IND U19 vs AUS U19: ಕಿರಿಯರ ಕ್ರಿಕೆಟ್‌ನಲ್ಲಿ ಸೆಹ್ವಾಗ್-ದ್ರಾವಿಡ್ ಪುತ್ರರ ಅಬ್ಬರ! ಆಸೀಸ್ ವಿರುದ್ಧ ಮಿಂಚಿದ ಆರ್ಯವೀರ್-ಅನ್ವಯ್! | | ACTPnews

ಸೆಹ್ವಾಗ್-ದ್ರಾವಿಡ್ ಪುತ್ರರ ಅಬ್ಬರ!


Last Updated:

ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಪುತ್ರರಾದ ಅನ್ವಯ್ ದ್ರಾವಿಡ್ ಮತ್ತು ಆರ್ಯವೀರ್ ಸೆಹ್ವಾಗ್, ಆಸ್ಟ್ರೇಲಿಯಾ ವಿರುದ್ಧದ ಭಾರತದ ಅಂಡರ್-19 ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು.

ಸೆಹ್ವಾಗ್-ದ್ರಾವಿಡ್ ಪುತ್ರರ ಅಬ್ಬರ!
ಸೆಹ್ವಾಗ್-ದ್ರಾವಿಡ್ ಪುತ್ರರ ಅಬ್ಬರ!

ಭಾರತೀಯ ಕ್ರಿಕೆಟ್‌ನ ದಿಗ್ಗಜರಾದ ವೀರೇಂದ್ರ ಸೆಹ್ವಾಗ್ (Virender Sehwag) ಮತ್ತು ರಾಹುಲ್ ದ್ರಾವಿಡ್ (Rahul Dravid) ಅವರ ಪುತ್ರರು ಕ್ರಿಕೆಟ್ ಅಂಗಳದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾ (Australia) ವಿರುದ್ಧದ ಮೊದಲ ಅಂಡರ್-19 ಯೂತ್ ಏಕದಿನ ಪಂದ್ಯದಲ್ಲಿ ಇಂಡಿಯಾ ‘ಎ’ ಪರ ಕಣಕ್ಕಿಳಿದ ಆರ್ಯವೀರ್ ಸೆಹ್ವಾಗ್ (Aryavir Sehwag), ತಮ್ಮ ತಂದೆಯ ರೀತಿಯಲ್ಲೇ ಬ್ಯಾಟ್ ಬೀಸಿ ಬೌಂಡರಿಗಳ ಸುರಿಮಳೆಗೈದರು, ಆದರೆ ಸಣ್ಣ ತಪ್ಪಿನಿಂದ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ತಮ್ಮ ಮಗನ ಈ ಮೊದಲ ಐತಿಹಾಸಿಕ ಇನ್ನಿಂಗ್ಸ್ ವೀಕ್ಷಿಸಲು ಸ್ವತಃ ವೀರೇಂದ್ರ ಸೆಹ್ವಾಗ್ ಸ್ಟೇಡಿಯಂನಲ್ಲಿ ಉಪಸ್ಥಿತರಿದ್ದರು.

ತಂದೆಯ ಎದುರು ‘ವೀರೂ ಸ್ಟೈಲ್’ ಬ್ಯಾಟಿಂಗ್

ಆರ್ಯವೀರ್ ತಮ್ಮ ಇನ್ನಿಂಗ್ಸ್‌ನ 5ನೇ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸುವ ಮೂಲಕ ಖಾತೆ ತೆರೆದರು. ಇದರ ಬಳಿಕ 2 ಮತ್ತು 3ನೇ ಓವರ್‌ನಲ್ಲೂ ಅತ್ಯುತ್ತಮ ಬೌಂಡರಿಗಳನ್ನು ಗಳಿಸಿದರು. 5ನೇ ಓವರ್‌ನಲ್ಲಿ ಆಸ್ಟ್ರೇಲಿಯಾದ ಲೆಗ್-ಬ್ರೇಕ್ ಬೌಲರ್ ಸ್ಪೆನ್ಸರ್ ಗ್ರೀನ್ ಬೌಲಿಂಗ್‌ನಲ್ಲಿ ಅವರು ಅತ್ಯಾಕರ್ಷಕ ಬೌಂಡರಿ ಬಾರಿಸಿದರು.

ಆದರೆ, ಅದೇ ಓವರ್‌ನಲ್ಲಿ ಬಿಗ್​ ಶಾಟ್ ಹೊಡೆಯುವ ಪ್ರಯತ್ನದಲ್ಲಿ ಎಡವಿದ ಆರ್ಯವೀರ್ ಸೆಹ್ವಾಗ್, ಸ್ಪೆನ್ಸರ್ ಗ್ರೀನ್‌ಗೆ ವಿಕೆಟ್ ಒಪ್ಪಿಸಿದರು. ಔಟ್ ಆಗುವ ಮೊದಲು ಆರ್ಯವೀರ್ 26 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 28 ರನ್‌ಗಳ ವೇಗದ ಇನ್ನಿಂಗ್ಸ್ ಆಡಿದರು.
ಅನ್ವಯ್ ದ್ರಾವಿಡ್ ಅವರ ಸ್ಫೋಟಕ ಆಟ

ಮಳೆಯಿಂದಾಗಿ ಈ ಮೊದಲ ಏಕದಿನ ಪಂದ್ಯವನ್ನು ತಲಾ 20 ಓವರ್‌ಗಳಿಗೆ ಕಡಿತಗೊಳಿಸಲಾಗಿತ್ತು. ಆರ್ಯವೀರ್ ಔಟ್ ಆದ ಬಳಿಕ ನಾಯಕ ಲಕ್ಷ್ಯ ರೈಚಂದಾನಿ 15 ರನ್, ಕುಶಾ ಹಾಗ್ ಓಜಾ 16 ರನ್‌ಗಳಿಗೆ ಔಟ್ ಆದರು. ನಂತರ ಅರ್ಜುನ್ ರಜಪೂತ್ ಕೂಡ 15 ರನ್‌ಗಳ ಆಟವಾಡಿದರು. ಸಾಲು ಸಾಲಾಗಿ ವಿಕೆಟ್‌ಗಳು ಬೀಳುತ್ತಿದ್ದ ಸಮಯದಲ್ಲಿ ಯಶವರ್ಧನ್ ಚೌಹಾಣ್ ಮತ್ತು ಭಾರತದ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ತಂಡದ ಇನ್ನಿಂಗ್ಸ್ ಅನ್ನು ಕಟ್ಟಿದ್ದರು.

ಈ ಇಬ್ಬರೂ ಆಟಗಾರರು ವೇಗದ ಜೊತೆಯಾಟದ ಮೂಲಕ ತಂಡಕ್ಕೆ ಆಸರೆಯಾದರು. ಸಾಮಾನ್ಯವಾಗಿ ಡಿಫೆನ್ಸಿವ್ ಆಟಕ್ಕೆ ಹೆಸರುವಾಸಿಯಾದ ರಾಹುಲ್ ದ್ರಾವಿಡ್ ಅವರ ಮಗ ಅನ್ವಯ್, ಈ ಬಾರಿ ಮೈದಾನದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಅನ್ವಯ್ ಕೇವಲ 18 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್‌ಗಳು ಮತ್ತು 2 ಬೌಂಡರಿಗಳ ಸಹಿತ ಅಜೇಯ 38 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ದಿಗ್ಗಜ ಆಟಗಾರರಾದ ಸೆಹ್ವಾಗ್ ಮತ್ತು ದ್ರಾವಿಡ್ ಅವರ ಮಕ್ಕಳು ಒಂದೇ ಪಂದ್ಯದಲ್ಲಿ ಇಂತಹ ಸ್ಫೋಟಕ ಪ್ರದರ್ಶನ ನೀಡಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed