IND vs AFG: 3ನೇ ಟಿ20ಯಲ್ಲಿ ಟಾಸ್ ಗೆದ್ದ ಅಫ್ಘಾನ್​ ಬೌಲಿಂಗ್ ಆಯ್ಕೆ! ಔಪಚಾರಿಕ ಪಂದ್ಯದಲ್ಲಿ ವೈಭವ್​ಗಿಲ್ಲ ಚಾನ್ಸ್! ಪ್ಲೇಯಿಂಗ್ XI ಹೀಗಿದೆ | ಕ್ರೀಡಾ ಸುದ್ದಿ | ACTPnews

IND vs AFG: 3ನೇ ಟಿ20ಯಲ್ಲಿ ಟಾಸ್ ಗೆದ್ದ ಅಫ್ಘಾನ್​ ಬೌಲಿಂಗ್ ಆಯ್ಕೆ! ಔಪಚಾರಿಕ ಪಂದ್ಯದಲ್ಲಿ ವೈಭವ್​ಗಿಲ್ಲ ಚಾನ್ಸ್! ಪ್ಲೇಯಿಂಗ್ XI ಹೀಗಿದೆ | ಕ್ರೀಡಾ ಸುದ್ದಿ


ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತ ಒಂದು ಬದಲಾವಣೆ ಮಾಡಿಕೊಂಡಿದ್ದರೆ, ಅಫ್ಘಾನಿಸ್ತಾನ 2 ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿದೆ. ಭಾರತದ ಪರ ಅರ್ಷದೀಪ್ ಸಿಂಗ್ ಬದಲಿಗೆ ಯಶ್ ಠಾಕೂರ್ ಕಣಕ್ಕಿಳಿದಿದ್ದಾರೆ.

ಅಫ್ಘಾನಿಸ್ತಾನ ತಂಡದಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದ್ದು, ಅನುಭವಿ ಆಲ್-ರೌಂಡರ್ ಗುಲ್ಬದಿನ್ ನೈಬ್ ಮತ್ತು ಸ್ಪಿನ್ನರ್ ನೂರ್ ಅಹ್ಮದ್ ಈ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಬದಲಿಗೆ ಅಬ್ದುಲ್ಲಾ ಅಹ್ಮದ್‌ಜಾಯ್ ಮತ್ತು ನೂರ್ ಉಲ್ ರಹಮಾನ್ ಅಂತಿಮ ಹನ್ನೊಂದರ ಬಳಗ ಸೇರಿಕೊಂಡಿದ್ದಾರೆ.

ಕ್ಲೀನ್ ಸ್ವೀಪ್ ಗುರಿ

ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತೀಯ ತಂಡವು ಮೂರನೇ ಟಿ20ಐ ಗೆದ್ದು ಅಫ್ಘಾನಿಸ್ತಾನ ವಿರುದ್ಧದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಉದ್ದೇಶದಿಂದ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣವನ್ನು ಪ್ರವೇಶಿಸಿದೆ. ಅತ್ತ, ಅಫ್ಘಾನಿಸ್ತಾನ ಕನಿಷ್ಠ ಅಂತಿಮ ಪಂದ್ಯವನ್ನು ಗೆದ್ದು ಭಾರತಕ್ಕೆ ವಿದಾಯ ಹೇಳುವ ಗುರಿಯನ್ನು ಹೊಂದಿದೆ.  ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾರತ 2-0 ಮುನ್ನಡೆಯಲ್ಲಿದೆ.

ಮ್ಯಾನೇಜ್​ಮೆಂಟ್ ವಿರುದ್ಧ ಫ್ಯಾನ್ಸ್ ಕಿಡಿ

ಸರಣಿಯನ್ನು ಈಗಾಗಲೇ 2-0 ಇಂದ ಗೆದ್ದುಕೊಂಡಿರುವ ಭಾರತ ತಂಡ, ಈ ಕೊನೆಯ ಔಪಚಾರಿಕ ಪಂದ್ಯದಲ್ಲಾದರೂ ಬೆಂಚ್ ಕಾಯುತ್ತಿರುವ ಆಟಗಾರರಿಗೆ ಅವಕಾಶ ನೀಡಬಹುದು ಎಂದು ಅಭಿಮಾನಿಗಳು ಹಾಗೂ ವಿಶ್ಲೇಷಕರು ನಿರೀಕ್ಷಿಸಿದ್ದರು. ಆದರೆ, ನಾಯಕ ಶ್ರೇಯಸ್ ಅಯ್ಯರ್ ಅವರು ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರ ಆರಂಭಿಕ ಜೋಡಿಯನ್ನೇ ಮುಂದುವರಿಸಲು ನಿರ್ಧರಿಸಿದ್ದರಿಂದ ಸೂರ್ಯವಂಶಿ ಅವರಿಗೆ ಮತ್ತೊಮ್ಮೆ ನಿರಾಸೆ ಉಂಟಾಗಿದೆ.

ಮ್ಯಾನೇಜ್​ಮೆಂಟ್ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮ್ಯಾನೇಜ್‌ಮೆಂಟ್ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಮುನ್ನ ಸೂರ್ಯವಂಶಿ ಅವರಿಗೆ ಈ ಸರಣಿಯಲ್ಲಿ ಬ್ಯಾಟಿಂಗ್ ಅಭ್ಯಾಸ ಸಿಗಬೇಕಿತ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ.

ಭಾರತ ಪ್ಲೇಯಿಂಗ್ ಇಲೆವೆನ್

ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಜಸ್‌ಪ್ರಿತ್ ಬುಮ್ರಾ, ಯಶ್ ಠಾಕೂರ್

ಅಫ್ಘಾನಿಸ್ತಾನ ಪ್ಲೇಯಿಂಗ್ ಇಲೆವೆನ್

ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್ (ನಾಯಕ), ಸೆದಿಖುಲ್ಲಾ ಅಟಲ್, ನೂರ್ ಉಲ್ ರಹಮಾನ್, ದರ್ವಿಶ್ ರಸೂಲಿ, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ, ಅಬ್ದುಲ್ಲಾ ಅಹ್ಮದ್‌



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed