Health Tips: ರಾಜಗೀರಾ ಬೀಜ ತಿನ್ನಿ, ಆರೋಗ್ಯವಾಗಿರಿ! ಇಲ್ಲಿದೆ ತಜ್ಞರ ಸೀಕ್ರೆಟ್ ಗೈಡ್! | ಕ್ರೀಡಾ ಸುದ್ದಿ | ACTPnews

ಆರೋಗ್ಯ ಸಲಹೆಗಳು


Last Updated:

ಇಂದು ಜಗತ್ತಿನಾದ್ಯಂತ ರಾಜಗೀರಾ ಬೀಜಗಳು ಬಹಳ ಫೇಮಸ್ ಪೌಷ್ಟಿಕ ಧಾನ್ಯ. ಇವುಗಳನ್ನು ಸೂಪರ್ ಫುಡ್ ಎಂದು ಕರೆಯುತ್ತಾರೆ. ಇದರ ಪ್ರಯೋಜನಗಳು ಮತ್ತು ಸರಿಯಾಗಿ ತಿನ್ನುವ ವಿಧಾನವನ್ನು ತಿಳಿದುಕೊಳ್ಳೋಣ ಬನ್ನಿ.

ಆರೋಗ್ಯ ಸಲಹೆಗಳು
ಆರೋಗ್ಯ ಸಲಹೆಗಳು

ರಾಜಗೀರಾ (Rajagira) ಬೀಜಗಳನ್ನು ಗೋಧಿ (Wheat) ಅಥವಾ ಅಕ್ಕಿ (Rice) ಮುಂತಾದ ಧಾನ್ಯ (Grain) ಎಂದು ತಿಳಿದಿರುವವರು ಇದ್ದಾರೆ. ಆದರೆ ಅದು ಧಾನ್ಯವಲ್ಲ. ಇದು ಸುಮಾರು 60 ವಿವಿಧ ಜಾತಿಗಳಲ್ಲಿ ಬರುತ್ತದೆ. ರಾಜಗೀರಾ ಬೀಜಗಳು ತುಂಬಾ ಆರೋಗ್ಯಕರವಾಗಿವೆ. ಡಯಟ್ ಮಾಡುವವರಿಗೆ ಇದು ಬಹಳ ಉತ್ತಮ ಆಹಾರ (Food) ಎಂದು ಹೇಳಬಹುದು. ಭಾರತದಲ್ಲಿ ಧಾರ್ಮಿಕ ಹಬ್ಬಗಳಲ್ಲಿ ಉಪವಾಸಕ್ಕೆ ಇದನ್ನು ಬಹಳ ಹೆಚ್ಚಾಗಿ ಬಳಸುತ್ತಾರೆ. ಭಾರತದಲ್ಲಿ ಇದನ್ನು ಹಿಂದಿಯಲ್ಲಿ ರಾಮದಾನ ಎಂದು ಕರೆಯುತ್ತಾರೆ. ರಾಮದಾನ ಎಂದರೆ “ದೇವರ ಬೀಜ” ಎಂದು ಅರ್ಥ. ಆದ್ದರಿಂದಲೇ ಹಬ್ಬದ ಸಮಯದಲ್ಲಿ ಇದನ್ನು ವಿಶೇಷವಾಗಿ ಬಳಸುತ್ತಾರೆ.

ರಾಜಗೀರಾ ಬೀಜಗಳು ಸ್ವಾಭಾವಿಕವಾಗಿ ಗ್ಲುಟನ್‌ ಇಲ್ಲದವು. ಇವುಗಳಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಫೈಬರ್‌ ಅಂಶಗಳನ್ನು ಹೆಚ್ಚಾಗಿದ್ದು, 9 ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿವೆ. ಅಲ್ಲದೆ, ಲೈಸಿನ್ ಎಂಬ ಅಮೈನೋ ಆಮ್ಲವು ದೇಹದಲ್ಲಿ ಕಾಲಜನ್ ರಚನೆಗೆ, ಕ್ಯಾಲ್ಸಿಯಂ ಸರಿಯಾಗಿ ಹೀರಿಕೊಳ್ಳುವುದಕ್ಕೆ, ಗಾಯಗಳು ಬೇಗ ಗುಣವಾಗುವುದಕ್ಕೆ ಮತ್ತು ಸ್ನಾಯುಗಳು ತ್ವರಿತವಾಗಿ ಚೇತರಿಸಿಕೊಳ್ಳುವುದಕ್ಕೆ ಬಹಳ ಸಹಾಯಕವಾಗಿದೆ ಎಂದು ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಶುಭಮ್ ವತ್ಸ್ಯ ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ ವಿವರಿಸಿದ್ದಾರೆ.

ಒಂದು ಕಪ್ ಬೇಯಿಸಿದ ರಾಜಗೀರಾ ಬೀಜಗಳಲ್ಲಿ ಸುಮಾರು 9 ಗ್ರಾಂ ಪ್ರೋಟೀನ್ ಮತ್ತು 5 ಗ್ರಾಂ ಫೈಬರ್ ಇರುತ್ತದೆ. ಅಂದರೆ ಈ ಧಾನ್ಯವನ್ನು ತಿನ್ನುವುದರಿಂದ ನಿಮಗೆ ಅನೇಕ ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಈಗ ರಾಜಗೀರಾದ ಪ್ರಯೋಜನಗಳು ಮತ್ತು ಅದನ್ನು ಸರಿಯಾಗಿ ಹೇಗೆ ತಿನ್ನಬಹುದು ಎಂಬುದನ್ನು ಎಂಬುದರ ಬಗ್ಗೆ ಡಾ. ಶುಭಮ್ ವತ್ಸ್ಯ ಮಾಹಿತಿ ನೀಡಿದ್ದಾರೆ.

ರಾಜಗೀರಾ ಪ್ರಯೋಜನಗಳೇನು ?

ಜೀರ್ಣಕ್ರಿಯೆ ಸುಧಾರಿಸುತ್ತದೆ: ರಾಜಗೀರಾ ಬೀಜ ನಿಮ್ಮ ಹೊಟ್ಟೆಯ ಜೀರ್ಣಕ್ರಿಯೆಯನ್ನು ತುಂಬಾ ಚೆನ್ನಾಗಿ ಸುಧಾರಿಸುತ್ತದೆ. ಇದರಲ್ಲಿರುವ ನಾರಿನ ಅಂಶವು ಮಲಬದ್ಧತೆಯನ್ನು ತಡೆಯುತ್ತದೆ. ಹೆಚ್ಚು ತಿನ್ನುವುದನ್ನು ನಿಯಂತ್ರಿಸುತ್ತದೆ.

ಪ್ರೋಟೀನ್ ಮತ್ತು ನಾರು ಸಮೃದ್ಧವಾಗಿದೆ: ರಾಜಗೀರಾ ಪ್ರೋಟೀನ್ ಮತ್ತು ನಾರಿನಲ್ಲಿ ತುಂಬಾ ಇದೆ. ಇದನ್ನು ತಿಂದರೆ ಹೊಟ್ಟೆ ದೀರ್ಘಕಾಲ ತುಂಬಿದಂತೆ ಇರುತ್ತದೆ. ಹಸಿವು ಬೇಗ ಬರುವುದಿಲ್ಲ.

ಮೂಳೆಗಳನ್ನು ಬಲಪಡಿಸುತ್ತದೆ: ಅಮರಂತ್‌ನಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಅಧಿಕವಾಗಿರುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಇದು ಆಸ್ಟಿಯೊಪೊರೋಸಿಸ್ (ಮೂಳೆಗಳು ಮುರಿಯುವ ರೋಗ) ಬರದಂತೆಯೂ ಸಹಾಯ ಮಾಡುತ್ತದೆ.

ರಕ್ತದ ಸಕ್ಕರೆಯನ್ನು ನಿಯಂತ್ರಿಸುತ್ತದೆ: ಮಧುಮೇಹಿಗಳಿಗೆ ರಾಜಗೀರಾ ಬೀಜಗಳನ್ನು ಆಹಾರದಲ್ಲಿ ತಪ್ಪದೆ ಸೇರಿಸಬಹುದು. ರಾಜಗೀರಾ ಕಾರ್ಬೋಹೈಡ್ರೇಟ್‌ಗಳನ್ನು ನಿಧಾನವಾಗಿ ಹೀರಿಕೊಳ್ಳುವಂತೆ ಮಾಡುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆ ಬೇಗ ಏರದಂತೆ ನಿಯಂತ್ರಿಸುತ್ತದೆ. ಇದು ಸಂಪೂರ್ಣ ಅಂಟು-ಮುಕ್ತ (ಗ್ಲುಟನ್ ಫ್ರೀ) ಆಗಿದೆ. ಅಂಟು ಸಮಸ್ಯೆ ಇರುವ ಮಧುಮೇಹಿಗಳಿಗೆ ಇದು ಬಹಳ ಉತ್ತಮ ಆಯ್ಕೆ ಎಂದು ಡಾ. ಶುಭಮ್ ವತ್ಸ್ಯ ಹೇಳಿದ್ದಾರೆ.

ರಾಜಗೀರಾವನ್ನು ಹೇಗೆ ಸೇವಿಸಬಹುದು?

ನೀವು ರಾಜಗೀರಾ ಬೀಜಗಳನ್ನು ಹಿಟ್ಟು ಮಾಡಿ ಬಳಸಬಹುದು. ಈ ಹಿಟ್ಟನ್ನು ನಿಮ್ಮ ಸಾಮಾನ್ಯ ಹಿಟ್ಟಿಗೆ ಸ್ವಲ್ಪ ಬೆರೆಸಿ ರೊಟ್ಟಿ, ಪುರಿ ಅಥವಾ ಇತರ ತಿನಿಸುಗಳನ್ನು ಮಾಡಿ ತಿನ್ನಬಹುದು. ಇದನ್ನು ಗಂಜಿ ರೂಪದಲ್ಲೂ ತಯಾರಿಸಿ ಸೇವಿಸಬಹುದು. ಬೀಜಗಳನ್ನು ಹಾಲಿನಲ್ಲಿ ಚೆನ್ನಾಗಿ ಬೇಯಿಸಿ, ಡ್ರೈ ಫ್ರೂಟ್ಸ್ ಹಾಕಿ ಖೀರ್ ಮಾಡಿ ಕುಡಿಯಬಹುದು. ಆದರೆ ರಾಜಗೀರಾದ ರೊಟ್ಟಿಗಳು ಅತ್ಯಂತ ಆರೋಗ್ಯಕರ ಮತ್ತು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

(Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಯಾವುದೇ ರೀತಿಯಲ್ಲೂ ಜವಾಬ್ದಾರಿಯಲ್ಲ)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed