Last Updated:
ಕೋಲ್ಕತ್ತಾದ ಮಿರ್ಜಾ ಗಾಲಿಬ್ ಸ್ಟ್ರೀಟ್ನಲ್ಲಿರುವ ಹೋಟೆಲ್ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಬೆಳಗಿನ ಜಾವ ಸಂಭವಿಸಿದ ಈ ಬೆಂಕಿಯಿಂದ ಒಂದು ಮಗು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೋಲ್ಕತ್ತಾದ ಹೋಟೆಲ್ನಲ್ಲಿ (Hotel) ಇಂದು ಬುಧವಾರ ಬೆಳಗಿನ ಜಾವ ಭಾರೀ ಬೆಂಕಿ ಅವಘಡ (Fire Accident) ಸಂಭವಿಸಿದೆ. ಈ ಬೆಂಕಿ ಘಟನೆ ಅನೇಕ ಕುಟುಂಬಗಳನ್ನು ಬೆಚ್ಚಿಬೀಳಿಸಿದೆ. ಮಿರ್ಜಾ ಗಾಲಿಬ್ ಸ್ಟ್ರೀಟ್ನಲ್ಲಿರುವ ಹೋಟೆಲ್ನಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಈ ಬೆಂಕಿ, ಕೊಠಡಿಗಳಲ್ಲಿ ಹೊಗೆ ಬೇಗನೆ ಹರಡಿದ್ದು, ಜನರು ರಕ್ಷಣೆಗಾಗಿ ಓಡಲು ಪ್ರಾರಂಭಿಸಿದರು. ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿವೆ.














