IND vs AFG: ಪ್ರಸಿದ್ಧ್ 4 ವಿಕೆಟ್, ರೋಹಿತ್ ಶರ್ಮಾ ಹ್ಯಾಟ್ರಿಕ್! ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಧೂಳೀಪಟ | ಕ್ರೀಡಾ ಸುದ್ದಿ | ACTPnews

ಭಾರತ ತಂಡ


Last Updated:



ಭಾರತ ತಂಡ ಕೊನೆಯ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದೆ. ಉತ್ತಮ ಫಾರ್ಮ್​​ನಲ್ಲಿದ್ದ ಅಫ್ಘಾನ್ ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್ (5), ರಹಮತ್ ಶಾ (5), ಮತ್ತು ಇಬ್ರಾಹಿಂ ಜದ್ರಾನ್ (11) ಮೂವರು ಪ್ರಸಿದ್ಧ್ ಕೃಷ್ಣ ಬೌಲಿಂಗ್​​ನಲ್ಲಿ ಪವರ್​ ಪ್ಲೇ ಮುಗಿಯುವ ಮುನ್ನವೇ ಪೆವಿಲಿಯನ್‌ ಸೇರಿಕೊಂಡರು.

ಭಾರತ ತಂಡ
ಭಾರತ ತಂಡ

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವೆ ನಡೆಯುತ್ತಿರುವ ಕೊನೆಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭದಲ್ಲೇ ಮೇಲುಗೈ ಸಾಧಿಸಿದೆ. ಟಾಸ್​ ಗೆದ್ದು ಬ್ಯಾಟಿಂಗ್ ಮಾಡುತ್ತಿರುವ ಅಫ್ಘಾನ್ ತಂಡ ಪ್ರಸಿದ್ಧ್ ಕೃಷ್ಣ ದಾಳಿಗೆ ತತ್ತರಿಸಿ ಪವರ್​ ಪ್ಲೇನಲ್ಲೇ 4 ವಿಕೆಟ್ ಕಳೆದುಕೊಂಡಿದೆ. ಕೃಷ್ಣ ಪಡೆದ ನಾಲ್ಕು ವಿಕೆಟ್​ಗಳು ಕ್ಯಾಚ್​ ಔಟ್ ಮೂಲಕವೇ ಬಂದವು. ವಿಶೇಷವೆಂದರೆ ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್‌ನಲ್ಲಿ ಹ್ಯಾಟ್ರಿಕ್ ಸಾಧಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಚೆನ್ನೈನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ, ರೋಹಿತ್ ಶರ್ಮಾ ಸತತ ಮೂರು ಕ್ಯಾಚ್‌ಗಳನ್ನು ಪಡೆದರು. ಕೃಷ್ಣ ಬೌಲಿಂಗ್​​ನಲ್ಲಿ ರೋಹಿತ್ ಸತತ ಮೂರು ಕ್ಯಾಚ್​ಗಳನ್ನ ಪಡೆದರು.

ಏಕದಿನದಲ್ಲೇ ಮೊದಲ ನಿದರ್ಶನ

ಭಾರತ ಇದುವರೆಗೂ 1078 ಪಂದ್ಯಗಳನ್ನಾಡಿದ್ದು, ಇದೇ ಮೊದಲ ಬಾರಿಗೆ ಬೌಲರ್​-ಫೀಲ್ಡರ್ ಕಾಂಬಿನೇಷನ್​​​ನಲ್ಲಿ ಮೊದಲ ಮೂರು ವಿಕೆಟ್ ಪಡೆದ ದಾಖಲೆ ನಿರ್ಮಾಣವಾಯಿತು. ಇದಕ್ಕೂ ಮುನ್ನ ಎರಡೂ ಬಾರಿ ಇದೇ ರೀತಿ ಒಬ್ಬ ಬೌಲರ್​ ಹಾಗೂ ಒಬ್ಬ ಫೀಲ್ಡರ್ 3 ವಿಕೆಟ್ ಪಡೆದಿದ್ದರು. 2004ರಲ್ಲಿ ಇರ್ಫಾನ್​ ಪಠಾಣ್ ಬೌಲಿಂಗ್​​​ನಲ್ಲಿ ವಿವಿಎಸ್​ ಲಕ್ಷ್ಮಣ್​,  ​2018ರಲ್ಲಿ ಬುಮ್ರಾ ಬೌಲಿಂಗ್​​ನಲ್ಲಿ ಶಿಖರ್ ಧವನ್  3 ಕ್ಯಾಚ್ ಪಡೆದಿದ್ದರು. ಆದರೆ ಇವರಿಬ್ಬರು ಇಡೀ ಪಂದ್ಯದಲ್ಲಿ 3 ವಿಕೆಟ್ ಪಡೆದಿದ್ದರು.  ಆದರೆ ಇಂದು ಮೊದಲ ಬಾರಿಗೆ ಮೊದಲ ಮೂರು ವಿಕೆಟ್​​ಗಳು ಒಬ್ಬ ಬೌಲರ್-ಫೀಲ್ಡರ್​​ ಸಿಕ್ಕಿದೆ.

ಪವರ್​ ಪ್ಲೇನಲ್ಲೇ 4 ವಿಕೆಟ್

ಉತ್ತಮ ಫಾರ್ಮ್​​ನಲ್ಲಿದ್ದ ಅಫ್ಘಾನ್ ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್ (5), ರಹಮತ್ ಶಾ (5), ಮತ್ತು ಇಬ್ರಾಹಿಂ ಜದ್ರಾನ್ (11) ಮೂವರು ಪ್ರಸಿದ್ಧ್ ಕೃಷ್ಣ ಬೌಲಿಂಗ್​​ನಲ್ಲಿ ಪವರ್​ ಪ್ಲೇ ಮುಗಿಯುವ ಮುನ್ನವೇ ಪೆವಿಲಿಯನ್‌ ಸೇರಿಕೊಂಡರು. 10ನೇ ಓವರ್​​ನಲ್ಲಿ ರಸೂಲಿ ಕೂಡ ಕೃಷ್ಣ ಬೌಲಿಂಗ್​​ನಲ್ಲಿ ಅಯ್ಯರ್​ಗೆ ಕ್ಯಾಚ್ ನೀಡಿದರು. ಮೊದಲ ಪಂದ್ಯದಲ್ಲಿ ವಿಕೆಟ್ ಲೆಸ್ ಆಗಿದ್ದ ಕೃಷ್ಣರನ್ನ 2ನೇ ಪಂದ್ಯದಲ್ಲಿ ಹೊರಗಿಟ್ಟು ಪ್ರಿನ್ಸ್ ಯಾದವ್​ಗೆ ಅವಕಾಶ ನೀಡಲಾಗಿತ್ತು. ಆದರೆ 3ನೇ ಪಂದ್ಯದಲ್ಲಿ ಅವಕಾಶ ಪಡೆದ 5 ಓವರ್​ಗಳಲ್ಲಿ 2 ಮೇಡನ್ ಸಹಿತ 6 ರನ್ ನೀಡಿ 4 ವಿಕೆಟ್ ಪಡೆದಿದ್ದಾರೆ.

ಹ್ಯಾಟ್ರಿಕ್ ಕ್ಯಾಚ್ ಪಡೆದ ರೋಹಿತ್

ಈ ಪಂದ್ಯದಲ್ಲಿ, ಅಫ್ಘಾನಿಸ್ತಾನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು, ಆದರೆ ಪ್ರಸಿದ್ಧ್ ಕೃಷ್ಣ ಅವರಿಗೆ ಆರಂಭಿಕ ಹೊಡೆತ ನೀಡಿದರು. ಎರಡನೇ ಓವರ್‌ನಲ್ಲಿ, ಅವರು ರಹಮಾನುಲ್ಲಾ ಗುರ್ಬಾಜ್ ಅವರನ್ನು ಔಟ್‌ಸ್ವಿಂಗರ್‌ ಮೂಲಕ ಕ್ಯಾಚ್ ನೀಡುವಂತೆ ಮಾಡಿದರು. ಗುರ್ಬಾಜ್ ಡ್ರೈವ್ ಮಾಡಲು ಪ್ರಯತ್ನಿಸಿದಾಗ, ಚೆಂಡು ಎಡ್ಜ್ ಆಗಿ ಮೊದಲ ಸ್ಲಿಪ್‌ನಲ್ಲಿ ಸ್ಥಾನ ಪಡೆದ ರೋಹಿತ್ ಶರ್ಮಾ ಅವರ ಕೈಸೇರಿತು.

ಪ್ರಸಿದ್ಧ್ ಎಸೆದ ಆರನೇ ಓವರ್‌ನ ಕೊನೆಯ ಎಸೆತದಲ್ಲಿ ರಹಮತ್ ಶಾ ಮಿಡ್-ವಿಕೆಟ್ ಕಡೆಗೆ ಫ್ಲಿಕ್ ಶಾಟ್ ಹೊಡೆಯಲು ಪ್ರಯತ್ನಿಸಿದಾಗ, ಚೆಂಡು ಎಡ್ಜ್ ತೆಗೆದುಕೊಂಡು ಗಾಳಿಯಲ್ಲಿ ಹಾರಿತು. ಸ್ಲಿಪ್‌ನಲ್ಲಿ ನಿಂತಿದ್ದ ರೋಹಿತ್ ಎಡಕ್ಕೆ ಸರಿದು ಸುಲಭವಾದ ಕ್ಯಾಚ್ ತೆಗೆದುಕೊಂಡರು. ಪ್ರಸಿದ್ಧ್ ಕೃಷ್ಣ ಎಸೆದ ಎಂಟನೇ ಓವರ್‌ನ ಎರಡನೇ ಎಸೆತದಲ್ಲಿ ಇಬ್ರಾಹಿಂ ಜದ್ರಾನ್ ಕವರ್ ಡ್ರೈವ್ ಮಾಡಲು ಪ್ರಯತ್ನಿಸಿದರು. ಚೆಂಡು ಬ್ಯಾಟ್‌ನಿಂದ ಎಡ್ಜ್ ಆಗಿ ನೇರವಾಗಿ ಮೊದಲ ಸ್ಲಿಪ್‌ನಲ್ಲಿ ನಿಂತಿದ್ದ ರೋಹಿತ್ ಶರ್ಮಾ ಅವರ ಕೈಗೆ ಹಾರಿಹೋಯಿತು.

ರೋಹಿತ್ ಶರ್ಮಾ ಕ್ಯಾಚ್ ತೆಗೆದುಕೊಂಡ ನಂತರ ಹ್ಯಾಟ್ರಿಕ್ ಕ್ಯಾಚ್ ಪಡೆದು ಸಂತೋಷಪಟ್ಟರು. ಈ ಹ್ಯಾಟ್ರಿಕ್ ಕ್ಯಾಚ್‌ಗಳ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅವರ ಮೇಲೆ ಹೊಗಳಿಕೆಯ ಸುರಿಮಳೆಗೈದಿದ್ದಾರೆ.

ಮೂರು ಬದಲಾವಣೆ

ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಮೂರು ಬದಲಾವಣೆಗಳನ್ನು ಮಾಡಿದ್ದರೆ, ಅಫ್ಘಾನಿಸ್ತಾನ್ ನಾಲ್ಕು ಬದಲಾವಣೆಗಳನ್ನು ಮಾಡಿದೆ. ಅರ್ಶ್ದೀಪ್ ಸಿಂಗ್ ಬದಲಿಗೆ ಆಡುವ XI ತಂಡಕ್ಕೆ ಆಯ್ಕೆಯಾದ ಪ್ರಸಿದ್ಧ್ ಕೃಷ್ಣ ಅದ್ಭುತ ಪ್ರದರ್ಶನ ನೀಡಿದರು. ನಿತೀಶ್ ಕುಮಾರ್ ರೆಡ್ಡಿ ಮತ್ತು ಹರ್ಷ್ ದುಬೆ ತಂಡಕ್ಕೆ ಮರಳಿದ್ದಾರೆ. ಆದರೆ ಕುಲದೀಪ್ ಯಾದವ್ ಮತ್ತು ಕೆಎಲ್ ರಾಹುಲ್ ತಂಡದಿಂದ ಹೊರಬಿದ್ದಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed