Halli Power: ‘ಹಳ್ಳಿ ಪವರ್’ ಗ್ರ್ಯಾಂಡ್ ಓಪನಿಂಗ್; 16 ಜನ ಸ್ಪರ್ಧಿಗಳ ಅಬ್ಬರ ಬಲು ಜೋರು! | | ACTPnews

ಹಳ್ಳಿ ಪವರ್ ಗ್ರ್ಯಾಂಡ್ ಓಪನಿಂಗ್; 16 ಜನ ಸ್ಪರ್ಧಿಗಳ ಅಬ್ಬರ ಬಲು ಜೋರು!


Last Updated:

ಹಳ್ಳಿ ಪವರ್ ರೀಲೋಡೆಡ್ ಗ್ರ್ಯಾಂಡ್ ಓಪನಿಂಗ್ ಶೋ ಹೇಗೆ ಆಗಿದೆ? 16 ಜನ ಸ್ಪರ್ಧಿಗಳನ್ನ ನೋಡಿ ಹಳ್ಳಿ ಜನ ಏನೆಲ್ಲ ಹೇಳಿದರು? ಪ್ರತಿ ದಿನ ಈ ಶೋ ಪ್ರಸಾರ ಆಗ್ತಿರೋ ಟೈಮ್ ಯಾವುದು? ಈ ಎಲ್ಲ ವಿವರ ಇಲ್ಲಿದೆ ಓದಿ.

ಹಳ್ಳಿ ಪವರ್ ಗ್ರ್ಯಾಂಡ್ ಓಪನಿಂಗ್; 16 ಜನ ಸ್ಪರ್ಧಿಗಳ ಅಬ್ಬರ ಬಲು ಜೋರು!
ಹಳ್ಳಿ ಪವರ್ ಗ್ರ್ಯಾಂಡ್ ಓಪನಿಂಗ್; 16 ಜನ ಸ್ಪರ್ಧಿಗಳ ಅಬ್ಬರ ಬಲು ಜೋರು!

ಹಳ್ಳಿ ಪವರ್ ರೀಲೋಡೆಡ್ ಶೋ (Halli Power Reloaded) ಶುರು ಆಗುತ್ತಿದೆ. ಜೀ ಕನ್ನಡದಲ್ಲಿ (Zee Kannada) ಇದು ಪ್ರಸಾರ ಆಗುತ್ತಿದೆ. 16 ಸ್ಪರ್ಧಿಗಳು ಆಯ್ಕೆ ಆಗಿದ್ದಾರೆ. ಹಳ್ಳಿ ಜನರೇ ಇವರನ್ನ ಆಯ್ಕೆ ಮಾಡಿದ್ದಾರೆ. ಗ್ರ್ಯಾಂಡ್ ಓಪನಿಂಗ್‌ (Grand Opening) ಅಲ್ಲಿಯೇ ಪ್ಯಾಟೆ ಹುಡುಗಿಯರು ಯಾರು ಅನ್ನೋದು ಗೊತ್ತಾಗಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಹಳ್ಳಿ ಪವರ್ ಪ್ರತಿ ದಿನ ಪ್ರಸಾರ

ಹಳ್ಳಿ ಪವರ್ ಶೋ ಪ್ರತಿ ದಿನ ಪ್ರಸಾರ ಆಗುತ್ತಿದೆ.16 ಜನ ಸ್ಪರ್ಧಿಗಳು ಈ ಶೋದಲ್ಲಿ ಇರ್ತಾರೆ. ಪ್ಯಾಟೆ ಹುಡುಗಿಯರೇ ಈ ಶೋದಲ್ಲಿ ಭಾಗಿ ಆಗಿದ್ದಾರೆ.
Zee Kannada Halli Power Reloaded Grand Opening Latest Promo Released

ಹಳ್ಳಿ ಪವರ್ ಪ್ರತಿ ದಿನ ಪ್ರಸಾರ

ಹಳ್ಳಿ ಲೈಫ್‌ ಅಲ್ಲಿ ಇವರು ಹೇಗೆ ಇರ್ತಾರೆ? ಯಾವ ರೀತಿ ಜೀವನ ನಡೆಸುತ್ತಾರೆ? ಅಕುಲ್ ಬಾಲಾಜಿ ಕೊಡುವ ಟಾಸ್ಕ್‌ಗಳು ಹೇಗೆ ಇರುತ್ತವೆ. ಈ ಎಲ್ಲ ಕ್ಯೂರಿಯೋಸಿಟಿ ಇದ್ದೇ ಇರುತ್ತದೆ.

ರಾತ್ರಿ 9.30ಕ್ಕೆ ಪ್ರಸಾರ

ಹಳ್ಳಿ ಪವರ್ ರೀಲೋಡೆಡ್ ಶೋ ಪ್ರತಿ ದಿನ ಪ್ರಸಾರ ಆಗುತ್ತಿದೆ. ರಾತ್ರಿ 9.30ಕ್ಕೆ ಇದು ಪ್ರಸಾರ ಆಗುತ್ತಿದೆ. ಆದರೆ, ಗ್ರ್ಯಾಂಡ್ ಓಪನಿಂಗ್ ಮಾತ್ರ ರಾತ್ರಿ 9 ಗಂಟೆಗೆಯಿಂದಲೇ ಟೆಲಿಕಾಸ್ಟ್ ಆಗುತ್ತಿದೆ.

ಗ್ರ್ಯಾಂಡ್ ಓಪನಿಂಗ್ ಪ್ರೋಮೋ

ಜೀ ಕನ್ನಡ ತನ್ನ ಈ ಒಂದು ಶೋದ ಪ್ರೋಮೋ ರಿಲೀಸ್ ಮಾಡಿದೆ. ಇದರಲ್ಲಿ ಗ್ರ್ಯಾಂಡ್ ಓಪನಿಂಗ್ ಹೇಗೆ ಇರುತ್ತದೆ ಅನ್ನೋದು ತಿಳಿಯುತ್ತದೆ.

ಹಳ್ಳಿಯ ಜನರೇ ಈ ಸ್ಪರ್ಧಿಗಳನ್ನ ಆಯ್ಕೆ ಮಾಡುತ್ತಾರೆ. ತಮ್ಮ ಊರಿಗೆ ಇವರು ಹೊಂದಿಕೊಳ್ತಾರೋ ಇಲ್ವೋ ಅನ್ನೋದನ್ನ ನೋಡಿಕೊಂಡೇ ಸೆಲೆಕ್ಷನ್ ಮಾಡ್ತಾರೆ ನೋಡಿ.

Zee Kannada Halli Power Reloaded Grand Opening Latest Promo Released

ರಾತ್ರಿ 9.30ಕ್ಕೆ ಪ್ರಸಾರ
ಹಳ್ಳಿ ಪವರ್ ರೀಲೋಡೆಡ್

ಹಳ್ಳಿ ಪವರ್ ಶೋಗೆ ಈ ಸಲ ರೀಲೋಡೆಡ್ ಅಂತಲೇ ಹೆಸರಿಟ್ಟಿದ್ದಾರೆ. ಕಳೆದ ಸಲ ಇದಕ್ಕೆ ಹಳ್ಳಿ ಪವರ್ ಅಂತಲೆ ಶೀರ್ಷಿಕೆ ಇಟ್ಟಿದ್ದರು.

ಈ ಸಲ ಎಲ್ಲಿ ಈ ಶೋ

ಈ ಸಲ ಇದು ಬಾಗಲಕೋಟೆ ಜಿಲ್ಲೆಯಲ್ಲಿಯೇ ನಡೀತಿದೆ. ಇಲ್ಲಿಯ ಐಹೊಳೆಯಲ್ಲಿಯೇ ಹಳ್ಳಿ ಪವರ್ ರೀಲೋಡೆಡ್ ಶೋ ನಡೀತಿದೆ. ಈಗಾಗಲೇ ಈ ಶೋದ ಗ್ರ್ಯಾಂಡ್ ಓಪನಿಂಗ್ ಶೂಟ್ ಆಗಿದೆ.

ಅದೇ ಗ್ರ್ಯಾಂಡ್ ಓಪನಿಂಗ್‌ನ ಪ್ರೋಮೋ ರಿಲೀಸ್ ಆಗಿದೆ. ಈ ಪ್ರೋಮೋದಲ್ಲಿ ಹಳ್ಳಿಯ ಜನರು, ಸ್ಪರ್ಧಿಗಳು, ಸ್ಪರ್ಧಿಗಳು ಪೋಷಕರು, ಅಕುಲ್ ಬಾಲಾಜಿ ಹೀಗೆ ಎಲ್ಲರನ್ನು ತೋರಿಸಿದ್ದಾರೆ. ಇದರೊಟ್ಟಿಗೆ ಟೈಮ್ ಮತ್ತು ಡೇಟ್ ಕೂಡ ರಿವೀಲ್ ಆಗಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed