IND A vs SL A: ವೈಭವ್ ಆರ್ಭಟ, ಮಿಂಚಿದ ಬೌಲರ್ಸ್! ಶ್ರೀಲಂಕಾ ಮಣಿಸಿ ತ್ರಿಕೋನ ಸರಣಿ ಗೆದ್ದ ಭಾರತ ತಂಡ | ಕ್ರೀಡಾ ಸುದ್ದಿ | ACTPnews

IND A vs SL A: ವೈಭವ್ ಆರ್ಭಟ, ಮಿಂಚಿದ ಬೌಲರ್ಸ್! ಶ್ರೀಲಂಕಾ ಮಣಿಸಿ ತ್ರಿಕೋನ ಸರಣಿ ಗೆದ್ದ ಭಾರತ ತಂಡ | ಕ್ರೀಡಾ ಸುದ್ದಿ


378 ರನ್​ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಇನ್​ಫಾರ್ಮ್​ ಬ್ಯಾಟರ್​ಗಳಾದ ಆವಿಷ್ಕಾ ಫರ್ನಾಂಡೊ ಕೇವಲ 3 ರನ್​ಗಳಿಸಿ ಯಶ್ ಠಾಕೂರ್​ ಬೌಲಿಂಗ್​​ನಲ್ಲಿ ಗಾಯಕ್ವಾಡ್​​ಗೆ ಕ್ಯಾಚ್ ನೀಡಿ ಔಟ್ ಆದರು. ಮತ್ತೊಬ್ಬ ಓಪನರ್ ನಿರೋಷನ್ ಡಿಕ್ವೆಲ್ಲಾ 17 ಎಸೆತಗಳಲ್ಲಿ 21 ರನ್​ಗಳಿಸಿ ಠಾಕೂರ್​ಗೆ 2ನೇ ಬಲಿಯಾದರು. 3ನೇ ಕ್ರಮಾಂಕದಲ್ಲಿ ಬಂದ ನುವಾನಿಡು ಫರ್ನಾಂಡೊ 21 ಎಸೆತಗಳಲ್ಲಿ 21 ರನ್​​ಗಳಿಸಿ ಪವರ್​ ಪ್ಲೇ ಮುಗಿಯುವುದರೊಳಗೆ ಪೆವಿಲಿಯನ್ ಸೇರಿಕೊಂಡರು.

ಈ ಹಂತದಲ್ಲಿ ಒಂದಾದ ಸದೀರ ಸಮರವಿಕ್ರಮ ಹಾಗೂ ನಾಯಕ ಸಹನ್ ಅಚಾನಗೆ 4ನೇ ವಿಕೆಟ್​​ಗೆ 53 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. ಸಮರವಿಕ್ರಮ 44 ಎಸೆತಗಳಲ್ಲಿ 9 ಬೌಂಡರಿ 52 ರನ್​ಗಳಿಸಿ ಅಶೋಕ್ ಶರ್ಮಾಗೆ ವಿಕೆಟ್ ಒಪ್ಪಿಸಿದರೆ, ಅಚಾನಗೆ 40 ಎಸೆತಗಳಲ್ಲಿ 38 ರನ್​ಗಳಿಸಿ ತಿಲಕ್ ವರ್ಮಾ ಬೌಲಿಂಗ್​​ನಲ್ಲಿ ಔಟ್ ಆದರು. ರವಿಂದು ಫರ್ನಾಂಡೊ 19 ರನ್​ಗಳಿಸಿ ವಿಪ್ರಜ್​ಗೆ 2ನೇ ಬಲಿಯಾದರು.

ಶ್ರೀಲಂಕಾ ತಂಡ 177ಕ್ಕೆ 6 ವಿಕೆಟ್ ಕಳೆದುಕೊಂಡು ಹೀನಾಯವಾಗಿ ಸೋಲಬಹುದು ಎನ್ನುವ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ವನುಜಾ ಸಹನ್ ಹಾಗೂ ವಿಜಯಕಾಂತ್​​ 7ನೇ ವಿಕೆಟ್​​ಗೆ 77 ರನ್​ ಸೇರಿಸಿ ತಂಡದ ಮೊತ್ತವನ್ನ 250ರ ಗಡಿ ದಾಟಿಸಿದರು. ಈ ಜೋಡಿಯನ್ನ ವಿಪ್ರಜ್​ ಮುರಿದರು. ವನುಜಾ ಸಹನ್ 69 ಎಸೆತಗಳಲ್ಲಿ 66 ರನ್​ಗಳಿಸಿ ಔಟ್ ಆದರು. ನಂತರ ಬಂದವರು ಹೆಚ್ಚು ಸಮಯ ನಿಲ್ಲಲಿಲ್ಲ. ವಿಜಯ್ ಕಾಂತ್ 39ಕ್ಕೆ ಔಟ್ ಆದರೆ, ಶಿರಾಜ್ 21, ದುಲಜ್ ಸಮುದಿತಾ 15 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಭಾರತದ ಪರ ಯಶ್ ಠಾಕೂರ್ 3, ವಿಪ್ರಜ್ ನಿಗಮ್ 3, ಅನುಕುಲ್ ರಾಯ್ 2, ಅಶೋಕ್ ಶರ್ಮಾ ಹಾಗೂ ತಿಲಕ್ ವರ್ಮಾ ತಲಾ 1 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.

ಟಾಸ್​ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತದ ಪರ ವೈಭವ್ ಸೂರ್ಯವಂಶಿ ಮತ್ತು ಪ್ರಿಯಾಂಶ ಆರ್ಯ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದರು. ಈ ಜೋಡಿ ಮೊದಲ ವಿಕೆಟ್‌ಗೆ 132 ರನ್ ಸೇರಿಸಿತು. ಟಿ20ಯಂತೆ ಬ್ಯಾಟಿಂಗ್ ಮಾಡಿದ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 94 ರನ್ ಗಳಿಸಿ ಕೇವಲ 6 ರನ್​ಗಳಿಂದ ಶತಕ ಮಿಸ್ ಮಾಡಿಕೊಂಡರು. ಅವರ ಇನ್ನಿಂಗ್ಸ್​​ನಲ್ಲಿ 10 ಬೌಂಡರಿ ಮತ್ತು 8 ಸಿಕ್ಸರ್‌ಗಳಿದ್ದವು. ವೈಭವ್ ಮೊಹಮ್ಮದ್ ಶಿರಾಜ್​ ಎಸೆದ 3ನೇ ಓವರ್​​​ನಲ್ಲೇ 26 ರನ್ ಗಳಿಸಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ತಲುಪುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದರು.

ಇವರಿಗೆ ಸಾಥ್ ಕೊಟ್ಟ ಪ್ರಿಯಾಂಶ್ 29 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್​ ಸಹಿತ 39 ರನ್​ಗಳಿಸಿ ಔಟ್ ಆದರು. ಇವರಿಬ್ಬರ ವಿಕೆಟ್ ಪತನದ ನಂತರ ಭಾರತದ ರನ್​ಗತಿಗೆ ಕಡಿವಾಣ ಬಿದ್ದಿತು. ಉಪನಾಯಕ ರುತುರಾಜ್ ಗಾಯಕ್ವಾಡ್ ಹಾಗೂ ತಿಲಕ್ ವರ್ಮಾ 3ನೇ ವಿಕೆಟ್ ಜೊತೆಯಾಟದಲ್ಲಿ 106 ಎಸೆತಗಳನ್ನಾಡಿ 84 ರನ್​ ಸೇರಿಸಿದರು. ಗಾಯಕ್ವಾಡ್ 51 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 40 ರನ್​ಗಳಿಸಿ ಔಟ್ ಆದರು. ನಂತರ ತಿಲಕ್ ವರ್ಮಾ ಹಾಗೂ ಕುಮಾರ್ ಕುಶಾಗ್ರ 4ನೇ ವಿಕೆಟ್​​ಗೆ 63 ರನ್​ ಸೇರಿಸಿದರು. ಕುಶಾಗ್ರ 39 ಎಸೆತಗಳಲ್ಲಿ 36 ರನ್​ಗಳಿಸಿ ಔಟ್ ಆದರು.

ತಿಲಕ್ ವರ್ಮಾ 90 ಎಸೆತಗಳನ್ನಾಡಿ 4 ಬೌಂಡರಿ, 1 ಸಿಕ್ಸರ್ ಸಹಿತ 67 ರನ್​ಗಳಿಸಿ ಕುಶಾಗ್ರ ಔಟ್ ಆದ ಮುಂದಿನ ಓವರ್​​ನಲ್ಲೇ ಔಟ್ ಆದರು. ಆ ನಂತರ ಭಾರತ ತಂಡದಿಂದ ದೊಡ್ಡ ಜೊತೆಯಾಟ ಬರಲಿಲ್ಲ. ಬಂದ ಬ್ಯಾಟರ್​​ಗಳೆಲ್ಲಾ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಸೂರ್ಯಾಂಶ್ ಶೆಡ್ಗೆ 2, ನಿಶಾಂತ್ ಸಿಂಧು 16, ವಿಪ್ರಜ್ ನಿಗಮ್ 27, ಅನುಕುಲ್ ರಾಯ್ ಹಾಗೂ ಯಶ್ ಠಾಕೂರ್ ರನ್​ಗಳಿಸಿದರು.

ಶ್ರೀಲಂಕಾ ಎ ಪರ ರವಿಂದು ಫರ್ನಾಂಡೊ 72ಕ್ಕೆ 2, ವನುಜಾ ಸಹಾನ್ 39ಕ್ಕೆ 2, ಕುಗುದಾಸ್ ಮಾತುಲನ್ 58ಕ್ಕೆ 1, ದುಲಜ್ ಸಮುದಿತಾ 41ಕ್ಕೆ 1, ಸಹಾನ್ ಅರಾಚಿಗೆ 35ಕ್ಕೆ 1, ಮೊಹಮ್ಮದ್ ಶಿರಾಜ್ 56ಕ್ಕೆ 1 ವಿಕೆಟ್ ಪಡೆದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed