Helicopter Tragedy: ಮದುವೆಯಾದ ಕೆಲವೇ ಗಂಟೆಗಳಲ್ಲಿ ವರ ಸಾವು! ಹೆಲಿಕಾಪ್ಟರ್ ಅಪಘಾತದಲ್ಲಿ ವಧುವಿಗೆ ಗಂಭೀರ ಗಾಯ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಭಾರತೀಯ ಮೂಲದ ಪೈಲಟ್ ಡೇವ್ ಫಿಜಿ ಹಾಗೂ ಪತ್ನಿ ಜೆಸ್ಸಿ


Last Updated:

Helicopter Tragedy: ಮದುವೆಯಾದ ಕೆಲವೇ ಗಂಟೆಗಳಲ್ಲಿ ದುರಂತ; ಬೇಡ ಅಂದ್ರೂ ಹನಿಮೂನ್ ಹೋಗ್ತಿದ್ದಾಗ ಹೆಲಿಕಾಪ್ಟರ್ ಪತನ! ಮದುವೆಯಾಗಿ ಕೆಲವೇ ಗಂಟೆಯಲ್ಲಿ ವರ ಸಾವು, ವಧು ಜೆಸ್ಟ್ ಮಿಸ್

ಭಾರತೀಯ ಮೂಲದ ಪೈಲಟ್ ಡೇವ್ ಫಿಜಿ ಹಾಗೂ ಪತ್ನಿ ಜೆಸ್ಸಿ
ಭಾರತೀಯ ಮೂಲದ ಪೈಲಟ್ ಡೇವ್ ಫಿಜಿ ಹಾಗೂ ಪತ್ನಿ ಜೆಸ್ಸಿ

ಜಾರ್ಜಿಯಾ (ಅಮೆರಿಕ): ಮದುವೆ ಅಂದರೆ ಬದುಕಿನ ಹೊಸ ಆರಂಭ, ಕನಸುಗಳ ಹಾರಾಟ. ಆದ್ರೆ ಜಾರ್ಜಿಯಾದಲ್ಲಿ ನಡೆದ ಈ ದುರಂತ ಆ ಕನಸನ್ನೇ ಕಿತ್ತುಕೊಂಡಿದೆ. ಹೌದು, ಡೆಲ್ಟಾ ಏರ್‌ಲೈನ್ಸ್‌ನಲ್ಲಿ (Delta Airlines) ಕೆಲಸ ಮಾಡುತ್ತಿದ್ದ ಯುವ ಪ್ರತಿಭೆಯಾದ ಕೇರಳಂ (Keralam) ಮೂಲದ 26 ವರ್ಷದ ಪೈಲಟ್ ಡೇವ್ ಫಿಜಿ (Dave Fiji), ಮೇ 29 ರಂದು ವರ್ಷಗಳ ಕಾಲ ಪ್ರೀತಿಸಿದಾಕೆಯನ್ನ ಅದ್ದೂರಿಯಾಗಿ ಮದುವೆಯಾದರು. ಇದಾಗಿ, ಕೆಲವೇ ಗಂಟೆಗಳಲ್ಲಿ, ಹೊಸ ಜೀವನದ ಕನಸ್ಸು ಕಂಡು ಹನಿಮೂನ್‌ಗೆ ಹೊರಟ ಈ ಜೋಡಿಯ ಕುರಿತು ವಿಧಿ ಬೇರೆ ನಿರ್ಧಾರ ತಗೊಂಡಿತು. ಅದುವೇ, ಸಾವು!

ಏನಿದು ಘಟನೆ?

ಅಮೆರಿಕಾದ ಡೆಲ್ಟಾ ಏರ್‌ಲೈನ್ಸ್‌ನಲ್ಲಿ ವಾಣಿಜ್ಯ ಪೈಲಟ್ ಆಗಿ ಕೆಲಸ ಮಾಡುತ್ತಿದ್ದ ಡೇವ್ ಫಿಜಿ, ಮೇ 29 ರಂದು ಪ್ರೀತಿಸಿದ ಜಿಸ್ನಿ ಎಂಬ ಯುವತಿಯನ್ನು ವಿವಾಹವಾಗಿದ್ದರು. ಸುಮಾರು 400 ಅತಿಥಿಗಳ ಸಮ್ಮುಖದಲ್ಲಿ ಜಾರ್ಜಿಯಾದಲ್ಲಿ ಇವರ ಮದುವೆಯೂ ಸಂಭ್ರಮದಿಂದ ನಡೆದಿತ್ತು. ಇನ್ನೂ, ಮದುವೆಯ ನಂತರ ದಂಪತಿಗಳು ಅಟ್ಲಾಂಟಾದ ಹೋಟೆಲ್‌ಗೆ ತೆರಳಲು ಹೆಲಿಕಾಪ್ಟರ್ ಬುಕ್ ಮಾಡಿದ್ದರು. ರಾತ್ರಿ ರಿಸೆಪ್ಷನ್ ಮುಗಿಸಿ ಇಬ್ಬರೂ ರಾಬಿನ್ಸನ್ R66 ಹೆಲಿಕಾಪ್ಟರ್ ಏರಿದ್ದರು. ಆದರೆ ವಿಧಿ ಬೇರೆಯದೇ ಆಟ ಆಡಿತ್ತು.

ಇದನ್ನೂ ಓದಿ: Heroic Sacrifice in USA: ಅಮೆರಿಕಾದಲ್ಲಿ ನೀರಲ್ಲಿ ಮುಳುಗುತ್ತಿದ್ದ 3 ಸ್ನೇಹಿತರನ್ನು ಬದುಕಿಸಿ ತಾನು ಉಸಿರು ಚೆಲ್ಲಿದ ಯುವಕ

ಸ್ವತಃ ಅನುಭವಿ ಪೈಲಟ್ ಆಗಿದ್ದ ಡೇವ್ ಫಿಜಿ, ಟೇಕ್ ಆಫ್ ಆಗುವ ಮುನ್ನವೇ ಹವಾಮಾನದ ವೈಪರೀತ್ಯವನ್ನು ಗುರುತಿಸಿದ್ದರು. ಆ ರಾತ್ರಿ ದಟ್ಟವಾದ ಮಂಜು ಮತ್ತು ಮಳೆ ಇತ್ತು. “ದೃಶ್ಯಗೋಚರತೆ ಶೂನ್ಯವಾಗಿದೆ, ಇಂತಹ ವಾತಾವರಣದಲ್ಲಿ ಹಾರಾಟ ನಡೆಸುವುದು ಸುರಕ್ಷಿತವಲ್ಲ” ಎಂದು ಅವರು ಹೆಲಿಕಾಪ್ಟರ್‌ನ ಮುಖ್ಯ ಪೈಲಟ್‌ಗೆ ಎಚ್ಚರಿಕೆ ನೀಡಿದ್ದರು. ಆದರೆ, ಹೆಚ್ಚಿನ ಎತ್ತರದಲ್ಲಿ ಹಾರುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಮುಖ್ಯ ಪೈಲಟ್ ಭರವಸೆ ನೀಡಿದ್ದರು. ದುರದೃಷ್ಟವಶಾತ್, ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಡಾಸನ್‌ವಿಲ್ಲೆ ಸಮೀಪದ ಅರಣ್ಯ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿತು.

ಅವಶೇಷಗಳಡಿ ಸಿಲುಕಿ ಬದುಕುಳಿದ ನವವಧು!

ಮುಂದುವರೆದು, ಈ ಭೀಕರ ಅಪಘಾತದಲ್ಲಿ ಡೇವ್ ಫಿಜಿ ಮತ್ತು ಹೆಲಿಕಾಪ್ಟರ್‌ನ ಮುಖ್ಯ ಪೈಲಟ್ ಇಬ್ಬರೂ ಸ್ಥಳದಲ್ಲೇ ಮೃತಪಟ್ಟರು. ಆದರೆ ನವವಧು ಜಿಸ್ನಿ ಅವರು ಪವಾಡಸದೃಶವಾಗಿ ಬದುಕುಳಿದಿದ್ದಾರೆ. ಅದರಂತೆ, ಅಪಘಾತದ ನಂತರ ಅವರು ಸುಮಾರು 5 ರಿಂದ 6 ಗಂಟೆಗಳ ಕಾಲ ಹೆಲಿಕಾಪ್ಟರ್‌ನ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು. ವೃತ್ತಿಯಲ್ಲಿ ನರ್ಸ್ ಆಗಿದ್ದ ಜಿಸ್ನಿ, ಪ್ರಜ್ಞೆ ಬಂದ ತಕ್ಷಣ ಪರಿಸ್ಥಿತಿಯನ್ನು ಗ್ರಹಿಸಿ ಸಹಾಯಕ್ಕಾಗಿ ತುರ್ತು ಸೇವೆಗೆ ಕರೆ ಮಾಡಿದರು. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಮುಂದುವರಿದ ತನಿಖೆ…

ಏತನ್ಮಧ್ಯೆ, ಸಂತೋಷದಿಂದ ಕೂಡಿರಬೇಕಾಗಿದ್ದ ಮದುವೆಯ ಮನೆ ಈಗ ಶೋಕಸಾಗರವಾಗಿದೆ. ಮಗನ ಹಠಾತ್ ಅಗಲಿಕೆಯಿಂದ ಹೆತ್ತವರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಈ ಹೆಲಿಕಾಪ್ಟರ್ ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಮತ್ತು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಜಂಟಿ ತನಿಖೆಯನ್ನು ಆರಂಭಿಸಿವೆ. ಅದರಲ್ಲೂ, ಹವಾಮಾನ ವೈಪರೀತ್ಯದ ನಡುವೆಯೂ ಹಾರಾಟ ನಡೆಸಲು ಮುಖ್ಯ ಪೈಲಟ್ ನಿರ್ಧರಿಸಿದ್ದು ಏಕೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed