Green Actor: ಕೆಜಿಎಫ್ ಅಮ್ಮನ ಸೆಂಟಿಮೆಂಟ್ ಆನ್​ಸ್ಕ್ರೀನ್, ಈ ಖ್ಯಾತ ನಟನ ರಿಯಲ್ ಸ್ಟೋರಿ ಕೇಳಿ! ಎಂಥಾ ಅದ್ಭುತ ಪ್ರೀತಿ ಇದು | | ACTPnews

ಯಾರು ಆ ನಟ?


Last Updated:

Green Actor: ಅಮ್ಮನ ಸೆಂಟಿಮೆಂಟ್ ನೋಡಿದರೆ ಇವರನ್ನೂ ರಿಯಲ್ ಲೈಫ್ ರಾಕಿಭಾಯ್ ಅಂತ ಕರೆಯಬಹುದಾ? ಈ ಸ್ಟೋರಿ ಓದಿ ನೀವೇ ಹೇಳಿ.

ಯಾರು ಆ ನಟ?
ಯಾರು ಆ ನಟ?

ಕೆಜಿಎಫ್ ಸಿನಿಮಾ (KGF Movie) ನೋಡಿದರೆ ಪ್ರೇಕ್ಷಕರು ಎಂದೂ ಮರೆಯಲಾಗದ್ದು ಅಮ್ಮ-ಮಗನ (Mother Son) ಸೆಂಟಿಮೆಂಟ್. ಆ ಸಿನಿಮಾದ ಎರಡು ಭಾಗಗಳಲ್ಲಿ ಅಮ್ಮನ ಸೆಂಟಿಮೆಂಟ್ ತುಂಬಾ ದೊಡ್ಡದಾಗಿ ತೋರಿಸಲಾಗಿದೆ. ಅಮ್ಮ ಹಾಗೂ ಮಗ ಎನ್ನುವುದು ಅಂತಿಂಥಾ ಬಾಂಧವ್ಯವಲ್ಲ. ಅದು ಬೆಲೆ ಕಟ್ಟಲಾಗದ್ದು, ಯಾವುದಕ್ಕೂ ಸಮನಾಗದ್ದು. ಆದರೆ ಆನ್​ಸ್ಕ್ರೀನ್​ ಕಥೆ ಹೀಗಿರಲಿ, ರಿಯಲ್​ಸ್ಟೋರಿ ಹೇಗಿದೆ?

ನಿಜ ಜೀವನದಲ್ಲಿ ಅಮ್ಮ ಮಗನ ಸ್ಟೋರಿ ಹೇಗಿರುತ್ತೆ? ತೆರೆಯ ಮೇಲೆ ಎಲ್ಲರನ್ನೂ ಹೆದರಿಸುವ ವಿಲನ್ ತೆರೆಯ ಹಿಂದೆ ಮಗು ಮನಸಿನ ಒಬ್ಬ ಮಗ ಮಾತ್ರ. ಅಮ್ಮನ ಮಾತು ಮನಸಿಗೆ ತೆಗೆದುಕೊಂಡು ಅದನ್ನೇ ವೇದವಾಕ್ಯವಾಗಿ ಪಾಲಿಸಿದ ನಟ ಯಾರು ಗೊತ್ತಾ?

ಖ್ಯಾತ ನಟ ಸಯಾಜಿ ಶಿಂಧೆ ಅವರು ವಿಲನ್, ಪೊಲೀಸ್ ಆಗಿ ಬೇರೆ ಬೇರೆ ಪಾತ್ರಗಳನ್ನು ಮಾಡಿ ಪ್ರೇಕ್ಷಕರ ನಗಿಸಿದ ನಟ. ಈ ನಟ ತೆರೆಯ ಮೇಲಷ್ಟೇ ವಿಲನ್. ಆದರೆ ಹೆತ್ತಮ್ಮನ ಮೇಲಿನ ಪ್ರೀತಿಯಿಂದ ಇವರು ಮಾಡಿದ ಕೆಲಸ ನೋಡಿದರೆ ಇವರು ರಿಯಲ್ ಲೈಫ್ ರಾಕಿ ಭಾಯ್ ಅಂತನಿಸದೇ ಇರದು.

ನಟ ಮತ್ತು ಪರಿಸರವಾದಿ ಸಯಾಜಿ ಶಿಂಧೆ ಮಹಾರಾಷ್ಟ್ರದಲ್ಲಿ ಸ್ಥಳೀಯ ಮರಗಳನ್ನು ನೆಡಲು ಮತ್ತು ಸಂರಕ್ಷಿಸಲು ಒಂದು ಬೃಹತ್ ಪರಿಸರ ಉಪಕ್ರಮವಾದ ಸಹ್ಯಾದ್ರಿ ದೇವ್ರೈ ಆಂದೋಲನವನ್ನು ಮುನ್ನಡೆಸುತ್ತಿದ್ದಾರೆ. ಇದರ ಹಿಂದಿನ ಸ್ಟೋರಿ ನಿಮ್ಮ ಕಣ್ಣಂಚು ತೇವಗೊಳಿಸುತ್ತೆ.

ತನ್ನ ತಾಯಿಯ ನೆನಪಿಗಾಗಿ 5,000 ಮರಗಳನ್ನು ನೆಡುವ ವೈಯಕ್ತಿಕ ಪ್ರತಿಜ್ಞೆಯಾಗಿ ಪ್ರಾರಂಭವಾದ ಸಯಾಜಿ ಶಿಂಧೆ ಅವರ ಕೆಲಸ ಇಂದು ಆರೂವರೆ ಲಕ್ಷ ಮರಗಳಾಗಿ ಬೆಳೆದು ನಿಂತಿವೆ ಎಂದರೆ ಎಂಥವರೂ ಅಚ್ಚರಿಪಡುತ್ತಾರೆ. 29 ಕ್ಕೂ ಹೆಚ್ಚು ಸ್ಥಳಗಳಲ್ಲಿ ನೆಡಲಾದ 6.5 ಲಕ್ಷಕ್ಕೂ ಹೆಚ್ಚು (650,000) ಸ್ಥಳೀಯ ಮರಗಳ ಜೀವಿತಾವಧಿಯ ಪರಂಪರೆಯನ್ನು ದೊಡ್ಡದಾಗಿ ಉಳಿಇಸ ಬೆಳೆಸಿದ್ದಾರೆ ಈ ಆನ್​ಸ್ಕ್ರೀನ್ ವಿಲನ್.

ಸಹ್ಯಾದ್ರಿ ದೇವ್ರೈ ಮಿಷನ್ ಈ ಲಕ್ಷಾಂತರ ಮರಗಳನ್ನು ಬೆಳೆಸುವ ಉದ್ದೇಶ ಹೊಂದಿದೆ. ದೇವ್ರೈ (ಪವಿತ್ರ ವನಗಳು) ಇವರ ಅಮ್ಮನ ಕನಸುಗಳ ಸಾಕ್ಷಿ. ಇದು ಸಾಂಪ್ರದಾಯಿಕವಾಗಿ ಸ್ಥಳೀಯ ದೇವತೆಗಳಿಗೆ ಮೀಸಲಾಗಿರುವ ಸಂರಕ್ಷಿತ ಭೂಮಿಯ ಪ್ರದೇಶವಾಗಿದೆ.

ಶಿಂಧೆ ಅವರು ತನ್ನ ಅಮ್ಮನಿಗಾಗಿ ನಡೆಸುತ್ತಿರುವ ಅಭಿಯಾನದ ಪ್ರಮುಖ ಗಿಡ ನೆಡುವ ಕೆಲಸಗಳು ಇವುಗಳನ್ನು ಕೂಡಾ ಒಳಗೊಂಡಿವೆ. ಇವರು ಯಾವ್ಯಾವುದೋ ಮರಗಳನ್ನು ನೆಟ್ಟಿಲ್ಲ. ಪ್ರಾದೇಶಿಕ ಪರಂಪರೆ ಇರುವ ಮರಗಳನ್ನು ನೆಟ್ಟು ಬೆಳಸಿ ಉಳಿಸುತ್ತಿದ್ದಾರೆ.

ಸ್ಥಳೀಯ ಜಾತಿಯ ಮರಗಳು: ಈ ಯೋಜನೆಯು ಸ್ಥಳೀಯವಲ್ಲದ ಜಾತಿಗಳಿಗಿಂತ ಆಲದ ಮರ, ಪೀಪಲ್ ಮತ್ತು ಹುಣಸೆಹಣ್ಣಿನಂತಹ ಸ್ಥಳೀಯ ಪ್ರಭೇದಗಳನ್ನು ಕಟ್ಟುನಿಟ್ಟಾಗಿ ನೆಡುತ್ತದೆ. ಪರಿಸರ ವ್ಯವಸ್ಥೆ ಸ್ಥಳೀಯ ವನ್ಯಜೀವಿಗಳನ್ನು ಕೂಡಾ ಬೆಂಬಲಿಸಬೇಕೆಂದು ಈ ರೀತಿ ಮಾಡಲಾಗುತ್ತದೆ.

ಸಸಿ ನೆಡುವುದು ಕೇವಲ ಮೊದಲ ಹೆಜ್ಜೆ ಎಂದು ಪ್ರತಿಷ್ಠಾನವು ಒತ್ತಿಹೇಳುತ್ತದೆ. ಮರಗಳು ಸ್ವಾವಲಂಬಿಯಾಗುವವರೆಗೆ ಅವುಗಳನ್ನು ಪೋಷಿಸುವುದು ಮತ್ತು ನಿರ್ವಹಿಸುವುದರ ಮೇಲೆ ಅವರು ಹೆಚ್ಚು ಗಮನ ಹರಿಸುತ್ತಾರೆ.

ಕಾಡು ಕಟ್ಟುವ ಕನಸು

ಈ ಆಂದೋಲನವು ಸ್ಥಳೀಯ ಗ್ರಾಮಸ್ಥರನ್ನು ಒಳಗೊಂಡಿದೆ. ಮಕ್ಕಳಲ್ಲಿ ಪರಿಸರ ಜಾಗೃತಿಯನ್ನು ಬೆಳೆಸಲು ಶಾಲೆಗಳಲ್ಲಿ “ಒಬ್ಬ ವಿದ್ಯಾರ್ಥಿ, ಒಂದು ಮರ” ನಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಇದು ಪುಟ್ಟ ಮಕ್ಕಳಲ್ಲಿ ಕಾಡು ಕಟ್ಟುವ ಕನಸನ್ನು ಬಿತ್ತುತ್ತದೆ.

ಇದನ್ನೂ ಓದಿ: Krishi Tapanda: ಕೊನೆಯ ಇಂಟರ್​​ವ್ಯೂ ಎಂದ ಬೆನ್ನಲ್ಲೇ ಕೃಷಿ ತಾಪಂಡ ಪೋಸ್ಟ್

ಕೆಜಿಎಫ್​ನಲ್ಲಿ ಅಮ್ಮ ಮಗನಿಗಾಗಿ ಚಿನ್ನದ ರಾಶಿಯೇ ತಂದರೆ ಈ ಮಗ ಅಮ್ಮನಿಗಾಗಿ ಸ್ಥಳೀಯ ಮರಗಳ ಕಾಡುಗಳನ್ನೇ ನಿರ್ಮಿಸುತ್ತಾ ಹೋಗುತ್ತಿದ್ದಾರೆ. ಅಮ್ಮನಿಗಾಗಿ ಆರೂವರೆ ಲಕ್ಷ ಗಿಡ ನೆಡೋದು ಅಂದ್ರೆ ಸುಮ್ನೇನಾ? ಅಮ್ಮನ ಸೆಂಟಿಮೆಂಟ್ ನೋಡಿದರೆ ಇವರನ್ನೂ ರಿಯಲ್ ಲೈಫ್ ರಾಕಿಭಾಯ್ ಅನ್ನೋಕೆ ಅಡ್ಡಿ ಇಲ್ಲ ಅಲ್ವಾ?



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed