಸುವುದು ಕಠಿಣ ಪರೀಕ್ಷೆಯಾಗಿದೆ ಎಂದು ಕರನ್ ನಂಬಿದ್ದಾರೆ.
“ನನಗೆ ಭಾರತದಲ್ಲಿ ಆಡುವ ಉತ್ತಮ ಅನುಭವವಿದೆ, ಆದರೆ ಭಾರತದಲ್ಲಿ ಭಾರತೀಯ ಕ್ರಿಕೆಟಿಗನಾಗಿರುವುದು ಸಂಪೂರ್ಣವಾಗಿ ವಿಭಿನ್ನ ಸವಾಲಾಗಿರಲಿದೆ ಎಂದು ನಾನು ನಂಬುತ್ತೇನೆ. ವೈಭವ್ಗೆ ದೊಡ್ಡ ಸವಾಲೆಂದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಲಕ್ಷಾಂತರ ಅಭಿಮಾನಿಗಳ ಗಮನ, ಮಾಧ್ಯಮ ಒತ್ತಡ ಮತ್ತು ನಿರೀಕ್ಷೆಗಳನ್ನು ಅವರು ಹೇಗೆ ನಿಭಾಯಿಸಬೇಕಿದೆ” ಎಂದು ತಿಳಿಸಿದರು.
ವೈಭವ್ ಅವರ ಸುತ್ತಲಿನ ಅತಿಯಾದ ಪ್ರಚಾರ ಮಾಡಿ ಒತ್ತಡ ಏರಬೇಡಿ ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ. ಒಬ್ಬ ಆಟಗಾರನ ಮೇಲೆ ಇಷ್ಟು ಬೇಗ ಹೆಚ್ಚು ಒತ್ತಡ ಹೇರುವುದು ಅನ್ಯಾಯ. ಅವರು ಕೇವಲ ಒಂದು ಅಥವಾ ಎರಡು ಐಪಿಎಲ್ ಋತುಗಳನ್ನು ಮಾತ್ರ ಆಡಿದ್ದಾರೆ ಮತ್ತು ಅವರು ಭಾರತೀಯ ತಂಡದ ಭಾಗವಾಗಿದ್ದಾರೆ. ಈ ಪ್ರಯಾಣದಲ್ಲಿ ಅವರಿಗೆ ಮಾರ್ಗದರ್ಶನ ನೀಡಲು ಅವರ ಸುತ್ತಲೂ ಒಳ್ಳೆಯ ಜನರಿದ್ದಾರೆ ಎಂದು ನನಗೆ ತಿಳಿದಿದೆ. ಆದರೆ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಾರ್ಪಣೆ ಮಾಡಿ ಅವರು ಆಡುವುದನ್ನು ನೋಡುವವರೆಗೆ ಆಟಗಾರನ ಸಾಮರ್ಥ್ಯವನ್ನು ಅಳೆಯಬಾರದು. ಎಲ್ಲಾ ಕ್ರಿಕೆಟಿಗರಂತೆ, ಅವರ ವೃತ್ತಿಜೀವನದಲ್ಲಿ ಏರಿಳಿತಗಳು ಬರಬಹುದು ಎಂದು ತಿಳಿಸಿದ್ದಾರೆ.
Jul 03, 2026 11:14 PM IST
IND vs ENG: ಇದು ಐಪಿಎಲ್ ಅಲ್ಲ, ಇಂಗ್ಲೆಂಡ್ನಲ್ಲಿ ಆಡುವುದು ಆತನಿಗೆ ಅಷ್ಟು ಸುಲಭವಲ್ಲ! ಭಾರತದ ಆಟಗಾರನ ಬಗ್ಗೆ ಕರ್ರನ್ ಅಚ್ಚರಿ ಹೇಳಿಕೆ













