Last Updated:
ಉತ್ತರ ಪ್ರದೇಶದ ಮಥುರಾದಲ್ಲಿ ಪ್ರೀತಿ ಚೌಧರಿ, 85 ವರ್ಷದ ಅತ್ತೆ ಚಂದ್ರೋ ದೇವಿಯವರ 84 ಕೋಸಿ ಪರಿಕ್ರಮ ಕನಸಿಗಾಗಿ ಅವರನ್ನು ಟಬ್ ನಲ್ಲಿ ಹೊತ್ತು ವೃಂದಾವನ ದರ್ಶನ ಮಾಡಿಸಿ ನೆಟ್ಟಿಗರ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ಅತ್ತೆ-ಸೊಸೆ ಸಂಬಂಧ ಎಂದರೇ ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ (Daughter in law and Mother in law Relationship) ಅತ್ಯಂತ ಸೂಕ್ಷ್ಮವಾದ ಹಾಗೂ ಪ್ರಮುಖವಾದ ಸಂಬಂಧವಾಗಿದೆ. ಸರಿಯಾದ ತಿಳುವಳಿಕೆ ಹಾಗು ಹೊಂದಾಣಿಕೆ ಇದ್ದರೆ ಈ ಸಂಬಂಧ ತಾಯಿ-ಮಗಳ (Mother and Daughter) ಬಾಂಧವ್ಯಕ್ಕಿಂತ ಮಿಗಿಲಾಗಿರುತ್ತದೆ. ಇದಕ್ಕೆ ಉದಾಹರಣೆಯಾಗಿ ಉತ್ತರ ಪ್ರದೇಶದ (Uttara Pradesh) ಮಥುರಾದಲ್ಲಿ ಮಹತ್ವದ ಘಟನೆ ಸಾಕ್ಷಿಯಾಗಿದೆ.
ಹೌದು, ಪ್ರೀತಿ ಚೌಧರಿ ಎಂಬ ಮಹಿಳೆ ತಮ್ಮ 85 ವರ್ಷದ ವೃದ್ಧ ಸಾಸು ಚಂದ್ರೋ ದೇವಿಯವರ ಬಹುದಿನ ಕನಸನ್ನು ನನಸು ಮಾಡಲು ಮಹತ್ವದ ನಿರ್ಧಾರ ಕೈಗೊಂಡಿದ್ದರು. ಅತ್ತೆ ಬಹುದಿನ ಕನಸು ನನಸು ಮಾಡಲು ಸೊಸೆ ಮಾಡಿದ ಕಾರ್ಯವನ್ನು ಕಂಡು ಎಲ್ಲರ ಮನಸ್ಸು ತುಂಬಿ ಹೋಗಿತ್ತು. ಅಂದಹಾಗೇ, ಅತ್ತೆ ಕನಸು ಏನು, ಇದಕ್ಕಾಗಿ ಸೊಸೆ ಮಾಡಿದ್ದೇನು ಅಂತ ನೋಡುವುದಾದರೆ..
ಕೋಸಿ ಕಲಾಂ ನಿವಾಸಿಯಾಗಿದ್ದ ಪ್ರೀತಿ ಚೌಧರಿ ಅವರು ತಮ್ಮ ಅತ್ತೆಯವರಾದ ಚಂದ್ರೋ ದೇವಿಯವನ್ನು ಟಬ್ ನಲ್ಲಿ ಕುಳ್ಳಿರಿಸಿಕೊಂಡು ತಲೆಯ ಮೇಲೆ ಹೊತ್ತು ಕೊಂಡು ವೃಂದಾವನದ ದರ್ಶನ ಮಾಡಿಸಿದ್ದಾರೆ. ಚಂದ್ರೋ ದೇವಿ ಅವರಿಗೆ ವಯಸ್ಸಾಗಿದ್ದ ಅವರಿಗೆ ವೃಂದಾವನದ ದರ್ಶನ ಮಾಡಿಕೊಳ್ಳಲು ಆಗಿರಲಿಲ್ಲ. ಈ ಬಗ್ಗೆ ಗೊತ್ತಾಗುತ್ತಿದ್ದಂತೆ ಪ್ರೀತಿ ಚೌಧರಿ ಮಹತ್ವ ನಿರ್ಧಾರ ಕೈಗೊಂಡಿದ್ದರು. ಅತ್ತೆಯನ್ನು ಟಬ್ ನಲ್ಲಿ ಕುರಿಸಿಕೊಂಡು ಬಂದ ಸೊಸೆ ಬರುವ ದೃಶ್ಯ ನೋಡಿ ಜನರು ಭಾವುಕರಾಗಿದ್ದರು.
ಅಂದಹಾಗೇ, 84 ಕೋಸಿ ಪರಿಕ್ರಮ ಪ್ರಯಾಣ ತುಂಬಾ ದೀರ್ಘ ಮತ್ತು ಕಷ್ಟಕರ ಪ್ರಯಾಣ. ಆದರೂ ಅತ್ತೆಯನ್ನು ತಲೆಯ ಮೇಲೆ ಹೊತ್ತುಕೊಂಡು ನಡೆಯುವುದು ಕೂಡ ಮತ್ತಷ್ಟು ಕಷ್ಟದ ಕೆಲಸ. ಆದರೂ ಪ್ರೀತಿಯಿಂದ ಸೊಸೆ, ಅತ್ತೆಯ ಕನಸನ್ನು ಈಡೇರಿಸಿರುವ ಸಂಕಲ್ಪ ಅವರಿಗೆ ಬಲವಾದ ಶಕ್ತಿಯನ್ನು ನೀಡಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸೊಸೆಯ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ವೃದ್ಧರನ್ನು ಅನಾಥರಂತೆ ಕೈ ಬಿಡುತ್ತಿರುವ ಇಂತಹ ಸಮಾಜದಲ್ಲಿ ಪ್ರೀತಿ ಚೌಧರಿ ಮಹತ್ವದ ಹಾಗು ಬಲವಾದ ಸಂದೇಶವನ್ನು ನೀಡಿದ್ದಾರೆ ಎಂದು ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇನ್ನು, ವೃಂದಾವನ ಮಥುರಾ ಪ್ರದೇಶದ 84 ಕೋಸಿ ಪರಿಕ್ರಮ ಯಾತ್ರೆ ಹಿಂದೂ ಧರ್ಮದ ಅತ್ಯಂತ ಪವಿತ್ರಾ ಯಾತ್ರೆಗಳಲ್ಲಿ ಒಂದಾಗಿದೆ. ಇದು ಸುಮಾರು 252 ಕಿಲೋ ಮೀಟರ್ ದೂರ ಅಂದರೆ ಒಂದು ಕೋಸಿಗೆ 3 ಕಿಲೋ ಮೀಟರ್ ದೂರ ಹೊಂದಿದೆ. ಬ್ರಜ ಭೂಮಿ ಅದರೆ ಶ್ರೀಕೃಷ್ಣ ತನ್ನ ಬಾಲ್ ಮತ್ತು ಲೀಲೆಗಳನ್ನು ತೋರಿದ ಪ್ರದೇಶ ಎಂಬ ಪುರಾಣ ಹಿನ್ನೆಲೆಯನ್ನು ಹೊಂದಿದೆ. ಈ 84 ಕೋಸಿಗಳ ಪ್ರದಕ್ಷಿಣೆ ಪೂರ್ಣಗೊಳಿಸಿದರೆ ಪಾಪಗಳು ನಾಶವಾಗಿ, ಮೋಕ್ಷಿ ಪ್ರಾಪ್ತಿಯಾಗುತ್ತದೆ ಎಂದು ಭಕ್ತರು ನಂಬುತ್ತಾರೆ.













