ಆದರೆ ನೆನಪಿರಲಿ, ಈ ಚಿಪ್ಪುಗಳನ್ನು ಕಡ್ಡಾಯವಾಗಿ 7 ರಿಂದ 10 ದಿನಗಳಿಗೊಮ್ಮೆ ಬದಲಾಯಿಸಲೇಬೇಕು. ಇವುಗಳ ಜೊತೆಗೆ ವೈಟ್ ಫಿನೈಲ್, ಬೆಳ್ಳುಳ್ಳಿ ಮತ್ತು ಉಪ್ಪಿನ ಮಿಶ್ರಣ, ಬೇವಿನ ಎಣ್ಣೆ, ದಾಲ್ಚಿನ್ನಿ ಅಥವಾ ಲವಂಗದ ಎಣ್ಣೆಯನ್ನು ಸ್ಪ್ರೇ ಮಾಡುವುದರಿಂದಲೂ ಉತ್ತಮ ಫಲಿತಾಂಶ ಪಡೆಯಬಹುದು. ಇಷ್ಟೇ ಅಲ್ಲದೆ, ಮನೆ ಸುತ್ತಮುತ್ತ ತುಳಸಿ, ಪುದೀನಾ, ನಿಂಬೆ ಹುಲ್ಲು (ಲೆಮನ್ ಗ್ರಾಸ್) ಹಾಗೂ ಅಲೋವೆರಾದಂತಹ ಸಸ್ಯಗಳನ್ನು ಬೆಳೆಸಿದರೆ ಹಾವುಗಳ ಕಾಟದಿಂದ ಮುಕ್ತಿ ಪಡೆಯಬಹುದು. ಹಾವುಗಳು ಕತ್ತಲನ್ನು ಇಷ್ಟಪಡುವುದರಿಂದ, ರಾತ್ರಿ ಹೊತ್ತು ಮನೆಯ ಸುತ್ತಮುತ್ತ ಪ್ರಖರವಾದ ಲೈಟ್ ಹಾಕುವುದನ್ನು ಮರೆಯದಿರಿ.













