Idukku Pillaiyar Temple: ಪ್ರಸಿದ್ಧ ದೇವಾಲಯದಲ್ಲಿ ದುರಂತ, ಗುಹೆಯಲ್ಲಿ ಸಿಲುಕಿ ಓರ್ವ ಭಕ್ತ ಸಾವು! ಮಹಿಳೆ ಒದ್ದಾಟ / Idukku Pillaiyar Temple Tragedy: Devotee Dies | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಪ್ರಸಿದ್ಧ ದೇವಾಲಯದಲ್ಲಿ ದುರಂತ


Last Updated:

ತಿರುವಣ್ಣಾಮಲೈ ಬಳಿ ಇರುವ ಇಡುಕ್ಕು ಪಿಳ್ಳೈಯರ್ ದೇವಸ್ಥಾನದಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ. ಮೊನ್ನೆಯಷ್ಟೇ ದೇವಸ್ಥಾನದ ಗುಹಾ ಮಾರ್ಗದಲ್ಲಿ ಸಿಲುಕಿಕೊಂಡು ಓರ್ವ ವ್ಯಕ್ತಿ ಸಾವನಪ್ಪಿದ್ದ. ಇದೀಗ ಮತ್ತೊಬ್ಬ ಮಹಿಳೆ ಸಿಲುಕಿಕೊಂಡು ದುರಂತ ಸಂಭವಿಸಿದೆ.

ಪ್ರಸಿದ್ಧ ದೇವಾಲಯದಲ್ಲಿ ದುರಂತ
ಪ್ರಸಿದ್ಧ ದೇವಾಲಯದಲ್ಲಿ ದುರಂತ

ತಿರುವಣ್ಣಾಮಲೈ: ಗಿರಿವಲಂ ಮಾರ್ಗದಲ್ಲಿರುವ ಪ್ರಸಿದ್ಧ ಇಡುಕ್ಕು ಪಿಳ್ಳೈಯರ್ ದೇವಾಲಯದಲ್ಲಿ (Idukku Pillaiyar Temple) ಭಕ್ತರು ಆತಂಕ ಪಡುವಂತಹ ಆಘಾತಕಾರಿ ಘಟನೆ ನಡೆದಿದೆ. ಮೊನ್ನೆಯಷ್ಟೇ ದೇವಸ್ಥಾನದ (Temple) ಗುಹಾ ಮಾರ್ಗದಲ್ಲಿ ಸಿಲುಕಿಕೊಂಡು ಓರ್ವ ವ್ಯಕ್ತಿ ಸಾವನಪ್ಪಿದ್ದ. ಇದೀಗ ಅಂಥದ್ದೇ ಮತ್ತೊಂದು ದುರಂಗ ಘಟನೆ ಸಂಭವಿಸಿದೆ. ಸಣ್ಣ ಗುಹಾ ಮಾರ್ಗದಲ್ಲಿ ಸಿಲುಕಿಕೊಂಡು ಆಂಧ್ರಪ್ರದೇಶದ ಯುವಕನೊಬ್ಬ ಉಸಿರುಗಟ್ಟಿ ದುರಂತ ಸಾವನ್ನಪ್ಪಿದ್ದ ಬೆನ್ನಲ್ಲೇ ಮತ್ತೊಬ್ಬ ಮಹಿಳೆ ಸಿಲುಕಿಕೊಂಡಿದ್ದಾಳೆ.

ಇಡುಕ್ಕು ಪಿಳ್ಳೈಯರ್ ದೇವಾಲಯದಲ್ಲಿ ನಡೆದ ಈ ಘಟನೆ ಭಕ್ತರಲ್ಲಿ ಆಘಾತ ಮತ್ತು ಭಯ ಉಂಟುಮಾಡಿದೆ. ದೇವಸ್ಥಾನಕ್ಕೆ ಬಂದ ಭಕ್ತರು ಹೀಗೆ ದುರಂತ ಸಾವನಪ್ಪುತ್ತಿರುವುದು ಆತಂಕವನ್ನು ಉಂಟುಮಾಡಿದೆ.

ದೇವಸ್ಥಾನದ ಗುಹೆಯಲ್ಲಿ ಸಿಲುಕಿ ಭಕ್ತ ಸಾವು

ಎರಡು ದಿನದ ಹಿಂದೆ ಮಧ್ಯರಾತ್ರಿ ಆಂಧ್ರಪ್ರದೇಶದ ಮಣಿಕುಮಾರ್ (36) ಅವರು ತನ್ನ ಕುಟುಂಬದೊಂದಿಗೆ ಗಿರಿವಲಂಗೆ ಬಂದಿದ್ದರು. ಇಡುಕ್ಕು ಪಿಳ್ಳೈಯರ್ ದೇವಾಲಯಕ್ಕೆ ಬಂದ ಅವರು ಗುಹೆಯಂತಹ ಸಣ್ಣ ಮಾರ್ಗದ ಮೂಲಕ ದೇವರ ದರ್ಶನ ಪಡೆಯಲು ಪ್ರಯತ್ನಿಸಿದ್ದರು. ಈ ಗುಹೆ ಮೂಲಕ ದರ್ಶನ ಪಡೆದರೆ ಸಕಲ ಐಶ್ವರ್ಯ ಸಿಗುತ್ತೆ ಎಂಬ ನಂಬಿಕೆ ಇದೆ. ಈ ದೇವಾಲಯ 3 ಪ್ರವೇಶ ದ್ವಾರಗಳನ್ನು ಹೊಂದಿದ್ದು, ಹಿಂಭಾಗದ ದ್ವಾರದಿಂದ ಮಲಗಿ ಪ್ರವೇಶಿಸಿ ಮುಂಭಾಗದ ದ್ವಾರದಿಂದ ಹೊರಬರಬೇಕು. ಆದರೆ ಮಣಿಕುಮಾರ್ ಗುಹೆಯಲ್ಲಿ ಸಿಲುಕಿಕೊಂಡು ಉಸಿರಾಟದ ತೊಂದರೆ ಅನುಭವಿಸಿದರು.

ಈ ವೇಳೆ ಅಲ್ಲಿ ನೆರೆದಿದ್ದ ಇತರೆ ಭಕ್ತರು ಅವರನ್ನು ಹೊರಗೆ ತರಲು ಹೆಣಗಾಡಿದರು. ಕೆಲ ಹೊತ್ತಿನ ನಂತರ 108 ಆಂಬ್ಯುಲೆನ್ಸ್ ಮೂಲಕ ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಆದರೆ ವೈದ್ಯರು ಅಷ್ಟರಲ್ಲಿ ಆಗಲೇ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಮಹಿಳೆ ಸಿಲುಕಿ ಒದ್ದಾಟ

ಈ ದುರಂತ ಮಾಸುವ ಬೆನ್ನಲ್ಲೇ ನಿನ್ನೆ ಆಂಧ್ರಪ್ರದೇಶದ ಮಹಿಳಾ ಭಕ್ತೆಯೊಬ್ಬರು ಅದೇ ಗುಹೆಯಲ್ಲಿ ಸಿಕ್ಕಿಹಾಕಿಕೊಂಡರು. ಅವರ ಬೊಜ್ಜಿನಿಂದ ಕಿರಿದಾದ ಮಾರ್ಗದಲ್ಲಿ ಸಿಲುಕಿಕೊಂಡಿದ್ದು, ಅಲ್ಲಿದ್ದ ಜನರು ಅವರ ಕೈ ಹಿಡಿದು ಹೊರಗೆ ಎಳೆದು ರಕ್ಷಿಸಿದ್ದಾರೆ. ಈ ಘಟನೆಯು ಭಾರಿ ಸಂಚಲನ ಮೂಡಿಸಿದೆ.

ದೇವಾಲಯದ ವಿಶೇಷತೆ ಏನು?

ಇಡುಕ್ಕು ಪಿಳ್ಳೈಯರ್ ದೇವಾಲಯ ತಿರುವಣ್ಣಾಮಲೈ ಗಿರಿವಲಂ ಮಾರ್ಗದಲ್ಲಿದೆ. ಇಲ್ಲಿ ಭಕ್ತರು ಮಲಗಿ ಗುಹೆಯ ಮಾರ್ಗದಲ್ಲಿ ಪ್ರವೇಶಿಸಿ ದೇವರ ದರ್ಶನ ಪಡೆಯುತ್ತಾರೆ. ಹೊರಬಂದ ತಕ್ಷಣ ನಂದಿ ದರ್ಶನವಾಗುತ್ತದೆ. ಈ ವಿಶೇಷ ಮಾರ್ಗ ಭಕ್ತರಲ್ಲಿ ಜನಪ್ರಿಯವಾಗಿದೆ. ಆದರೆ ಕಿರಿದಾದ ಮಾರ್ಗದಿಂದಾಗಿ ಈ ರೀತಿಯ ಅಪಾಯಗಳು ಉಂಟಾಗುತ್ತಿವೆ.

ಈ ಎರಡು ಘಟನೆ ಗಿರಿವಲಂ ಮಾರ್ಗದಲ್ಲಿ ಸುರಕ್ಷತಾ ಕ್ರಮಗಳ ಅಗತ್ಯವನ್ನು ಎತ್ತಿ ತೋರಿಸುತ್ತಿವೆ. ದೇವಾಲಯ ಅಧಿಕಾರಿಗಳು ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ದೇವಾಲಯ ಪ್ರವೇಶ ಮಾರ್ಗಗಳನ್ನು ಹೆಚ್ಚು ಸುರಕ್ಷಿತಗೊಳಿಸಬೇಕು. ವೃದ್ಧರು, ಮಹಿಳೆಯರು ಮತ್ತು ದಪ್ಪ ದೇಹದವರು ಈ ಮಾರ್ಗವನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು ಎಂಬ ಬೇಡಿಕೆ ಹೆಚ್ಚಾಗಿದೆ.

ಈ ಘಟನೆಯು ಭಕ್ತರಲ್ಲಿ ಆಘಾತ ಮೂಡಿಸಿದೆ. ಗಿರಿವಲಂ ಮಾರ್ಗದಲ್ಲಿ ಇಂತಹ ದುರಂತಗಳು ಪುನರಾವರ್ತನೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ದೇವಾಲಯಕ್ಕೆ ಬರುವ ಭಕ್ತರು ಸುರಕ್ಷತೆಯ ಬಗ್ಗೆ ಎಚ್ಚರಿಕೆಯಿಂದಿರಬೇಕು. ತಿರುವಣ್ಣಾಮಲೈ ಜಿಲ್ಲಾ ಆಡಳಿತ ಮತ್ತು ದೇವಾಲಯ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಭಕ್ತರ ಸುರಕ್ಷತೆಗೆ ಹೆಚ್ಚು ಗಮನ ನೀಡುವಂತೆ ಸೂಚಿಸಲಾಗಿದೆ. ಈ ದುರಂತಗಳು ಧಾರ್ಮಿಕ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed