Last Updated:
ವ್ಯಕ್ತಿಯೊಬ್ಬ ತನ್ನ ಪತ್ನಿಯ ಕಿರುಕುಳದಿಂದ ನೊಂದು ದಯಾಮರಣಕ್ಕೆ (euthanasia) ಮನವಿ ಮಾಡಿದ್ದಾನೆ. ತನಗೆ ದಯಾಮರಣ ನೀಡಬೇಕು ಅಂತ ಜಿಲ್ಲಾಧಿಕಾರಿಗೆ ಮನವಿ ಪತ್ರ ಬರೆದಿದ್ದಾನೆ. ನನ್ನ ಪತ್ನಿ (Wife) ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ನಾನು ಪೊಲೀಸರಿಗೆ (Police) ಅನೇಕ ಸಲ ದೂರು ನೀಡಿದ್ದೇನೆ ಎಂದಿದ್ದಾರೆ.
ಗುಜರಾತ್: ಸೂರತ್ನ (Surat) ವ್ಯಕ್ತಿಯೊಬ್ಬ ತನ್ನ ಪತ್ನಿಯ ಕಿರುಕುಳದಿಂದ ನೊಂದು ದಯಾಮರಣಕ್ಕೆ (euthanasia) ಮನವಿ ಮಾಡಿದ್ದಾನೆ. ತನಗೆ ದಯಾಮರಣ ನೀಡಬೇಕು ಅಂತ ಜಿಲ್ಲಾಧಿಕಾರಿಗೆ ಮನವಿ ಪತ್ರ ಬರೆದಿದ್ದಾನೆ. ನನ್ನ ಪತ್ನಿ (Wife) ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ನಾನು ಪೊಲೀಸರಿಗೆ (Police) ಅನೇಕ ಸಲ ದೂರು ನೀಡಿದ್ದೇನೆ. ಆದರೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ನನಗೆ ದಯಾಮರಣಕ್ಕೆ ಅವಕಾಶ ನೀಡಬೇಕು ಅಂತ ಪತ್ರದಲ್ಲಿ ನೊಂದ ಪತಿ (Husband) ಮನವಿ ಮಾಡಿದ್ದಾನೆ.
ಸೂರತ್ನ ನಿವಾಸಿ ಕಿರಿತ್ ಪಟೇಲ್ ಎಂಬುವರೇ ನೊಂದ ಪತಿ. ಇವರು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದು, ದೀರ್ಘಕಾಲದ ಕಾನೂನು ವಿವಾದಗಳು ಮತ್ತು ವೈಯಕ್ತಿಕ ಸಂಕಷ್ಟಗಳಿಂದ ಬಳಲಿದ್ದೇನೆ. ಹೀಗಾಗಿ ನಾನು ನನ್ನ ಜೀವನವನ್ನು ಕೊನೆಗೊಳಿಸಲು ಅನುಮತಿ ಪಡೆಯುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾನೆ.
ನನ್ನ ಹೆಂಡತಿ ಕಿರುಕುಳ ನೀಡುತ್ತಿದ್ದು, ಆಕೆ ವಿರುದ್ಧ ನೀಡಿದ ದೂರುಗಳ ಮೇಲೆ ಪೊಲೀಸರು ಕ್ರಮ ಕೈಗೊಳ್ಳದ ಕಾರಣ ಹತಾಶೆಗೆ ಒಳಗಾಗಿರುವುದಾಗಿ ಹೇಳಿಕೊಂಡು ದಯಾಮರಣ ಕೋರಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾನೆ. ಮಹಿಳೆಯರನ್ನು ರಕ್ಷಿಸಲು ಉದ್ದೇಶಿಸಲಾದ ಕಾನೂನುಗಳನ್ನು ತನ್ನ ಪತ್ನಿ ಆಗಾಗ್ಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದು, ಕೌಟುಂಬಿಕ ಕಲಹಗಳ ನಂತರ ತನ್ನ ವಿರುದ್ಧ ದೂರು ದಾಖಲಿಸುತ್ತಿದ್ದಾರೆ ಎಂದು ಪಟೇಲ್ ಆರೋಪಿಸಿದ್ದಾರೆ.
ತನ್ನ ಪತ್ನಿ ತನ್ನ ಮಗನ ಜೀವಕ್ಕೆ ಹಾನಿ ಮಾಡಲು ಯತ್ನಿಸಿದ್ದಳು ಅಂತ ಕಿರಿತ್ ಪಟೇಲ್ ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರನ್ನು ಸಂಪರ್ಕಿಸಿದರೂ ದೂರಿಗೆ ಸಂಬಂಧಿಸಿದಂತೆ ಯಾವುದೇ ಎಫ್ಐಆರ್ ದಾಖಲಿಸಲಾಗಿಲ್ಲ ಎಂದು ಅವರು ಆರೋಪಿಸಿದರು. ಈ ವಿಷಯದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಪದೇ ಪದೇ ವಿನಂತಿಸಿದ್ದೇನೆ ಎಂದು ಪಟೇಲ್ ಹೇಳಿದರು.
ಕಿರಿತ್ ಪಟೇಲ್ ಅವರು ಮತ್ತು ಅವರ ಪತ್ನಿ ಇಬ್ಬರೂ ಮೂರನೇ ಬಾರಿಗೆ ವಿವಾಹವಾದರು ಎಂದು ಹೇಳಿದ್ದಾರೆ. ಅವರು ತಮ್ಮ ಪತ್ನಿಯನ್ನು ” ಲೂಟಿಕೋರ ದುಲ್ಹನ್ ” ಅಂದರೆ ಲೂಟಿಕೋರ ವಧು ಎಂದು ಟೀಕಿಸಿದ್ದಾರೆ. ಹಣ ಅಥವಾ ಬೆಲೆಬಾಳುವ ವಸ್ತುಗಳನ್ನು ಪಡೆದ ನಂತರ ಮದುವೆ ಮದುವೆ ಮುರಿದುಕೊಂಡು, ಗಂಡಂದಿರನ್ನು ಗುರಿಯಾಗಿಸಲು ಕಾನೂನು ಕ್ರಮಗಳು ಮತ್ತು ಆರ್ಥಿಕ ಬೇಡಿಕೆಗಳನ್ನು ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ತನ್ನ ಪತ್ನಿ ಹಿಂದಿನ ಸಂಗಾತಿಗಳಿಂದ ಹಣವನ್ನು ಪಡೆದಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ.
ಕಿರಿತ್ ಪಟೇಲ್ ಪ್ರಸ್ತುತ ವಿವಾಹವು ನವೆಂಬರ್ 14, 2024 ರಂದು ನಡೆಯಿತು. ಅವರ ಪತ್ನಿ, ಅತ್ತೆ ಮತ್ತು ಇತರ ಸಂಬಂಧಿಕರು ಪದೇ ಪದೇ ಹಣಕ್ಕಾಗಿ ಒತ್ತಡ ಹೇರಿದ್ದಾರೆ ಮತ್ತು ಕಿರುಕುಳ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅವರ ವಿರುದ್ಧ ದಾಖಲಾಗಿರುವ ಜೀವನಾಂಶ ಮತ್ತು ಕೌಟುಂಬಿಕ ಹಿಂಸಾಚಾರ ಪ್ರಕರಣಗಳನ್ನು ಒತ್ತಡ ಹೇರಲು ಬಳಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ತಮ್ಮ ದಯಾಮರಣ ಅರ್ಜಿಯಲ್ಲಿ, ಕೌಟುಂಬಿಕ ವಿವಾದಗಳನ್ನು ಎದುರಿಸುತ್ತಿರುವ ಪುರುಷರಿಗೆ ಕಾನೂನು ರಕ್ಷಣೆಯ ಕೊರತೆಯ ಬಗ್ಗೆ ಪಟೇಲ್ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. ಪೊಲೀಸ್ ಠಾಣೆಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಭೇಟಿ ನೀಡುವುದರಿಂದ ಕೇವಲ ಭರವಸೆಗಳು ಮಾತ್ರ ಬಂದಿವೆ ಮತ್ತು ಯಾವುದೇ ನಿರ್ದಿಷ್ಟ ಕ್ರಮವಿಲ್ಲ ಎಂದು ಅವರು ಆರೋಪಿಸಿದ್ದಾರೆ. ಹೀಗಾಗಿ ತಮಗೆ ದಯಾಮರಣ ನೀಡಬೇಕು ಅಂತ ಮನವಿ ಮಾಡಿದ್ದಾರೆ.













