ಮೊದಲ ದೃಶ್ಯವೇ ಅದ್ಭುತ
ಸರಿಯಾದ ದಾರಿ ಬಿಟ್ಟು ಅಡ್ಡದಾರಿ ಹಿಡಿದರೆ ಸಾವು ಪಕ್ಕ ಅನ್ನೋದು ಇಲ್ಲಿಯೇ ತಿಳಿದು ಬಿಡುತ್ತದೆ. ಇಲ್ಲಿಂದ ಇಡೀ ಕತೆಯ ಸಂಕ್ಷಿಪ್ತ ಚಿತ್ರಣ ತೆರೆದುಕೊಳ್ಳುತ್ತದೆ. 2 ನಿಮಿಷ 28 ಸೆಕೆಂಡ್‌ನ ಈ ಟ್ರೈಲರ್ ಪ್ರಾಮಿಸಿಂಗ್ ಆಗಿದೆ.
ಗ್ರಾಮಾಯಣ ಚಿತ್ರದಲ್ಲಿ ಲೂಸ್ ಮಾದ ಯೋಗಿ ವಿಲನ್ ರೋಲ್ ಮಾಡಿದ್ದಾರೆ. ವಿನಯ್ ರಾಜ್‌ಕುಮಾರ್ ಹಾಗೂ ಲೂಸ್ ಮಾದ ಯೋಗಿ ಟಕ್ಕರ್ ಕೊಡುವ ದೃಶ್ಯಗಳು ಇಲ್ಲಿವೆ.
ಇದರ ಹೊರತಾಗಿ ಗೋಪಾಲಕೃಷ್ಣ ದೇಶಪಾಂಡೆ ಇಲ್ಲಿ ರೊಚ್ಚಿಗೆಬ್ಬಿಸುತ್ತಾರೆ. ಅರುಣ್ ಸಾಗರ್ ಒಂದೆರಡು ದೃಶ್ಯದಲ್ಲಿ ಕಾಣಿಸುತ್ತಾರೆ. ಆದರೆ ಪೊಲೀಸ್ ಅನ್ನೋದು ತಿಳಿಯುತ್ತದೆ.
ನಟಿ-ನಿರೂಪಕಿ ಅಪರ್ಣಾ ಅವರು ಇಲ್ಲಿ ಅದ್ಭುತವಾಗಿಯೇ ನಟಿಸಿದ್ದಾರೆ. ವಿನಯ್ ರಾಜ್‌ಕುಮಾರ್ ಅವರ ತಾಯಿಯ ಪಾತ್ರ ಮಾಡಿದ್ದಾರೆ. ಒಂದು ದೃಶ್ಯದಲ್ಲಿ ವಿನಯ್‌ಗೆ ಬೈಯುವುದು ಇಲ್ಲಿದೆ.
ಇದನ್ನು ಅಷ್ಟೆ ಚೆನ್ನಾಗಿಯೇ ಮಾಡಿದ್ದಾರೆ. ಮೇಘಾ ಶೆಟ್ಟಿ ಕೂಡ ಸಾಕಷ್ಟು ಇನ್ವಾಲ್ವ್ ಆಗಿದ್ದಾರೆ. ಇಲ್ಲಿ ಬರುವ ರೋಮ್ಯಾಂಟಿಕ್ ದೃಶ್ಯದಲ್ಲೂ ಮೇಘಾ ಶೆಟ್ಟಿ ಮತ್ತು ವಿನಯ್ ಕೆಮೆಸ್ಟ್ರಿ ಚೆನ್ನಾಗಿ ವರ್ಕ್ ಆಗಿದೆ ಅನಿಸುತ್ತದೆ.
ಜುಲೈ-3 ರಂದು ರಿಲೀಸ್
ಡೈರೆಕ್ಟರ್ ದೇವನೂರು ಚಂದ್ರು ಅವರು ಗ್ರಾಮ ಒಂದರ ಕತೆಯನ್ನ ಹೇಳುತ್ತಿದ್ದಾರೆ. ಆಳವಾದ ಕತೆಗೇನೆ ಇಲ್ಲಿ ಚಿತ್ರರೂಪ ಕೊಟ್ಟಿದ್ದಾರೆ.
ಗ್ರಾಮಗಳಲ್ಲಿ ಇರುವ ಎಲ್ಲ ತರದ ವಿಷಯಗಳನ್ನು ಇಲ್ಲಿ ಕಟ್ಟಿಕೊಡುತ್ತಿದ್ದಾರೆ ಅನಿಸುತ್ತದೆ. ಈ ಎಲ್ಲದಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತವೂ ಪೂರಕವಾಗಿಯೇ ಇದೆ ಅಂತಲೂ ಹೇಳಬಹುದು.
ಜುಲೈ-3 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರದ ಪ್ರಚಾರವೂ ಜೋರಾಗಿಯೇ ಇದೆ. ದೊಡ್ಡಮಟ್ಟದಲ್ಲಿಯೇ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.
ಆದರೆ, ಈ ಎಲ್ಲ ಫೈಟ್ಸ್ ಸಹಜವಾಗಿಯೇ ಇವೆ. ಸಿನಿಮ್ಯಾಟಿಕ್ ಟಚ್ ಯಾವುದಕ್ಕೂ ಇಲ್ಲ ಅಂತ ಹೇಳಬಹುದು. ಬಹುಶಃ ಈ ಚಿತ್ರ ನೋಡೋಕೆ ಕುಳಿತರೆ, ಒಂದು ಹಳ್ಳಿಯ ಇಡೀ ಕತೆ ಹೃದಯಕ್ಕೆ ಇಳಿಯುತ್ತದೆ ಅನಿಸುತ್ತದೆ.
ಗ್ರಾಮಾಯಣ ಚಿತ್ರಕ್ಕೆ ಸಂಗೀತದ ಶಕ್ತಿ ಒಂದು ರೀತಿ ಸಪೋರ್ಟ್ ಮಾಡಿದರೆ, ಚಿತ್ರದ ಕ್ಯಾಮರಾವರ್ಕ್ ಕೂಡ ಅಷ್ಟೆಇಡೀ ಗ್ರಾಮದ ದೃಶ್ಯ ಕಾವ್ಯವನ್ನು ಕಟ್ಟಿಕೊಡುತ್ತದೆ.
ಹಾಗೆ ಅಂತಹ ಅದ್ಭುತ ಕೆಲಸವನ್ನ ಇಲ್ಲಿ ಸಂತೋಷ್ ರೈ ಪಾತಾಜೆ ಮಾಡಿದ್ದಾರೆ. ಇವರ ಕೆಲಸವೂ ಇಲ್ಲಿ ಕಣ್ಮನಸೆಳೆಯುತ್ತದೆ ಅಂತಲೂ ಹೇಳಬಹುದು.












