IND A vs SL A: ವೈಭವ್ ಸೂರ್ಯವಂಶಿ ವಿರುದ್ಧ ಐಸಿಸಿ ಕ್ರಮ? ಬ್ಯಾನ್ ಆಗ್ತಾರಾ ಯುವ ಆಟಗಾರ? | ಕ್ರೀಡಾ ಸುದ್ದಿ | ACTPnews

ಶ್ರೀಲಂಕಾ ಭಾರತ ಆಟಗಾರರ ನಡುವಿನ ವಾಗ್ವಾದದ ದೃಶ್ಯ (Image Source X)


Last Updated:

ಐಸಿಸಿ ವೈಭವ್ ಸೂರ್ಯವಂಶಿ ಮೇಲೆ ಶಿಸ್ತು ಕ್ರಮದ ಸಾಧ್ಯತೆ, ಶ್ರೀಲಂಕಾ ವಿರುದ್ಧದ ತ್ರಿಕೋನ ಏಕದಿನದಲ್ಲಿ ವಾಗ್ವಾದ, ಜಗಳ, ಐಸಿಸಿ ಕೋಡ್ ಉಲ್ಲಂಘನೆ, ದಂಡ ಅಥವಾ ಡಿಮೆರಿಟ್ ಅಂಕ ನೀಡುವ ಸಾಧ್ಯತೆ ಇದೆ.

ಶ್ರೀಲಂಕಾ ಭಾರತ ಆಟಗಾರರ ನಡುವಿನ ವಾಗ್ವಾದದ ದೃಶ್ಯ (Image Source X)
ಶ್ರೀಲಂಕಾ ಭಾರತ ಆಟಗಾರರ ನಡುವಿನ ವಾಗ್ವಾದದ ದೃಶ್ಯ (Image Source X)

ಟೀಂ ಇಂಡಿಯಾ (Team India A) ಯುವ ಆಟಗಾರ ವೈಭವ್ ಸೂರ್ಯವಂಶಿ (Vaibhav Suryavanshi) ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) (ICC) ಕಠಿಣ ಕ್ರಮಕೈಗೊಳ್ಳುವ ಸಾಧ್ಯತೆ ಇದೆ. ತ್ರಿಕೋನ ಏಕದಿನ ಟೂರ್ನಿಯ ಭಾಗವಾಗಿ ಶ್ರೀಲಂಕಾ (Sri Lanka A) ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ವೈಭವ್ ತಾಳ್ಮೆ ಕಳೆದುಕೊಂಡಿದ್ದರು.

ವಿರೋಚಿತವಾಗಿ ನಡೆದ ಈ ಪಂದ್ಯದಲ್ಲಿ ಭಾರತ ಎ ತಂಡ ಸೂಪರ್ ಓವರ್ ನಲ್ಲಿ ಸೋಲುಂಡಿತ್ತು. ಸೂಪರ್ ಓವರ್ ಮುಕ್ತಾಯವಾದ ಬಳಿಕ ಆಟಗಾರರು ಹೊರ ನಡೆಯುವ ಸಂದರ್ಭದಲ್ಲಿ ಸೂರ್ಯವಂಶಿ ಅವರನ್ನು ಶ್ರೀಲಂಕಾ ಆಟಗಾರರು ಕೆಣಕಿದ್ದರು. ಇದರೊಂದಿಗೆ ತಾಳ್ಮೆ ಕಳೆದುಕೊಂಡ ಆಟಗಾರ, ಶ್ರೀಲಂಕಾ ಆಟಗಾರರ ವಿರುದ್ಧ ಮುಗಿಬಿದಿದ್ದರು. ಒಂದು ಹಂತದಲ್ಲಿ ಈ ಜಗಳ ಕೈ ಕೈ ಮೀಲಾಯಿಸುವ ಹಂತಕ್ಕೆ ಸಾಗಿತ್ತು. ಆ ಕೂಡಲೇ ಎಚ್ಚೆತ್ತುಕೊಂಡ ಶ್ರೀಲಂಕಾ ವಿಕೆಟ್ ಕೀಪರ್ ಇಬ್ಬರನ್ನು ದೂರ ತಳ್ಳಿ ಸಮಾಧಾನ ಮಾಡುವ ಕೆಲಸ ಮಾಡಿದ್ದರು.

ಇದಕ್ಕೂ ಮುನ್ನ ನೋ ಬಾಲ್ ವಿಚಾರದಲ್ಲಿ ನಾಯಕ ತಿಲಕ್ ವರ್ಮಾ ಅಂಪೈರ್ ರೊಂದಿಗೆ ಚರ್ಚೆ ನಡೆಸಿದ್ದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ್ದ ಸೂರ್ಯವಂಶಿ, ಅಂಪೈರ್ ರೊಂದಿಗೆ ಮಾತನಾಡಿದ್ದರು. ಈ ಬಳಿಕ ಕೋಚ್ ಅವರನ್ನು ಅಲ್ಲಿಂದ ಕರೆ ತಂದಿದ್ದರು.

ಮೈದಾನದಲ್ಲಿ ಆಟಗಾರರು, ಅಂಪೈರ್ ಗಳೊಂದಿಗೆ ವಾಗ್ವಾದ ನಡೆಸುವುದು ಐಸಿಸಿ ಕೋಡ್ ಆಫ್ ಕಂಡಕ್ಟ್ ಆರ್ಟಿಕಲ್ 2.12ರ ಉಲ್ಲಂಘಟನೆ ಆಗುತ್ತದೆ. ಒಂದೊಮ್ಮೆ ಮ್ಯಾಚ್ ರೆಫರಿ ವೈಭವ್ ಅವರದ್ದು ತಪ್ಪು ಎಂದು ನಿರ್ಧಾರ ಮಾಡಿದರೆ ಪಂದ್ಯದ ಶುಲ್ಕದಲ್ಲಿ ಶೇಕಡಾ 50ರಷ್ಟು ದಂಡ ವಿಧಿಸಬಹುದು. ಅಲ್ಲದೇ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದರೆ 1 ಅಥವಾ 2 ಡಿಮೆರಿಟ್ ಅಂಕ ನೀಡಹುದು. ಇಲ್ಲ ಇದು ಸಾಮಾನ್ಯ ಘಟನೆಯಂತೆ ಅಂತ ತೆಗೆದುಕೊಂಡರೆ ಎಚ್ಚರಿಕೆ ನೀಡಿ ಕೈಬಿಡುವ ಸಾಧ್ಯತೆ ಇರುತ್ತದೆ.

ಶೀಘ್ರವೇ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡುವ ನಿರೀಕ್ಷೆಯಲ್ಲಿರುವ ವೈಭವ್ ಅವರಿಗೆ ಸೂರ್ಯವಂಶಿ ಅವರಿಗೆ ಇದು ದೊಡ್ಡ ಎಚ್ಚರಿಕೆ ಎಂದು ಹೇಳಬಹುದು. 15 ವರ್ಷ ವಯಸ್ಸಿನಲ್ಲಿಯೇ ಈ ರೀತಿ ಸಹನೆ ಕಳೆದುಕೊಂಡು ಆಟಗಾರರೊಂದಿಗೆ ವಾಗ್ವಾದ ನಡೆಸುವುದು ಸರಿಯಲ್ಲ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಆರ್ ಅಶ್ವಿನ್ ಅವರಂತಹ ಹಿರಿಯ ಆಟಗಾರರು ಮೊದಲು ಶ್ರೀಲಂಕಾ ಆಟಗಾರರೇ ಅಸಭ್ಯವಾಗಿ ವರ್ತಿಸಿದ್ದರೆ, ಇದು ವಿಡಿಯೋದಲ್ಲಿ ಕಾಣಬಹುದು. ಅವರಿಗೆ ವೈಭವ್ ತಕ್ಕ ಉತ್ತರ ನೀಡಿದ್ದಾರೆ ಅಷ್ಟೇ ಎಂದು ಬೆಂಬಲ ಸೂಚಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed